ವಾಟ್ಸಾಪ್ ಗ್ರೂಪ್‌ನಲ್ಲಿ ಈ ಪದಗಳನ್ನು ಬಳಸಿದರೆ ಜೈಲು ಪಾಲಾಗಬಹುದು, ಹುಷಾರ್!
WhatsApp Group: ಪ್ರಸ್ತುತ ಜಗತ್ತಿನ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಕಚೇರಿ ಕೆಲಸಗಳು ಸೇರಿದಂತೆ ಹಲವು ಕೆಲಸಗಳನ್ನು ಬಹಳ ಸುಲಭಗೊಳಿಸಿದೆ. ಆದರೆ, ನಿಮಗೆ ಗೊತ್ತಾ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಕಲಿಸುವಾಗ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ನೀವು ಜೈಲು ಪಾಲಾಗಬಹುದು.
WhatsApp Group: ನೀವೂ ವಾಟ್ಸಾಪ್ ಬಳಕೆದಾರರೇ! ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ವಾಸ್ತವವಾಗಿ, ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸುವಾಗ ಅದರಲ್ಲೂ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವಾಗ ಬಹಳ ಎಚ್ಚರಿಕೆಯಿಂದ ಸಂದೇಶಗಳನ್ನು ಕಳುಹಿಸಬೇಕು. ಈ ಸಂದರ್ಭದಲ್ಲಿ ನಿಮಗೆ ಗೊತ್ತೋ/ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ನಿಮ್ಮನ್ನು ಜೈಲು ಪಾಲಾಗುವಂತೆ ಮಾಡಬಹುದು. ಹೌದು, ವಾಟ್ಸಾಪ್‌ನಲ್ಲಿ ಯಾವ ರೀತಿಯ ಸಂದೇಶಗಳನ್ನು ಕಳುಹಿಸಬಾರದು ಎಂದು ನೋಡುವುದಾದರೆ...
ವಾಟ್ಸಾಪ್ ಗ್ರೂಪ್‌ನಲ್ಲಿ ಅಪ್ಪಿತಪ್ಪಿಯೂ ಈ ಪದ ಬಳಸಲೇಬಾರದು:
ನೀವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಸಕ್ರಿಯರಾಗಿದ್ದರೆ ಯಾವುದೇ ಸಂದೇಶಗಳನ್ನು ಬರೆಯುವಾಗ ತುಂಬಾ ಎಚ್ಚರಿಕೆಯಿಂದ ಇರುವುದು ಅವಶ್ಯಕ. ಈ ಸಂದರ್ಭದಲ್ಲಿ ನೀವು ಮಾಡುವ ಕೆಲವು ತಪ್ಪುಗಳನ್ನು ನಿಮ್ಮನ್ನು ಜೈಲಿಗೆ ಸೇರಿಸಬಹುದು. ಹಾಗಾಗಿ, ಎಂತಹದ್ದೇ ಸಂದರ್ಭದಲ್ಲಿಯೂ ಸಹ ವಾಟ್ಸಾಪ್ ಗ್ರೂಪ್‌ನಲ್ಲಿ ಅಪ್ಪಿತಪ್ಪಿಯೂ ಈ ಕೆಳಗೆ ಉಲ್ಲೇಖಿಸಲಾದಂತಹ ಸಂದೇಶಗಳನ್ನು ಕಳುಹಿಸುವುದನ್ನು ತಪ್ಪಿಸಿ. ಆ ವಿಷಯಗಳೆಂದರೆ...
ಅಶ್ಲೀಲತೆಗೆ ಸಂಬಂಧಿಸಿದ ಪದಗಳು:
ನೀವು ಯಾವುದೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ಅಶ್ಲೀಲತೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನಾಗಲಿ, ಇಲ್ಲವೇ ಪದಗಳನ್ನಾಗಲಿ ಬರೆದರೆ ಆ ಗ್ರೂಪ್‌ನಲ್ಲಿರುವ ಯಾವುದೇ ಒಬ್ಬ ಸದಸ್ಯಣಿಗೆ ನಿಮ್ಮ ಸಂದೇಶವು ಅಶ್ಲೀಲ ಎನಿಸಿದರೆ, ಇಲ್ಲವೇ ಅದು ಅವರ ಗೌರವಕ್ಕೆ ಧಕ್ಕೆ ತರುವ ವಿಷಯವಾಗಿದ್ದರೆ ಈ ಸಂದೇಶವನ್ನು ಬಳಸಿ ಅವರು ನಿಮ್ಮ ಮೇಲೆ ದೂರನ್ನು ದಾಖಲಿಸಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಅಗತ್ಯವಿದ್ದರೆ ನಿಮ್ಮನ್ನು ಬಂಧಿಸಲೂ ಬಹುದು.
ಇದನ್ನೂ ಓದಿ- ಸ್ಟ್ರಾಂಗ್ ಬ್ಯಾಟರಿಯೊಂದಿಗೆ 5G ಸ್ಮಾರ್ಟ್‌ಫೋನ್ ಪರಿಚಯಿಸಲಿರುವ Nokia
ದೇಶ ವಿರೋಧಿ ಪದಗಳು:
ಈದಲ್ಲದ ಯಾವುದೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ದೇಶ ವಿರೋಧಿ ಮಾತುಕತೆಗಳನ್ನು ನಡೆಸುವುದಾಗಲಿ, ಇಲ್ಲವೇ, ದೇಶ ವಿರೋಧಿ ಪದಗಳನ್ನು ಬಳಸುವುದಾಗಲಿ ಮಾಡಿದರೆ ಅಂತಹ ಸಂದರ್ಭದಲ್ಲಿಯೂ ನೀವು ಸಂಕಷ್ಟಕ್ಕೆ ಸೀಳುಕಬಹುದು. ಈ ವಿಷಯಗಳ ಕುರಿತಂತೆ ಯಾರಾದರೂ ತಂಡದ ಸದಸ್ಯರು ನಿಮ್ಮ ವಿರುದ್ಧ ದೂರು ನೀಡಿದರೆ ನೀವು ಜೈಲು ಪಾಲಾಗಬಹುದು.
ಇದನ್ನೂ ಓದಿ- ಫ್ರಿಡ್ಜ್‌ನಲ್ಲಿರುವ ಈ ಬಟನ್ ಒತ್ತಲು ನೀವೂ ಭಯ ಪಡುತ್ತೀರಾ? ಈ ಸುದ್ದಿಯನ್ನೊಮ್ಮೆ ಓದಿ
ಚೈಲ್ಡ್ ಕ್ರೈಂ:
ಯಾವುದೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ನೀವು ಮಕ್ಕಳ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಹಂಚಿಕೊಂಡಿದ್ದೇ ಆದರೆ, ಇಲ್ಲವೇ, ಈ ಸಂಬಂಧ ಯಾವುದೇ ಫೋಟೋ, ವಿಡಿಯೋ, ಇಲ್ಲವೇ ಆಕ್ಷೇಪಾರ್ಹ ಪಠ್ಯಗಳನ್ನು ಶೇರ್ ಮಾಡಿದ್ದೆ ಆದರೆ ಅಂತಹ ಸಂದರ್ಭದಲ್ಲಿಯೂ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಬಹುದಾಗಿದೆ. ಈ ಸಂದರ್ಭದಲ್ಲಿ ಮುಲಾಜಿಲ್ಲದೆ ನೀವು ಜೈಲು ಸೇರುತ್ತೀರಿ. ಹಾಗಾಗಿ, ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸುವಾಗ ಬಹಳ ಎಚ್ಚರಿಕೆಯಿಂದ, ಜಾಗರೂಕರಾಗಿ ಪದಬಳಕೆ ಮಾಡುವುದು ತುಂಬಾ ಅವಶ್ಯಕವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.