ನವದೆಹಲಿ : ಕಡಿಮೆ ಬೆಲೆಗೆ  ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ,  ಸದ್ಯದ ಮಟ್ಟಿಗೆ Samsung Galaxy M51 ನಿಮಗಿರುವ ಉತ್ತಮ ಆಯ್ಕೆ. ಈ ಫೋನ್ ಅನ್ನು ಸ್ವಲ್ಪ ಸಮಯದ ಹಿಂದೆಯಷ್ಟೇ ಲಾಂಚ್ ಮಾಡಲಾಗಿತ್ತು.  ಈಗ ಅತ್ಯಂತ ಆಕರ್ಷಕ ಬೆಲೆಯಲ್ಲಿ ಈ ಫೋನ್ ಅನ್ನು ಖರೀದಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಅಮೆಜಾನ್ ನಲ್ಲಿ ಸಿಗುತ್ತಿದೆ ಡಿಸ್ಕೌಂಟ್ : 
ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ಈ ದಿನಗಳಲ್ಲಿ Samsung Galaxy M51 ಮೇಲೆ  ವಿಶೇಷ ರಿಯಾಯಿತಿ ನೀಡುತ್ತಿದೆ. ಮಾರುಕಟ್ಟೆಯಲ್ಲಿ Samsung Galaxy M51 ಬೆಲೆ 28,999 ರೂ. ಆದರೆ ವಿಶೇಷ ಕೊಡುಗೆಯಡಿಯಲ್ಲಿ ಈ ಫೋನ್‌ ಮೇಲೆ 6 ಸಾವಿರ ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಅಂದರೆ ಕೇವಲ 22,999 ರೂಗಳಿಗೆ ಈ ಪೋನ್ ಅನ್ನು ಖರೀದಿಸಬಹುದು. ಅಲ್ಲದೆ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದರೆ, ಖರೀದಿ ಮೇಲೆ 1,500 ರೂ.ಗಳ ತ್ವರಿತ ರಿಯಾಯಿತಿ ಕೂಡಾ ಸಿಗಲಿದೆ.  


ಇದನ್ನೂ ಓದಿ : BSNL ಗ್ರಾಹಕರಿಗೆ 200 ರೂ.ಗಿಂತ ಕಡಿಮೆ ರೀಚಾರ್ಜ್‌ನಲ್ಲಿ ಸಿಗಲಿದೆ ನಿತ್ಯ 2GB Data


Samsung Galaxy M51 ವೈಶಿಷ್ಟ್ಯಗಳು :
Samsung Galaxy M51, 6.7 ಇಂಚಿನ ಫುಲ್ ಎಚ್‌ಡಿ ಪ್ಲಸ್ ಸೂಪರ್  AMOLED ಡಿಸ್ಪ್ಲೇ ಹೊಂದಿದೆ. ಇದರಲ್ಲಿ Infinity O ಡಿಸ್ಪ್ಲೇ ಬಳಸಲಾಗಿದೆ. ಪಂಚ್ ಹೋಲ್ ಡಿಸ್ಪ್ಲೇ ಇದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು (camera) ಕೂಡಾ ನೀಡಲಾಗಿದೆ. ಈ ಫೋನ್ 6GB+128GB ಮತ್ತು 8GB+128GB  ಎಂಬ ಎರಡು ವೆರಿಯೇಂಟ್ ಗಳಲ್ಲಿ ಬರುತ್ತದೆ.


ಗ್ರಾಫಿಕ್ ಗಾಗಿ, ಅದರಲ್ಲಿ Adreno 618GPU ನೀಡಲಾಗಿದ್ದು, Qualcomm Snapdragon 730G  ಪ್ರೊಸೆಸರ್ ಕೂಡಾ ಇದೆ. ಸಾಮಾನ್ಯವಾಗಿ, ಸ್ಯಾಮ್‌ಸಂಗ್ ಭಾರತದಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಇನ್‌ಹೌಸ್ Exynos ಪ್ರೊಸೆಸರ್‌ಗಳನ್ನು ನೀಡುತ್ತದೆ. Galaxy M51 ನಾಲ್ಕು ರಿಯರ್  ಕ್ಯಾಮೆರಾ ಸೆಟಪ್ ಹೊಂದಿದೆ.


ಇದನ್ನೂ ಓದಿ : Facebook Data Leak: 53 ಕೋಟಿಗೂ ಅಧಿಕ ಬಳಕೆದಾರರ ಫೋನ್ ನಂಬರ್ ಡಾಟಾ ಲೀಕ್


64 ಮೆಗಾಪಿಕ್ಸೆಲ್ ಕ್ಯಾಮೆರಾವನ್ನೋಳಗೊಂಡ ಫೋನ್ : 
ಪ್ರೈಮರಿ  ಕ್ಯಾಮೆರಾ 64 ಮೆಗಾಪಿಕ್ಸೆಲ್‌ಗಳನ್ನು ಒಳಗೊಂಡಿದೆ.  ಎರಡನೆಯದು 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿದೆ. 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಿಂಗ್ ಕ್ಯಾಮೆರಾ ಇದೆ. ಕೇವಲ 5 ಮೆಗಾಪಿಕ್ಸೆಲ್‌ಗಳ ಮ್ಯಾಕ್ರೋ ಕ್ಯಾಮೆರಾ (Micro Camera) ನೀಡಲಾಗಿದೆ. ಸಿಂಗಲ್ ಟೆಕ್ ವೈಶಿಷ್ಟ್ಯವನ್ನು ರಿಯರ್ ಮತ್ತು ಫ್ರಂಟ್ ಎರಡು ಕ್ಯಾಮೆರಾಗಳಲ್ಲಿ ನೀಡಲಾಗಿದೆ. ಮುಂಭಾಗದ ಕ್ಯಾಮೆರಾದಂತೆ, ಈ ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಪವರ್ ಗಾಗಿ  Galaxy M51 ಯಲ್ಲಿ  7,000 mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಅನ್ನು ಕೂಡ ಸಪೋರ್ಟ್ ಮಾಡುತ್ತದೆ.  

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.