Discount Offers On Popular Cars : ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಮತ್ತು MY2023 ಸ್ಟಾಕ್  ಕ್ಲಿಯರ್ ಮಾಡುವ ಉದ್ದೇಶದಿಂದ ಕಾರು ಕಂಪನಿಗಳು ತಮ್ಮ ಕೆಲವು ಮಾದರಿಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿವೆ. ಇವುಗಳಲ್ಲಿ SUVಗಳೂ ಸೇರಿವೆ. ಫೆಬ್ರವರಿ 2024 ರಲ್ಲಿ ಮಹೀಂದ್ರಾ ತನ್ನ XUV300 ಮತ್ತು XUV400 ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಇಷ್ಟೇ ಅಲ್ಲ, ಮಾರುತಿ ನೆಕ್ಸಾ ಮತ್ತು ಅರೇನಾ ಕಾರುಗಳ ಮೇಲೆ 1.50 ಲಕ್ಷದವರೆಗೆ ರಿಯಾಯಿತಿ ನೀಡುತ್ತಿದೆ. ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡುತ್ತಿರುವ ಕೆಲವು ಜನಪ್ರಿಯ ಕಾರುಗಳನ್ನು ಇಲ್ಲಿ ಲಿಸ್ಟ್ ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ಕಾರುಗಳ ಮೇಲಿನ ಡಿಸ್ಕೌಂಟ್ ಮೊತ್ತದಲ್ಲಿ ಬದಲಾವಣೆಯಾಗುವ ಸಂಭವವಿದೆ. ಆದ್ದರಿಂದ, ಬುಕಿಂಗ್ ಮಾಡುವ ಮೊದಲು ಡೀಲರ್‌ಶಿಪ್‌ನಿಂದ ಇವುಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಿ. 


ಇದನ್ನೂ ಓದಿ : ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಹೊಸ ಎಲೆಕ್ಟ್ರಿಕ್ ಕಾರುಗಳು !ಈ SUVಗಳಿಗಾಗಿ ಕಾಯುತ್ತಿರುವ ಕಾರು ಪ್ರಿಯರು !


ಫೆಬ್ರವರಿಯಲ್ಲಿ ಜನಪ್ರಿಯ ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳು :
-- 2023 ಮಹೀಂದ್ರಾ ಬೊಲೆರೊದಲ್ಲಿ 1 ಲಕ್ಷದವರೆಗೆ  ರಿಯಾಯಿತಿ 
-- 2023 ಹ್ಯುಂಡೈ ವೆರ್ನಾದಲ್ಲಿ 55,000 ರೂ.ವರೆಗಿನ ರಿಯಾಯಿತಿ 
--2023 ಹ್ಯುಂಡೈ ಅಲ್ಕಾಜರ್‌ನಲ್ಲಿ 45,000 ರೂ.ವರೆಗಿನ  ರಿಯಾಯಿತಿ 
-- 2023 ಮಹೀಂದ್ರಾ XUV300 ನಲ್ಲಿ ರೂ 1.82 ಲಕ್ಷದವರೆಗೆ  ರಿಯಾಯಿತಿ 
-- 2023 ಮಹೀಂದ್ರಾ XUV400 ನಲ್ಲಿ ರೂ 4.2 ಲಕ್ಷದವರೆಗೆ  ರಿಯಾಯಿತಿ 
-- 2023 ಮಾರುತಿ ಗ್ರ್ಯಾಂಡ್ ವಿಟಾರಾದಲ್ಲಿ 75,000 ರೂ.ವರೆಗಿನ  ರಿಯಾಯಿತಿ 
-- 2023 ಮಾರುತಿ ಜಿಮ್ನಿಯಲ್ಲಿ ರೂ 1.50 ಲಕ್ಷದವರೆಗೆ ರಿಯಾಯಿತಿ 
-- 2023 ಮಾರುತಿ ಫ್ರಾಂಕ್ಸ್‌ನಲ್ಲಿ ರೂ 83,000 ವರೆಗಿನ  ರಿಯಾಯಿತಿ 
--ಮಾರುತಿ ಆಲ್ಟೊ ಕೆ10 ನಲ್ಲಿ ರೂ 62,000 ವರೆಗೆ   ರಿಯಾಯಿತಿ 
-- S-Presso ಮತ್ತು ವ್ಯಾಗನ್ R ನಲ್ಲಿ ರೂ 61,000 ರಿಯಾಯಿತಿ 
-- ಹೋಂಡಾ ಸಿಟಿಯಲ್ಲಿ ರೂ 1.11 ಲಕ್ಷದವರೆಗೆ  ರಿಯಾಯಿತಿ 
-- ಹೋಂಡಾ ಅಮೇಜ್‌ನಲ್ಲಿ ರೂ 92,000  ರಿಯಾಯಿತಿ 


ಇದನ್ನೂ ಓದಿ : Instagram Hidden Features: ಇನ್ಸ್ಟಾಗ್ರಾಂನ ಈ ಗುಪ್ತ ವೈಶಿಷ್ಟ್ಯಗಳನ್ನು ನೀವು ಗಮನಿಸಿದ್ದೀರಾ!


ಅಷ್ಟೇ ಅಲ್ಲ, ಹ್ಯುಂಡೈ ತನ್ನ ಹಲವು ಕಾರುಗಳ ಮೇಲೆ ರಿಯಾಯಿತಿ ನೀಡುತ್ತಿದೆ. 2023 ವೆರ್ನಾ ಸೆಡಾನ್ ಮೇಲೆ  55,000 ರೂ. ವರೆಗೆ ನಗದು ರಿಯಾಯಿತಿ ಮತ್ತು 2023 ಟಕ್ಸನ್ SUV ಮೇಲೆ 2 ಲಕ್ಷದವರೆಗೆ ನಗದು ರಿಯಾಯಿತಿ ನೀಡುತ್ತಿದೆ. ಅದೇ ರೀತಿ, 2023 ಗ್ರಾಂಡ್ ಐ10 ನಿಯೋಸ್, ಅಲ್ಕಾಜರ್, ಔರಾ, ವೆನ್ಯೂ ಮತ್ತು ಐ20 ಗಳ ಮೇಲೆ ಕ್ರಮವಾಗಿ 48,000 ರೂ., 45,000 ರೂ.33,000 ರೂ., 30,000 ರೂ. ಮತ್ತು 30,000 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.