ಬೆಂಗಳೂರು : Flipkart Month-End Mobiles Fest :  Apple, Samsung ನಿಂದ  ಹಿಡಿದು Vivo, Oppo ಮತ್ತು Infinix ವರೆಗೆ, ಎಲ್ಲಾ ಸ್ಮಾರ್ಟ್ ‌ಫೋನ್ ಗಳು ಈ  ಸೇಲ್ ನಲ್ಲಿ ಲಭ್ಯವಿದೆ. ಮಾರ್ಚ್ 25 ರಂದು ಪ್ರಾರಂಭವಾದ ಈ ಸೇಲ್ ನಲ್ಲಿ ಪ್ರತಿ ಬ್ರಾಂಡ್‌ನ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇಂದು ನಾವು iPhone 13 ನಲ್ಲಿ ಲಭ್ಯವಿರುವ ಬಂಪರ್ ರಿಯಾಯಿತಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗದ ಬೆಲೆಗೆ  ಖರೀದಿಸುವುದು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

Flipkart Month-End Mobiles Fest: iPhone 13 ನಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿ :
ಈ ಸೇಲ್ ನಲ್ಲಿ ಐಫೋನ್ 13 ರ 128GB ರೂಪಾಂತರದ ಮೇಲೆ  6% ರಿಯಾಯಿತಿ ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ (Flipkart Sale) 74,900 ರೂ.ಗಳಿಗೆ ಈ ಮೊಬೈಲ್ ಮಾರಾಟ ಮಾಡಲಾಗುತ್ತಿದೆ. ಐಫೋನ್ 13 ಅನ್ನು 79,900 ರೂಗಳಲ್ಲಿ ಬಿಡುಗಡೆ ಮಾಡಲಾಗಿದೆ . ICICI ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು (Debit Card) ಬಳಸಿ  ಈ ಫೋನ್ ಖರೀದಿಸಿದರೆ, 6,000 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗಲಿದೆ. ಬ್ಯಾಂಕ್ ಆಫರ್ ನಂತರ iPhone 13 ಅನ್ನು  74,900 ರೂ. ಬದಲು  68,900 ರೂ.ಗೆ  ಖರೀದಿಸಬಹುದು. 


ಇದನ್ನೂ ಓದಿ : Good News on Airtel 5G: ಈ ದಿನ ಆರಂಭವಾಗಲಿದೆ ಏರ್‌ಟೆಲ್ 5G ಸೇವೆ


iPhone 13 ಅನ್ನು ಈ ರೀತಿಯಲ್ಲಿ ಮತ್ತು ಅಗ್ಗದ ಬೆಲೆಗೆ ಖರೀದಿಸಿ :
ಬ್ಯಾಂಕ್ ಆಫರ್ ನೊಂದಿಗೆ iPhone 13 ಬೆಲೆ 68,900 ರೂ.ಗೆ ಖರೀದಿಸಬಹುದು.  ಆದರೆ ಎಕ್ಸ್ಚೇಂಜ್ ಆಫರ್ ಮೂಲಕ ಈ ಫೋನ್ ಖರೀದಿಸುವುದಾದರ 16 ಸಾವಿರ ರೂಪಾಯಿಗಳವರೆಗೆ ಉಳಿಸಬಹುದು. ಈ ಆಫರ್ ಪಡೆಯುವುದು ಸಾಧ್ಯವಾದರೆ iPhone 13 ಅನ್ನು  52,900 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ.


iPhone 13ನ ವೈಶಿಷ್ಟ್ಯಗಳು :
128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ iPhone 13 A15 Bionic ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ  6.1-ಇಂಚಿನ ಸೂಪರ್ ರೆಟಿನಾ XDR (XDR) ಡಿಸ್ಪ್ಲೇಯನ್ನು ಹೊಂದಿರುತ್ತದೆ.  5G ಸೇವೆಗಳೊಂದಿಗೆ ಈ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 12MP ಫ್ರಂಟ್ ಕ್ಯಾಮೆರಾವನ್ನು ಸಹ ನೀಡಲಾಗಿದೆ. 


ಇದನ್ನೂ ಓದಿ : How To Clean Smartphone Screen: ಸ್ಮಾರ್ಟ್‌ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್ ಸಲಹೆ


ಮಾರ್ಚ್ 26 ಅಂದರೆ ಇಂದು ಫ್ಲಿಪ್‌ಕಾರ್ಟ್ ತಿಂಗಳಾಂತ್ಯದ ಮೊಬೈಲ್ ಫೆಸ್ಟ್‌ನ ಕೊನೆಯ ದಿನವಾಗಿದೆ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.