ನವದೆಹಲಿ : ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಈ ಒಂಭತ್ತು ಆಪ್ ಗಳಿದ್ದರೆ ಹುಷಾರಾಗಿರಿ. ಯಾಕೆಂದರೆ ಗೂಗಲ್ ಪ್ಲೇ ಸ್ಟೋರ್ (google play store) ಈ ಆಪ್ ಗಳನ್ನು  ನಿಷೇಧಿಸಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್ನು ಕೂಡಾ  ಈ ಆಪ್ ಗಳು ಇದ್ದಿರಬಹುದು. ಒಂದು ವೇಳೆ, ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ.  


COMMERCIAL BREAK
SCROLL TO CONTINUE READING

ಈ ಆಪ್ ಗಳು ಫೇಸ್ ಬುಕ್ ಖಾತೆಗಳನ್ನು hack ಮಾಡುವ  ಸಾಫ್ಟ್ ವೇರ್ ಅನ್ನು ಹೊಂದಿದೆ ಎಂದು, ಸೈಬರ್ ಭದ್ರತಾ ಸಂಶೋಧಕರು ಬಹಿರಂಗಪಡಿಸಿದ್ದಾರೆ. ನೀವು ಡೌನ್‌ಲೋಡ್ (Download) ಮಾಡಿರುವ ಮತ್ತು ಡಿಲೀಟ್ ಮಾಡಲು ಮರೆತಿರುವಂತಹ  ಹಲವು ಆಪ್‌ಗಳು ನಿಮ್ಮ ಫೋನ್ ನಲ್ಲಿ ಇರುತ್ತವೆ. ಸುರಕ್ಷತೆಯ ದೃಷ್ಟಿಯಿಂದ ಅವುಗಳನ್ನು ಕೂಡಲೇ ಡಿಲೀಟ್ ಮಾಡಿ. 


ಇದನ್ನೂ ಓದಿ : YouTube Videoವನ್ನು 60 ಸೆಕೆಂಡ್ ಗಳಲ್ಲಿ ಡೌನ್ಲೋಡ್ ಮಾಡುವ ಟ್ರಿಕ್ ತಿಳಿಯಿರಿ


ಈ 9 ಆಪ್‌ಗಳಿಗೆ Google Play Store ನಿಂದ ನಿಷೇಧ : 
ಈ ಆಪ್‌ಗಳನ್ನು Google Play Storeನಿಂದ ನಿಷೇಧಿಸಲಾಗಿದೆ. ಈ ಆಪ್‌ಗಳು ಬಳಕೆದಾರರಿಗೆ ಅಪಾಯಕಾರಿಯಾಗಿದೆ. ಈ ಆಪ್ ಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಸಾಮಾಜಿಕ ಮಾಧ್ಯಮ ಖಾತೆಗಳಾದ ಟ್ವಿಟರ್ (twitter) ಮತ್ತು ಫೇಸ್‌ಬುಕ್‌ನಿಂದ (Facebook) ಮಾಹಿತಿಯನ್ನು ಕದಿಯಬಹುದು. ಇನ್ನು ಅಪಾಯವೆಂದರೆ ನಿಮ್ಮ ಬ್ಯಾಂಕ್ ವಿವರಗಳನ್ನು ಕೂಡ ಹೊರತೆಗೆಯಬಹುದು. Google Play Store ಈ 9 ಅಪ್ಲಿಕೇಶನ್‌ಗಳನ್ನು ಗುರುತಿಸಿದೆ ಮತ್ತು ಅವುಗಳನ್ನು ನಿಷೇಧಿಸಿದೆ. ಹಾಗಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಆಪ್‌ಗಳಿದ್ದರೆ ಅವುಗಳನ್ನು  ತಕ್ಷಣವೇ ಡಿಲೀಟ್ ಮಾಡಿ.


ಫ್ಲೈಟ್ರಾಪ್ ಪ್ರಪಂಚದಾದ್ಯಂತ ಹರಡುತ್ತಿದೆ :
ಫ್ಲೈಟ್ರಾಪ್ ಎಂಬ ದುರುದ್ದೇಶಪೂರಿತ ಪ್ರೋಗ್ರಾಂ ಬಳಕೆದಾರರನ್ನು ವಂಚಿಸುವ ಮತ್ತು ಅವರ ಫೇಸ್ಬುಕ್ ಖಾತೆಗಳನ್ನು hack ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಹ್ಯಾಕರ್‌ಗಳು ಫೇಸ್‌ಬುಕ್ ಖಾತೆಯನ್ನು ನಿಯಂತ್ರಿಸಬಹುದು ಮತ್ತು ಇಮೇಲ್ ಗಳನ್ನೂ ಕೂಡಾ ಆಕ್ಸೆಸ್ ಮಾಡಬಹುದಾಗಿದೆ. ಇನ್ನು ಇದು ನಿಮ್ಮ ಸ್ಮಾರ್ಟ್  ಫೋನ್ (Smartphone) ಮೂಲಕ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಈ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಸಂದೇಶಗಳನ್ನು ಕಳುಹಿಸಬಹುದು. ಫ್ಲೈಟ್ರಾಪ್ ಪ್ರಪಂಚದಾದ್ಯಂತ ಹರಡಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ : ದಿನ ಪೂರ್ತಿ ಬಳಸಿದರೂ ಖಾಲಿಯಾಗುವುದಿಲ್ಲ ಚಾರ್ಜ್ Xiaomi ಹೊರ ತರುತ್ತಿದೆ Redmi 10


ಈ ಒಂಭತ್ತು ಆಪ್ ಗಳ ಪಟ್ಟಿ ಇಲ್ಲಿದೆ. 
1. GG Voucher (ಜಿಜಿ ವೋಚರ್)
2. . Vote European Football  (ವೋಟ್ ಯುರೋಪಿಯನ್ ಫುಟ್‌ಬಾಲ್‌ ) 
3. GG Coupon Ads  (ಜಿಜಿ ಕೂಪನ್ ಆಡ್ಸ್ )
4. application.app_moi_6: GG Voucher Ads
5. com.free.voucher:  GG Voucher
6. Chatfuel (ಚಾಟ್ಫ್ಯೂಲ್)
7. Net Coupon (ನೆಟ್ ಕೂಪನ್)
8. com.movie.net_coupon: Net Coupon
9. ಯುರೋ 2021 Official


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.