Amazon Great Indian Festival Sale: ನೀವು ಅಗ್ಗದ ದರದಲ್ಲಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ನೀಡುತ್ತಿದೆ ಬಂಪರ್ ಅವಕಾಶ. ಅಮೆಜಾನ್ ಪ್ರೈಮ್ ಸದಸ್ಯರಿಗೆ ಈಗಾಗಲೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭವಾಗಿದ್ದು ಈ ಸೇಲ್ನಲ್ಲಿ 15 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಅದ್ಭುತ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಬಂಪರ್ ಡಿಸ್ಕೌಂಟ್: 
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಆಯ್ದ ಬ್ಯಾಂಕ್‌ಗಳ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಿಗೆ ರಿಯಾಯಿತಿ ನೀಡಲಾಗುವುದು. ಇದಲ್ಲದೆ, ವಿನಿಮಯ ಬೋನಸ್, ನೋ ಕಾಸ್ಟ್ EMI ನಲ್ಲಿ ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ಸೇಲ್ ನಲ್ಲಿ ಯಾವ ಸ್ಮಾರ್ಟ್‌ಫೋನ್‌ ಎಷ್ಟು ರಿಯಾಯಿತಿಯಲ್ಲಿ ಸಿಗಲಿದೆ ಎಂದು ನೋಡುವುದಾದರೆ... 


iQOO Z9x 5G: 
120Hz ರಿಫ್ರೆಶ್ ದರದೊಂದಿಗೆ ಡಿಸ್‌ಪ್ಲೇ ಹೊಂದಿರುವ iQOO Z9x 5G ಸ್ಮಾರ್ಟ್‌ಫೋನ್‌ 4nm Snapdragon 6 Gen 1 ಪ್ರೊಸೆಸರ್ ಮತ್ತು 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಆಂಡ್ರಾಯ್ಡ್ 14 ಆಧಾರಿತ Funtouch OS 14 ನಲ್ಲಿ ಕಾರ್ಯನಿರ್ವಹಿಸುವಾಯಿಯಿ ಸ್ಮಾರ್ಟ್‌ಫೋನ್‌ IP64 ರೇಟಿಂಗ್ ಅನ್ನು ಪಡೆಯುತ್ತದೆ. ಇದರಲ್ಲಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ನೀಡಲಾಗಿದೆ. ಇದರ ಬೆಲೆ 12,998 ರೂ.ನಿಂದ ಪ್ರಾರಂಭವಾಗುತ್ತದೆ. ಅಮೆಜಾನ್ ಮಾರಾಟದಲ್ಲಿ ಈ ಫೋನ್ ಅನ್ನು 10,749 ರೂ.ಗಳಿಗೆ ಖರೀದಿಸಬಹುದು. 


ಇದನ್ನೂ ಓದಿ- ಬಿ‌ಎಸ್‌ಎನ್‌ಎಲ್ ಹೊಸ ಪ್ಲಾನ್: ಸಿಗುತ್ತೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ, ಅನ್ಲಿಮಿಟೆಡ್ ಕಾಲ್ ಜೊತೆ ಇಷ್ಟೆಲ್ಲಾ ಲಾಭ! 


Realme 70x 5G: 
ರಿಯಲ್ ಮೀ ಕಂಪನಿಯ Realme 70x 5G ಸ್ಮಾರ್ಟ್‌ಫೋನ್‌ 6GB RAM ಜೊತೆಗೆ 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. 45W SUPERVOOC ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್ ದರದೊಂದಿಗೆ ಡಿಸ್‌ಪ್ಲೇಯನ್ನು ಹೊಂದಿದೆ. ಫೋನ್ MediaTek Dimensity 6100+ ಪ್ರೊಸೆಸರ್ ಹೊಂದಿದೆ.   IP54 ರೇಟಿಂಗ್‌ನೊಂದಿಗೆ ಬರುವ ಈ ಸ್ಮಾರ್ಟ್‌ಫೋನ್‌ನ ಬೆಲೆ 13,498 ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ, ಅಮೆಜಾನ್ ಸೇಲ್ನಲ್ಲಿ ಇದನ್ನು 11,249 ರೂ.ಗೆ ನಿಮ್ಮದಾಗಿಸಬಹುದು. 


ಇದನ್ನೂ ಓದಿ- ನಿಮ್ಮ ಮೊಬೈಲ್ ನಲ್ಲಿ ಈ ಎರಡು 2 App ಇದ್ದರೆ ತಕ್ಷಣ ಡಿಲೀಟ್ ಮಾಡಿ ! ಇಲ್ಲವಾದರೆ ಖಾತೆಗೆ ಬೀಳುವುದು ಕನ್ನ 


Samsung Galaxy M35 5G: 
ನೀವು ಸ್ಯಾಮ್ಸಂಗ್ ಕಂಪನಿಯ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ 8GB RAM ಜೊತೆಗೆ 256GB ಸಂಗ್ರಹವನ್ನು ಹೊಂದಿರುವ Samsung Galaxy M35 5G ಫೋನ್ ನಲ್ಲಿ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. 6.6 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಫೋನ್‌ನಲ್ಲಿ ಹ್ಯಾಂಡ್ಸೆಟ್ Exynos 1380 ಪ್ರೊಸೆಸರ್,  50MP ಮುಖ್ಯ ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 6000mAh ಬ್ಯಾಟರಿ ಸಾಮರ್ಥ್ಯದ ಈ ಫೋನ್ 25W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಫೋನ್‌ನ ಬೆಲೆ 19,999 ರೂ.ನಿಂದ ಪ್ರಾರಂಭವಾಗುತ್ತದೆ. ಆದಾಗ್ಯೂ, ಅಮೆಜಾನ್ ಸೇಲ್ನಲ್ಲಿ ಈ ಫೋನ್ ಅನ್ನು 13,749 ಕ್ಕೆ ಖರೀದಿಸಲು ಅವಕಾಶವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.