OnePlus ದೀಪಾವಳಿ ಸೇಲ್ ಸಮಯದಲ್ಲಿ OnePlus ತನ್ನ ಕೆಲವು ಜನಪ್ರಿಯ ಫೋನ್‌ಗಳ ಮೇಲೆ ಉತ್ತಮ ಆಫರ್ ನೀಡುತ್ತಿದೆ.ಈ ಸೇಲ್ ಸೆಪ್ಟೆಂಬರ್ 12 ರಂದು ಲೈವ್ ಆಗಲಿದೆ.ಇದೀಗ ಕಂಪನಿ OnePlus 12 ಅನ್ನು 60,000 ರೂಪಾಯಿಗಿಂತ  ಕಡಿಮೆ ಬೆಲೆಗೆ ಲಭ್ಯವಿರುತ್ತದೆ.ಮಾತ್ರವಲ್ಲ, 13,000 ರೂ.ಬೆಲೆಯ ಬಡ್ಸ್ ಪ್ರೊ 2 ಉಚಿತವಾಗಿ ಸಿಗಲಿದೆ.  ಸಾಧನವು ಅದರ ಅಧಿಕೃತ ವೆಬ್‌ಸೈಟ್,OnePlus Experience Stores ಮತ್ತು Amazon, Bajaj Electronics, Reliance Digital, Vijay Sales ಮತ್ತು Cromaನಂಥಹ ಹಲವಾರು ಪ್ಲಾಟ್ಫಾರ್ಮ್ ಗಳಲ್ಲಿ ಲಭ್ಯವಿದೆ. 


COMMERCIAL BREAK
SCROLL TO CONTINUE READING

OnePlus 12 ಆಫರ್ ಗಳು :  
OnePlus 12, 12GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಬರುವ ಫೋನ್ ಬೆಲೆ  64,999 ರೂ. ಆಗಿದೆ. ಈ ಫೋನ್ ಮೇಲೆ ಬೇರೆ ಬೇರೆ ರೀತಿಯ ರಿಯಾಯಿತಿಗಳನ್ನು ಘೋಷಿಸಲಾಗಿದೆ.ಬ್ಯಾಂಕ್ ರಿಯಾಯಿತಿಯಾಗಿ 7,000 ರೂ. ರಿಯಾಯಿತಿ ಸಿಗುತ್ತದೆ.ಇದು ಕೆಲವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಅನ್ವಯಿಸಬಹುದು. ಇದಲ್ಲದೇ 2,000 ರೂಪಾಯಿಯ ಕೂಪನ್ ಡಿಸ್ಕೌಂಟ್ ಕೂಡಾ ಲಭ್ಯವಿದೆ.ಈ ಎಲ್ಲಾ ಆಫರ್ ಗಳನ್ನೂ ಸೇರಿಸಿದ ನಂತರ,OnePlus 12 ನ ಬೆಲೆ 55,999 ರೂ.ಗೆ ಇಳಿಯುತ್ತದೆ. ಈ ಫೋನ್ ಖರೀದಿಸಿದರೆ OnePlus 12 ಖರೀದಿ ಮೇಲೆ OnePlus Buds Pro 2 ಸಂಪೂರ್ಣವಾಗಿ ಉಚಿತವಾಗಿರಲಿದೆ. 


ಇದನ್ನೂ ಓದಿ iPhone ಬಳಕೆದಾರರಿಗೆ ಹೈ ಅಲರ್ಟ್​! ಭಾರತದಲ್ಲಿ ಈ ಆವೃತ್ತಿಗಳು ಹ್ಯಾಕ್‌ ಆಗುವ ಸಾಧ್ಯತೆ..! ತಕ್ಷಣವೇ ಈ ಕೆಲಸ ಮಾಡಿ ಎಂದು ಸರ್ಕಾರದಿಂದ ಸೂಚನೆ


OnePlus 12: ವಿಶೇಷಣಗಳು : 
OnePlus 12 ದೊಡ್ಡ 6.82 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಅದರ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ.ಇದರ ProXDR ಡಿಸ್ಪ್ಲೇ ತಂತ್ರಜ್ಞಾನವು ರಿಫ್ರೆಶ್ ರೇಟ್ ಅನ್ನು ಕ್ರಿಯಾತ್ಮಕವಾಗಿ ಸರಿಹೊಂದಿಸುವ ಮೂಲಕ  ಸಾಫ್ಟ್ ನೆಸ್  ಅನ್ನು ಒದಗಿಸುತ್ತದೆ. ಇದು 120 Hz ವರೆಗೆ ಹೋಗುತ್ತದೆ.


OnePlus 12 ಅನ್ನು ನಯವಾದ ಮತ್ತು ಸ್ಟೈಲಿಶ್ ಆಗಿ ವಿನ್ಯಾಸಗೊಳಿಸಲಾಗಿದೆ. ಅದರ ದೊಡ್ಡ  ಡಿಸ್ಪ್ಲೇ ಹೊರತಾಗಿಯೂ ಸಾಕಷ್ಟು ಕಾಂಪ್ಯಾಕ್ಟ್ ಆಗಿರುತ್ತದೆ.ಫ್ಲೋವಿ ಎಮರಾಲ್ಡ್ ಮತ್ತು ಸಿಲ್ಕಿ ಬ್ಲ್ಯಾಕ್ ಎನ್ನುವ ಎರಡು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. Android 14 ಪ್ಲಾಟ್‌ಫಾರ್ಮ್ ಆಧಾರಿತ OxygenOS ನಲ್ಲಿ ರನ್ ಆಗುತ್ತಿದೆ. 


ಇದನ್ನೂ ಓದಿ : Jio ನೀಡುತ್ತಿದೆ ಕೇವಲ 9.ರೂಗೆ 2.5GB ಡೇಟಾ ಮತ್ತು unlimited ಕರೆ !


ಇದು ದೊಡ್ಡ 5,400 mAh ಬ್ಯಾಟರಿಯನ್ನು ಹೊಂದಿದ್ದು, ಬ್ಯಾಟರಿ ದೀರ್ಘ ಕಾಲದವರೆಗೆ ಬರುತ್ತದೆ. ಇದು ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.ಫೋನ್ ಹ್ಯಾಪ್ಟಿಕ್ ಫೀಡ್ ಬ್ಯಾಕ್ ಅನ್ನು ಹೊಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ