ನಿಮ್ಮ ಸ್ಮಾರ್ಟ್‌ಫೋನ್ ಸ್ಪೀಕರ್‌ನಿಂದ ಸೌಂಡ್ ಕಡಿಮೆ ಬರ್ತಿದ್ಯಾ? ಈ ರೀತಿ ಸರಿಪಡಿಸಿ
Smartphone Speaker: ಪ್ರಸ್ತುತ, ಪ್ರತಿಯೊಬ್ಬರ ಜೀವನಾಡಿ ಆಗಿರುವ ಸ್ಮಾರ್ಟ್ಫೋನ್ನಲ್ಲಿ ಸಣ್ಣ-ಪುಟ್ಟ ಬದಲಾವಣೆ ಆದರೂ ಕೂಡ ಜನರಿಗೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಅಂತಹ ಬದಲಾವಣೆಗಳಲ್ಲಿ ಸ್ಮಾರ್ಟ್‌ಫೋನ್ ಸ್ಪೀಕರ್‌ನಿಂದ ಕಡಿಮೆ ಸೌಂಡ್ ಬರುವುದು ಕೂಡ ಒಂದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಇದ್ದರೆ ಈಗಲೇ ಈ ಒಂದು ಪುಟ್ಟ ಕೆಲಸ ಮಾಡಿ.
Smartphone Tips: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ಸ್ಪೀಕರ್‌ನಿಂದ ಕಡಿಮೆ ಸೌಂಡ್ ಬರ್ತಾ ಇದ್ಯಾ. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಾವು ಸದಾ ಸ್ಮಾರ್ಟ್‌ಫೋನ್ ಬಳಸುವುದರಿಂದ ಧೂಳು, ಕೊಳಕು ಹೆಚ್ಚಾಗಿ ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಲ್ಲಿ ಸಂಗ್ರಹವಾಗುತ್ತದೆ. ಇದರಿಂದಾಗಿ ಸ್ಪೀಕರ್‌ನಿಂದ ಕಡಿಮೆ ಸೌಂಡ್ ಬರುತ್ತದೆ. ಇದನ್ನು ಸ್ವಚ್ಛಗೊಳಿಸುವ ಮೂಲಕ ನೀವು ಇದರಿಂದ ಪರಿಹಾರ ಪಡೆಯಬಹುದಾಗಿದೆ.
ಸ್ಮಾರ್ಟ್‌ಫೋನ್ ಸ್ಪೀಕರ್‌ನಿಂದ ಕಡಿಮೆ ಸೌಂಡ್ ಬರ್ತಾ ಇದ್ರೆ ಈಗಲೇ ಈ ಕೆಲಸ ಮಾಡಿ :
ಸ್ಮಾರ್ಟ್‌ಫೋನ್‌ನ ಸ್ಪೀಕರ್‌ನಲ್ಲಿ ಸಂಗ್ರಹವಾಗಿರುವ ಧೂಳು, ಕೊಳೆಯನ್ನು ಸ್ವಚ್ಛಗೊಳಿಸಲು ಸಹ ನೀವು ಹೆಚ್ಚು ಕಷ್ಟಪಡಬೇಕಾದ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿರುವ ಹಲ್ಲುಜ್ಜುವ ಬ್ರಷ್ ತೆಗೆದುಕೊಂಡು ಸ್ಮಾರ್ಟ್‌ಫೋನ್‌ನ ಸ್ಪೀಕರ್‌ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ಇದನ್ನೂ ಓದಿ- ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀ ಶಾಪಿಂಗ್: ಎಸಿ, ಫ್ರಿಜ್ ಅನ್ನು ಕೇವಲ 1 ರೂ.ಗೆ ಮನೆಗೆ ತನ್ನಿ
ಬ್ರಷ್ ಅನ್ನು ನಯವಾಗಿ ಬಳಸಿ:
ಬ್ರಷ್ ಬಳಸಿ ಸ್ಮಾರ್ಟ್‌ಫೋನ್ ಸ್ವಚ್ಛಗೊಳಿಸಬಹುದು ಎಂದು ನೀವು ಅದನ್ನು ಒರಟಾಗಿ ಬಳಸಿದರೆ ನಿಮ್ಮ ಫೋನ್ ಹಾನಿಗೊಳಗಾಗಬಹುದು. ಹಾಗಾಗಿ, ಸ್ಮಾರ್ಟ್‌ಫೋನ್‌ನ ಸ್ಪೀಕರ್‌ಗಳನ್ನು ಸ್ವಚ್ಛಗೊಳಿಸಲು ಒಂದು ಸಾಫ್ಟ್ ಬ್ರಷ್ ತೆಗೆದುಕೊಂಡು ಸ್ಪೀಕರ್ ಬಳಿ ಸಂಗ್ರಹವಾಗಿರುವ ಧೂಳು, ಕೊಳೆಯನ್ನು ತೆಗೆಯಿರಿ. ಆದರೆ, ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀರನ್ನು ಬಳಸಬೇಡಿ.
ಇದನ್ನೂ ಓದಿ- ಬೇಸಿಗೆಯಲ್ಲಿ ಫ್ರಿಡ್ಜ್ ಅನ್ನು ಯಾವ ತಾಪಮಾನದಲ್ಲಿ ಚಲಾಯಿಸಬೇಕು? ಇಲ್ಲಿದೆ ಮಹತ್ವದ ಮಾಹಿತಿ
ಇಯರ್‌ಬಡ್‌ಗಳಿಂದ ಸ್ಮಾರ್ಟ್‌ಫೋನ್‌ನ ಸ್ಪೀಕರ್ ಸ್ವಚ್ಛಗೊಳಿಸಿ:
ಬ್ರಷ್ ಮಾತ್ರವಲ್ಲದೆ ನಿಮ್ಮ ಮನೆಯಲ್ಲಿರುವ ಇಯರ್‌ಬಡ್‌ಗಳಿಂದಲೂ ಸಹ ನೀವು ಸ್ಮಾರ್ಟ್‌ಫೋನ್‌ನ ಸ್ಪೀಕರ್ ಸ್ವಚ್ಛಗೊಳಿಸಬಹುದು. ಆದರೆ, ನೆನಪಿಡಿ ಈ ಸಂದರ್ಭದಲ್ಲಿ ಹೆಚ್ಚು ಪ್ರೆಸ್ ಮಾಡಬೇಡಿ. ಇದರಿಂದ ನಿಮ್ಮ ಮೊಬೈಲ್ ಸ್ಪೀಕರ್ ಹಾಳಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.