EPFO Online Withdrawal : ಭವಿಷ್ಯ ನಿಧಿ (PF) ಎಂದರೆ ಉದ್ಯೋಗಿಗಳ ಮಾಸಿಕ ವೇತನದ ಆಧಾರದ ಮೇಲೆ ಮಾಡಲಾಗುವ ಒಂದು ಪ್ರಮುಖ ಉಳಿತಾಯ ಯೋಜನೆ. ಇದು ದೀರ್ಘಾವಧಿಯಲ್ಲಿ ಉದ್ಯೋಗಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಅಥವಾ ನಿವೃತ್ತಿಯ ನಂತರ ಒಂದು ನಿರ್ದಿಷ್ಟ ಆದಾಯ ಒದಗಿಸುತ್ತದೆ ಎನ್ನಬಹುದು. 


COMMERCIAL BREAK
SCROLL TO CONTINUE READING

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಭವಿಷ್ಯ ನಿಧಿ (PF) ಖಾತೆಯನ್ನು ನಿರ್ವಹಿಸುತ್ತದೆ. ಇದರಲ್ಲಿ, ಉದ್ಯೋಗಿಯ ವೇತನದ ಒಂದು ಭಾಗವನ್ನು ಪ್ರತಿ ತಿಂಗಳು ಠೇವಣಿ ಮಾಡಲಾಗುತ್ತದೆ. ನಿಯಮದ ಪ್ರಕಾರ ಉದ್ಯೋಗಿಯ ವೇತನ ಮಾತ್ರವಲ್ಲದೆ ಉದ್ಯೋಗದಾತ ಕೂಡಾ ಅಷ್ಟೇ ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಬೇಕು. 


ಇದನ್ನೂ ಓದಿ : ಇಪಿಎಫ್ ಖಾತೆ ಇದ್ದರೆ ಸಿಗಲಿದೆ ಈ 7 ಪ್ರಯೋಜನಗಳು ! ಬಹುತೇಕರಿಗೆ ತಿಳಿದಿರದ ಮಾಹಿತಿ ಇದು


ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ನಿವೃತ್ತಿಯ ನಂತರವೇ   ಹಿಂಪಡೆಯಬೇಕು ಎನ್ನುವ ನಿಯಮ ಇಲ್ಲ. ನಿಮ್ಮ ತುರ್ತು ಅಗತ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ನೀವು ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಅಂದರೆ, ನಿವೃತ್ತಿಗೂ ಮೊದಲು ತನ್ನ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವುದು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಖಾತೆಯಿಂದ ಹಣವನ್ನು ಹಿಂಪಡೆಯುವ ಪ್ರಕ್ರಿಯೆಯು ಇನ್ನಷ್ಟು ಸುಲಭವಾಗಿದೆ. ಯಾವುದೇ ಉದ್ಯೋಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಕೆಲಸ ಮಾಡಿ ಮುಗಿಸಬಹುದು. ಅದಕ್ಕಾಗಿ ಈ ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ. 


 ಪಿಎಫ್ ಹಣ ಹಿಂಪಡೆಯುವ ವಿಧಾನ ಇಲ್ಲಿದೆ : 
- EPFO ​​ಅಧಿಕೃತ ವೆಬ್‌ಸೈಟ್ epfindia.gov.inಗೆ ಹೋಗಿ.  
- ನಿಮ್ಮ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಸ್ಕ್ರೀನ್ ಮೇಲೆ  ಕಾಣಿಸುವ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಿ.
- ಇದರ ನಂತರ ಆನ್‌ಲೈನ್ ಸೇವಾ ಆಯ್ಕೆಯ ಅಡಿಯಲ್ಲಿ 'ಕ್ಲೈಮ್ (ಫಾರ್ಮ್-31, 19, 10C ಮತ್ತು 10D)' ಕ್ಲಿಕ್ ಮಾಡಿ.
- ಇಲ್ಲಿಂದ  ಹೊಸ ಟ್ಯಾಬ್‌ ತೆರೆದುಕೊಳ್ಳುತ್ತದೆ. 
- ಅಲ್ಲಿ UANನೊಂದಿಗೆ ಲಿಂಕ್ ಮಾಡಲಾದ ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು 'Verify ಮೇಲೆ ಕ್ಲಿಕ್ ಮಾಡಿ.
- ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದ ನಂತರ, EPFO ನ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು.
- ಇದರ ನಂತರ, ''Proceed For Online Claim' ಅನ್ನು ಕ್ಲಿಕ್ ಮಾಡಿ.
- ಡ್ರಾಪ್-ಡೌನ್ ಮೆನುವಿನಲ್ಲಿ, ನಿಮ್ಮ ಇಪಿಎಫ್ ಖಾತೆಯಿಂದ ಹಿಂಪಡೆಯಲು  ಅರ್ಜಿ ಸಲ್ಲಿಸುವ ಕಾರಣವನ್ನು ಆಯ್ಕೆ ಮಾಡಬೇಕು. ನೀವು ಅರ್ಹರಾಗಿರುವ ಆಯ್ಕೆಗಳನ್ನು ಮಾತ್ರ ನಿಮಗೆ ತೋರಿಸಲಾಗುತ್ತದೆ.
-ಹಣ ಹಿಂಪಡೆಯುವ ಕಾರಣವನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಪೂರ್ಣ ವಿಳಾಸ, ಚೆಕ್ ಅಥವಾ ಪಾಸ್‌ಬುಕ್ ವಿವರಗಳನ್ನು ನಮೂದಿಸಬೇಕು ಮತ್ತು ನೀವು 'Advance Claim ಆಯ್ಕೆಯನ್ನು ಆರಿಸಿದ್ದರೆ, ನೀವು ಒನ್ ಟೈಮ್ ಪಾಸ್‌ವರ್ಡ್ (OTP) ಅನ್ನು ನಮೂದಿಸಬೇಕು. 
- ವಿವರಗಳನ್ನು ದೃಢೀಕರಿಸಿದ ನಂತರ ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡ ನಂತರ, OTP ಗಾಗಿ ರಿಕ್ವೆಸ್ಟ್ ಮಾಡಬೇಕಾಗುತ್ತದೆ.   ಈ ಒಟಿಪಿ  ನಿಮ್ಮ ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ, ಕ್ಲೈಮ್ ಸಬ್ಮಿಟ್ ಆಗುತ್ತದೆ.


ಇದನ್ನೂ ಓದಿ : BPL, APL ಕಾರ್ಡ್ ದಾರರಿಗೆ ಗುಡ್ ನ್ಯೂಸ್ : ಇಂದಿನಿಂದಲೇ ಈ ಅವಕಾಶ ನೀಡಿದ ಸರ್ಕಾರ


ನಿಮ್ಮ ಕ್ಲೈಮ್ ಅನ್ನು ನೀವು ಟ್ರ್ಯಾಕ್ ಮಾಡಬಹುದು : 
 ಕ್ಲೈಂ ಮಾಡಿದ ನಂತರ, ಅದರ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ ನೀವು ಇ-ಸೇವಾ ಸೈಟ್‌ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗಬೇಕು. EPFO ಪ್ರಕಾರ, ಯಾವುದೇ ಕ್ಲೈಮ್ ಅನ್ನು ಇತ್ಯರ್ಥಗೊಳಿಸಲು ಅಥವಾ PF ಮೊತ್ತವನ್ನು ಪಡೆಯಲು ಸಾಮಾನ್ಯವಾಗಿ 20 ದಿನಗಳನ್ನು ತೆಗೆದುಕೊಳ್ಳುತ್ತದೆ. 20 ದಿನಗಳಲ್ಲಿ  ಹಣ ಬಾರದೇ ಹೋದರೆ ಪ್ರಾದೇಶಿಕ PF ಕಮಿಷನರ್ ಅನ್ನು ಸಂಪರ್ಕಿಸಬಹುದು. ಇದಲ್ಲದೆ, ನೀವು  ವೆಬ್‌ಸೈಟ್‌ನಲ್ಲಿಯೂ ದೂರು ನೀಡಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.