TV ನೋಡುವಾಗ ಈ ತಪ್ಪು ಮಾಡುತ್ತಿದ್ದರೆ, ನಿಧಾನವಾಗಿ ಈ ರೋಗಕ್ಕೆ ಹತ್ತಿರವಾಗುತ್ತಿದ್ದೀರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ !
ಸತತ ನಾಲ್ಕು ಗಂಟೆಗಳ ಕಾಲ ಟಿವಿ ನೋಡುವವರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ 35 ಪ್ರತಿಶತಕ್ಕಿಂತ ಹೆಚ್ಚು ಎನ್ನುವುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಬೆಂಗಳೂರು : ಹಿರಿಯರಿಂದ ಕಿರಿಯರವರೆಗೆ ಟಿವಿಯ ಮುಂದೆ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ನಮಗೆ ಬೇಕಾದ ಹಾಗೆ ಚಾನಲ್ ಬದಲಿಸುತ್ತಾ ಗಂಟೆ ಗಟ್ಟಲೆ ಟಿವಿ ಮುಂದೆ ಕುಳಿತುಕೊಳ್ಳುವ ಅಭ್ಯಾಸ ಬಹುತೇಕ ಮಂದಿಗೆ ಇರುತ್ತದೆ. ನಿಮಗೂ ಈ ಅಭ್ಯಾಸ ಇದೆ ಎಂದಾದರೆ ಇಂದೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಯಾಕೆಂದರೆ ಟಿವಿ ನೋಡುತ್ತಾ ನೋಡುತ್ತಾ ನಿಮಗೆ ಗೊತ್ತಿಲ್ಲದಂತೆ ನಿಧಾನವಾಗಿ ರೋಗಕ್ಕೆ ಹತೀರವಾಗುತ್ತಿರುತ್ತೀರಿ. 4 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಟಿವಿ ನೋಡುತ್ತಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಅಧ್ಯಾಯನದಿಂದ ಸಾಬೀತಾಗಿದೆ.
ಸತತ ನಾಲ್ಕು ಗಂಟೆಗಳ ಕಾಲ ಟಿವಿ ನೋಡುವವರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ 35 ಪ್ರತಿಶತಕ್ಕಿಂತ ಹೆಚ್ಚು ಎನ್ನುವುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿ ಜನವರಿ 20 2022 ರಂದು ಪ್ರಕಟಿಸಿದ ಅಧ್ಯಯನದಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ.
ಇದನ್ನೂ ಓದಿ : ಇನ್ಮುಂದೆ ಕೇವಲ ಒನ್ ಕ್ಲಿಕ್ನಲ್ಲಿ ವಾಟ್ಸಪ್‌ನಲ್ಲಿಯೇ ಸಿಗುತ್ತೆ ರೈಲು ಪ್ರಯಾಣದ ಎಲ್ಲಾ ಮಾಹಿತಿ... ಹೇಗ್ ಗೊತ್ತಾ...
ದೀರ್ಘಕಾಲದವರೆಗೆ ಟಿವಿ ವೀಕ್ಷಿಸುತ್ತಿದ್ದರೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಟಿವಿ ನೋಡುವಾಗ ಪ್ರತೀ 30 ನಿಮಿಷಗಳ ನಂತರ ವಿರಾಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಹೀಗೆ ಮಾಡಿದರೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
ಅಧ್ಯಯನದಿಂದ ಕಂಡು ಬಂದ ವಿಷಯ ಏನು ? :
ಸಂಶೋಧನೆಯ ಪ್ರಕಾರ, ಯುಎಸ್ ಮತ್ತು ಜಪಾನ್‌ನಲ್ಲಿ 40 ಕ್ಕಿಂತ ಹೆಚ್ಚಿನ ವಯಸ್ಸಿನ 1,31,421 ಜನರ ಟಿವಿ ನೋಡುವ ಸಮಯ ಮತ್ತು ಮಾದರಿಯನ್ನು ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಟಿವಿ ನೋಡುವ ಜನರಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯ 35 ಪ್ರತಿಶತ ಹೆಚ್ಚು ಎಂದು ಕಂಡುಹಿಡಿಯಲಾಗಿದೆ.
ಇದನ್ನೂ ಓದಿ : ಫ್ಲಿಪ್‌ಕಾರ್ಟ್‌ನಲ್ಲಿ ಇದು ಅತ್ಯಂತ ಅಗ್ಗದ ಐಫೋನ್; ಇದರ ಬೆಲೆ 15 ಸಾವಿರಕ್ಕಿಂತ ಕಡಿಮೆ, ಇಂದೇ ಖರೀದಿಸಿರಿ
ಟಿವಿ ನೋಡುತ್ತಾ ಈ ಕೆಲಸ ಮಾಡಬೇಡಿ :
ಟಿವಿ ನೋಡುವಾಗ ಫಾಸ್ಟ್ ಫುಡ್ ಅಥವಾ ಸ್ನಾಕ್ಸ್ ತಿನ್ನುವುದನ್ನು ತಪ್ಪಿಸಿ. ಹೀಗೆ ಮಾಡಿದರೆ ಸ್ಥೂಲಕಾಯ ಅಥವಾ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಗುರಿಯಾಗಬೇಕಾದೀತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ