Google Photos: ಗೂಗಲ್‌ನ ಅತ್ಯುತ್ತಮ ಮತ್ತು ಸುರಕ್ಷಿತ ಅಪ್ಲಿಕೇಶನ್‌ಗಳಲ್ಲಿ ಗೂಗಲ್ ಫೋಟೋಸ್‌ ಕೂಡ ಒಂದು. ಇದು ಫೋಟೋಗಳನ್ನು ಸಂಗ್ರಹಿಸುವ ಸುಲಭ ಮತ್ತು ಸುರಕ್ಷಿತ ವೇದಿಕೆಯಾಗಿದೆ. ಗೂಗಲ್ ಫೋಟೋಸ್‌ನಲ್ಲಿ ಫೋಟೋಗಳನ್ನು ಸಂಗ್ರಹಿಸುವುದರಿಂದ ಒಂದೊಮ್ಮೆ ನಾವು ನಮ್ಮ ಸ್ಮಾರ್ಟ್‌ಫೋನ್‌ ಬದಲಾಯಿಸಿದರೂ ಕೂಡ ಫೋಟೋಗಳು ನಮ್ಮ ಗೂಗಲ್ ಲಿಂಕ್ ಮೂಲಕ ಗೂಗಲ್ ಫೋಟೋಸ್‌ನಲ್ಲಿ ಸೇವ್ ಆಗಿರುತ್ತದೆ. ಆದಾಗ್ಯೂ, ಕೆಲವೊಮ್ಮೆ ಮಿಸ್ ಆಗಿ ಗೂಗಲ್ ಫೋಟೋಸ್‌ನಲ್ಲಿ ನಿಮ್ಮ ಫೋಟೋಗಳು ಡಿಲೀಟ್ ಆಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ವಿಧಾನಗಳನ್ನು ಅನುಸರಿಸಿ ನಿಮ್ಮ ಫೋಟೋಸ್‌ಗಳನ್ನು ಮರಳಿ ಪಡೆಯಬಹುದು. 


COMMERCIAL BREAK
SCROLL TO CONTINUE READING

ಹೌದು, ಗೂಗಲ್ ಫೋಟೋಸ್ ಅಪ್ಲಿಕೇಶನ್‌ನಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಡಿಲೀಟ್ ಆಗಿರುವ ಫೋಟೋಗಳನ್ನು ಕೂಡ  ಮತ್ತೆ ಪಡೆಯಬಹುದು. ಹಾಗಿದ್ದರೆ, ಗೂಗಲ್ ಫೋಟೋಗಳಿಂದ ಚಿತ್ರಗಳನ್ನು ಮರುಪಡೆಯುವುದು ಹೇಗೆ ಎಂದು ನೋಡೋಣ... 


ಇದನ್ನೂ ಓದಿ- WhatsApp Scam: ಹೂಡಿಕೆ ಮಾಡಿ ಹಠಾತ್ ಶ್ರೀಮಂತರಾಗುರಿವಿರಿ... ನೀವು ಇಂತಹ ಮೆಸೇಜ್ ಸ್ವೀಕರಿಸಿದ್ದರೆ ಹುಷಾರಾಗಿರಿ...!


ಗೂಗಲ್ ಫೋಟೋಸ್‌ನಲ್ಲಿ ಡಿಲೀಟ್ ಆಗಿರುವ ಫೋಟೋಗಳನ್ನು ಮರುಪಡೆಯುವುದು ಹೇಗೆ? 
ವಾಸ್ತವವಾಗಿ, ಗೂಗಲ್ ಫೋಟೋಸ್‌ನಿಂದ ಡಿಲೀಟ್ ಆಗಿರುವ ಫೋಟೋಗಳು  ಅನುಪಯುಕ್ತ ಬಿನ್‌ನಲ್ಲಿ (Trash Bin) ಸಂಗ್ರಹವಾಗಿರುತ್ತವೆ.  ಇಲ್ಲಿಂದ ನೀವು ಫೋಟೋಗಳನ್ನು ಸುಲಭವಾಗಿ ಮರಳಿ ಪಡೆಯಬಹುದಾಗಿದೆ.  ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:-


ಹಂತ 1:- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಫೋಟೋಸ್ ಅಪ್ಲಿಕೇಶನ್ ತೆರೆಯಿರಿ. 


ಹಂತ 2:- ಲೈಬ್ರರಿ ಆಯ್ಕೆಯನ್ನು ಆರಿಸಿ. 


ಹಂತ 3:- ಇಲ್ಲಿ ನೀವು ಅನುಪಯುಕ್ತ ಬಿನ್ (Trash Bin) ಆಯ್ಕೆಯನ್ನು ಕಾಣಬಹುದು. 


ಹಂತ 4:- ಇದರಲ್ಲಿ ನೀವು ಡಿಲೀಟ್ ಆಗಿರುವ ಫೋಟೋಗಳನ್ನು ಕಾಣಬಹುದು. 


ಹಂತ 5:- ಇದರಲ್ಲಿ ನೀವು ಮರಳಿ ಪಡೆಯಲು ಬಯಸುವ ಫೋಟೋಗಳ ಮೇಲೆ ದೀರ್ಘವಾಗಿ ಒತ್ತಿ ಹಿಡಿಯಿರಿ. 


ಹಂತ 6:- ಇದರ ನಂತರ ರಿಸ್ಟೋರ್ (Restore) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


ಹಂತ 7:- ಈ ರೀತಿಯಾಗಿ ನೀವು ಗೂಗಲ್ ಫೋಟೋಸ್‌ನಲ್ಲಿ ಡಿಲೀಟ್ ಆಗಿರುವ ಫೋಟೋವನ್ನು ಸುಲಭವಾಗಿ ಮರಳಿ ಪಡೆಯಬಹುದಾಗಿದೆ. 


ಇದನ್ನೂ ಓದಿ- UPI ಬಳಕೆದಾರರಿಗೆ ಶಾಕ್! ಇನ್ನು ಮುಂದೆ ವಹಿವಾಟಿನ ಮೇಲೆ ನೀಡಬೇಕಾಗುತ್ತದೆ ಹೆಚ್ಚಿನ ಶುಲ್ಕ !


ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಡಿಲೀಟ್ ಆಗಿರುವ ಫೋಟೋಗಳು 60 ದಿನಗಳವರೆಗೆ ಮಾತ್ರ ಗೂಗಲ್ ಫೋಟೋಸ್‌ನ ಅನುಪಯುಕ್ತ ಬಿನ್‌ನಲ್ಲಿ ಉಳಿಯುತ್ತವೆ. ಬಳಿಕ ಈ ಫೋಟೋಗಳು ಟ್ರ್ಯಾಷ್ ಬಿನ್‌ನಿಂದ ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತವೆ. ಒಂದೊಮ್ಮೆ ಭವಿಷ್ಯದಲ್ಲಿ ನಿಮ್ಮ ಪ್ರಮುಖ ಫೋಟೋಗಳು ಈ ರೀತಿ ಡಿಲೀಟ್ ಆಗಬಾರದು ಎಂದು ನೀವು ಬಯಸಿದರೆ, ಈ ಸಲಹೆಗಳನ್ನು ಅನುಸರಿಸಿ.


* ಸ್ವಯಂಚಾಲಿತ ಬ್ಯಾಕಪ್
ಗೂಗಲ್ ಫೋಟೋಸ್ ಅಪ್ಲಿಕೇಶನ್‌ನಲ್ಲಿ ಸ್ವಯಂಚಾಲಿತ ಬ್ಯಾಕಪ್ ವೈಶಿಷ್ಟ್ಯ ಲಭ್ಯವಿದ್ದು, ಈ ಆಯ್ಕೆಯನ್ನು ಆರಿಸಿ. ಈ ವೈಶಿಷ್ಟ್ಯವು ಸ್ವಯಂಚಾಲಿತವಾಗಿ ಪ್ರತಿ ತಿಂಗಳು ಫೋಟೋಗಳ ಬ್ಯಾಕಪ್  ರಚಿಸುತ್ತದೆ. ಅದು ಸ್ವಯಂಚಾಲಿತವಾಗಿ ಸಂಗ್ರಹಣೆಯಲ್ಲಿ ಸೇವ್ ಆಗುತ್ತದೆ. ಇದರೊಂದಿಗೆ, ಗೂಗಲ್ ಫೋಟೋಗಳ ಅನುಪಯುಕ್ತ ಬಿನ್‌ನಿಂದ ಅಳಿಸಿದ ನಂತರವೂ ನೀವು ಚಿತ್ರವನ್ನು ಸಂಗ್ರಹಣೆಯಿಂದ ಮರುಪಡೆಯಬಹುದಾಗಿದೆ. 


* ಫೋಟೋಗಳನ್ನು ಪ್ರತ್ಯೇಕ ಡ್ರೈವ್‌ನಲ್ಲಿ ಸಂಗ್ರಹಿಸುವುದು: 
ಗೂಗಲ್ ಫೋಟೋಸ್ ಹೊರತುಪಡಿಸಿ ನೀವು ಹಾರ್ಡ್ ಡ್ರೈವ್‌ನಲ್ಲಿಯೂ ಸಹ ನಿಮ್ಮ ಪ್ರಮುಖ ಫೋಟೋಗಳು ಮತ್ತು ವೀಡಿಯೊಗಳನ್ನು ನೀವು ಸೇವ್ ಮಾಡಬಹುದು. ಈ ರೀತಿ ಮಾಡುವುದರಿಂದ ಗೂಗಲ್ ಫೋಟೋಸ್‌ನಲ್ಲಿ ಫೋಟೋಗಳು ಡಿಲೀಟ್ ಆದರೂ ಸಹ  ಅದು ಹಾರ್ಡ್ ಡ್ರೈವ್‌ನಲ್ಲಿ ಸುರಕ್ಷಿತವಾಗಿ ಸೇವ್ ಆಗಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.