ವಿದ್ಯುತ್ ಬಿಲ್ ಉಳಿತಾಯ ಟ್ರಿಕ್ಸ್: ಪ್ರಸ್ತುತ ಎಲೆಕ್ಟ್ರಿಕ್ ಸಾಧನಗಳ ಬಳಕೆ ಹೆಚ್ಚಾಗಿದ್ದು ಇದರಿಂದಾಗಿ ವಿದ್ಯುತ್ ಬಿಲ್ ಕೂಡ ಹೆಚ್ಚು ಬರುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಒಂದು ಸಣ್ಣ ಸಾಧನದ ಸಹಾಯದಿಂದ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಸುಮಾರು ಅರ್ಧದಷ್ಟು ಉಳಿತಾಯ ಮಾಡಬಹುದು. ಇದರ ವಿಶೇಷತೆ ಎಂದರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿರುವ ಈ ಸಾಧನವು ಶಾರ್ಟ್ ಸರ್ಕ್ಯೂಟ್ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ಎಲೆಕ್ಟ್ರಿಕಲ್ ವಸ್ತುಗಳು ಹಾನಿಗೊಳಗಾಗುವುದನ್ನೂ ಸಹ ತಪ್ಪಿಸುತ್ತದೆ.  ಅದರ ಹೆಸರು ಝೇಲ್ಸಿ ಮ್ಯಾಕ್ಸ್ ಪವರ್ ಸೇವರ್. ಯಾವುದೀ ಸಾಧನ, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಝೇಲ್ಸಿ ಮ್ಯಾಕ್ಸ್ ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವರ್ ಪವರ್:
ಝೀಲ್ಸಿ ಮ್ಯಾಕ್ಸ್ ಪವರ್ ಸೇವರ್ ಇಲೆಕ್ಟ್ರಿಸಿಟಿ ಸೇವರ್ ಪವರ್ ವಿದ್ಯುಚ್ಛಕ್ತಿಯನ್ನು ಉಳಿಸುತ್ತದೆ. ಇದರರ್ಥ ಇದು ವೋಲ್ಟೇಜ್ ಅನ್ನು ಕಡಿಮೆ ಮಾಡುತ್ತದೆ ಎಂದಲ್ಲ. ಈ ಸಾಧನವನ್ನು ಅಳವಡಿಸಿದ ಬಳಿಕವೂ ನಿಮ್ಮ ಎಲೆಕ್ಟ್ರಿಸಿಟಿ ಮೀಟರ್ ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತದೆ. ಆದರೆ, ಅನಗತ್ಯವಾಗಿ ವಿದ್ಯುತ್ ವ್ಯಯವಾಗುವುದನ್ನು ತಡೆಯುತ್ತದೆ. 


ಮನೆಯಲ್ಲಿ ಎಲೆಕ್ಟ್ರಿಕ್ ಮೀಟರ್‌ನ ಹಿಂದೆ ಈ ಸಾಧನವನ್ನು ಫಿಟ್ ಮಾಡುವುದರಿಂದ ಮನೆಯ ಯಾವುದೇ ವಸ್ತುಗಳು ಹಾಳಾಗುವುದಿಲ್ಲ. ಇದು ಹೆಚ್ಚುವರಿ ಕರೆಂಟ್ ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಅನುಸ್ಥಾಪನೆಯ ನಂತರ, ಪ್ರತಿ ತಿಂಗಳು ವಿದ್ಯುತ್ ಬಿಲ್‌ಗಳು 35% ರಷ್ಟು ಕಡಿಮೆಯಾಗಲು ಪ್ರಾರಂಭಿಸುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.


ಇದನ್ನೂ ಓದಿ- ಚಿಟಿಕೆಯಲ್ಲಿ ಖಾತೆಯನ್ನು ಖಾಲಿ ಮಾಡುವ ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ಪತ್ತೆ! ಈ ಬಗ್ಗೆ ಇರಲಿ ಎಚ್ಚರ


ಇದು ಎಲ್ಲಿ ಲಭ್ಯವಿದೆ?
ನೀವು ಝೇಲ್ಸಿ ಮ್ಯಾಕ್ಸ್ ಪವರ್ ಸೇವರ್ ಎಲೆಕ್ಟ್ರಿಸಿಟಿ ಸೇವರ್ ಪವರ್ ಅನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಸಾಧನದ ಬಿಡುಗಡೆಯ ಬೆಲೆ ರೂ. 1,250 ಎಂದು ಹೇಳಲಾಗಿದೆ, ಆದರೆ ರಿಯಾಯಿತಿಯೊಂದಿಗೆ ನೀವು ಇದನ್ನು ಕೇವಲ 275 ರೂ.ಗಳಿಗೆ ಖರೀದಿಸಬಹುದು.  ಸಾಧನ ಖರೀದಿಯಲ್ಲಿ  ಮೊದಲ ಬಾರಿಗೆ ಇಂತಹ ರಿಯಾಯಿತಿಯು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿದೆ. ನೀವು ಅದನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅನ್ವಯಿಸಬಹುದು.
 
ಇದನ್ನೂ ಓದಿ- ಚಳಿಗಾಲದಲ್ಲಿ ಹೀಟರ್, ಬೇಸಿಗೆಯಲ್ಲಿ ಎಸಿ ಆಗಿ ಕಾರ್ಯನಿರ್ವಹಿಸುತ್ತೆ ಈ ಸಾಧನ, ಬೆಲೆಯೂ ಕಡಿಮೆ


ಈ ಸಾಧನವು ವೋಲ್ಟೇಜ್ ಸ್ಟೇಬಿಲೈಸರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ವೋಲ್ಟೇಜ್ ಹೆಚ್ಚು ಅಥವಾ ಕಡಿಮೆ ಆದಾಗ ಸಾಧನವು ಅದನ್ನು ಸ್ಥಿರಗೊಳಿಸುತ್ತದೆ. ನೀವು ಅದನ್ನು ಕಚೇರಿ ಅಥವಾ ಕಾರ್ಖಾನೆಯಲ್ಲಿ ಸ್ಥಾಪಿಸಲು ಯೋಚಿಸುತ್ತಿದ್ದರೆ, ಒಮ್ಮೆ ನೀವು ಎಂಜಿನಿಯರ್‌ನಿಂದ ಈ ಬಗ್ಗೆ ಸಲಹೆ ಪಡೆಯಿರಿ. ಏಕೆಂದರೆ ಎಂಜಿನಿಯರ್ ಮಾತ್ರ ವಿದ್ಯುತ್ ಲೋಡ್ ಅನ್ನು ಪರಿಶೀಲಿಸಬಹುದು. ಈ ಸಾಧನವು ವಿದ್ಯುತ್ ಮುಖ್ಯ ತಂತಿಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಒಮ್ಮೆ ಎಂಜಿನಿಯರ್ ಅನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಡೆದ ನಂತರವೇ ಇದನ್ನು ಅಳವಡಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.