Alto, Wagon R ಮೇಲೆ ಭಾರೀ ರಿಯಾಯಿತಿ ! Celerio ಮೇಲೆ ಕೂಡಾ ದೊಡ್ಡ ಡಿಸ್ಕೌಂಟ್ !
Discount on Maruti Cars : ಮಾರ್ಚ್ ತಿಂಗಳಿನಲ್ಲಿ, ಮಾರುತಿ ಸುಜುಕಿ ತನ್ನ ಹಲವು ಮಾದರಿಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿದೆ.
Maruti Discount Offers : ಇನ್ನೆರಡು ದಿನಗಳಲ್ಲಿ ಆರ್ಥಿಕ ವರ್ಷವು ಕೊನೆಗೊಳ್ಳಲಿದೆ. ಹೊಸ ಹಣಕಾಸು ವರ್ಷ ಏಪ್ರಿಲ್ ನಿಂದ ಆರಂಭವಾಗಲಿದೆ. ಹೊಸ ಹಣಕಾಸು ವರ್ಷದಲ್ಲಿ,ಅನೇಕ ಕಾರು ಕಂಪನಿಗಳು ತಮ್ಮ ಕಾರುಗಳ ಬೆಲೆಗಳನ್ನು ಹೆಚ್ಚಿಸಲಿವೆ. ಆದರೆ, ಇದಕ್ಕೂ ಮೊದಲು, ಮಾರ್ಚ್ ತಿಂಗಳಿನಲ್ಲಿ, ಮಾರುತಿ ಸುಜುಕಿ ತನ್ನ ಹಲವು ಮಾದರಿಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ.
ಅರೆನಾ ಡೀಲರ್‌ಶಿಪ್ ಅಡಿಯಲ್ಲಿ ಮಾರಾಟವಾಗುವ ಕೆಲವು ಮಾರುತಿ ಕಾರುಗಳ ಮೇಲೆ 67000 ರೂ.ವರೆಗೆ ರಿಯಾಯಿತಿ ನೀಡುತ್ತಿವೆ. ಇವುಗಳಲ್ಲಿ ಆಲ್ಟೊ, ವ್ಯಾಗನ್ಆರ್, ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊ ಸೇರಿವೆ.ಮಾರುತಿ ಸುಜುಕಿ ತನ್ನ ಆಲ್ಟೊ K10 ಮೇಲೆ 67000 ರೂ. ಎಸ್-ಪ್ರೆಸ್ಸೊ ಮೇಲೆ 66000 ರೂ. ವ್ಯಾಗನ್ ಆರ್ ಮೇಲೆ 66000 ರೂ. ಮತ್ತು ಸೆಲೆರಿಯೊ ಮೇಲೆ 61000 ರೂ ಉಳಿತಾಯ ಮಾಡುವ ಅವಕಾಶ ನೀಡುತ್ತಿದೆ.ಈ ಕೊಡುಗೆಗಳು ಮಾರ್ಚ್ ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ.
ಇದನ್ನೂ ಓದಿ : Youtube: ನಾಲ್ಕರಲ್ಲಿ ಒಬ್ಬ ಯೂಟ್ಯೂಬ್ ರಚನೆಕಾರರು ಗಳಿಸುತ್ತಿದ್ದಾರೆ ಲಕ್ಷ-ಲಕ್ಷ ಹಣ! ಕಂಪನಿ ಹೇಳಿದ್ದೇನು?
ನಗದು ರಿಯಾಯಿತಿಯ ಜೊತೆಗೆ, ಈ ಕೊಡುಗೆಗಳು ಕಾರ್ಪೊರೇಟ್ ರಿಯಾಯಿತಿ ಅಥವಾ ವಿನಿಮಯ ಬೋನಸ್ ಮುಂತಾದ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇದರ ಹೊರತಾಗಿ, ಡೀಲರ್‌ಶಿಪ್ ಮತ್ತು ನಗರವನ್ನು ಅವಲಂಬಿಸಿ ರಿಯಾಯಿತಿ ಕೊಡುಗೆಗಳು ಬದಲಾಗಬಹುದು.ಆದ್ದರಿಂದ, ಕಾರನ್ನು ಖರೀದಿಸುವ ಮೊದಲು ಡೀಲರ್‌ಶಿಪ್‌ನಿಂದ ರಿಯಾಯಿತಿ ಕೊಡುಗೆಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಹಲವಾರು ತಿಂಗಳುಗಳಲ್ಲಿ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಮಾರಾಟದ ವಿಚಾರದಲ್ಲಿ ಆಲ್ಟೊ ಕೂಡಾ ಉತ್ತಮವಾಗಿದೆ. ಆದರೆ, ಎಸ್-ಪ್ರೆಸ್ಸೊ ಮತ್ತು ಸೆಲೆರಿಯೊ ಮಾರಾಟ ಮಾತ್ರ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಇದು ಸಾಮಾನ್ಯವಾಗಿ ಮಾರಾಟದ ವಿಷಯದಲ್ಲಿ ಟಾಪ್-20 ಕಾರುಗಳ ಪೈಕಿ ಬರುವುದಿಲ್ಲ.
ಇದನ್ನೂ ಓದಿ : ಫೇಸ್‌ಬುಕ್‌ನಲ್ಲಿ ವೀಕ್ಷಣೆ ಇತಿಹಾಸವನ್ನು ಡಿಲೀಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ
ವ್ಯಾಗನ್ ಆರ್ ಬೆಲೆ 5.54 ಲಕ್ಷದಿಂದ 7.38 ಲಕ್ಷ, ಸೆಲೆರಿಯೊ ಬೆಲೆ 5.37 ಲಕ್ಷದಿಂದ 7.09 ಲಕ್ಷ, ಎಸ್-ಪ್ರೆಸ್ಸೋ ಬೆಲೆ 4.26 ಲಕ್ಷದಿಂದ 6.12 ಲಕ್ಷ ಮತ್ತು ಆಲ್ಟೊ ಕೆ10 ಬೆಲೆ 3.99 ಲಕ್ಷದಿಂದ 5.96 ಲಕ್ಷ. ದವರೆಗೆ ಇರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.