5G Smartphone Tips : ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ನೆಟ್‌ವರ್ಕ್ ಗೆ ಚಾಲನೆ ನೀಡಿದ್ದಾರೆ. ಅಕ್ಟೋಬರ್ 1 ರಂದು ದೇಶದಲ್ಲಿ ವಾಣಿಜ್ಯ 5G ಸೇವೆಗಳಿಗೆ ಚಾಲನೆ ನೀಡಲಾಗಿದೆ. ಭಾರತದಾದ್ಯಂತ ಹಂತ ಹಂತವಾಗಿ 5G ಲಭ್ಯವಾಗಲಿದೆ. ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ, ಪುಣೆ, ಸಿಲಿಗುರಿ ಮತ್ತು ವಾರಣಾಸಿ ಸೇರಿದಂತೆ ಹಲವು ನಗರಗಳಲ್ಲಿ 5G ನೆಟ್‌ವರ್ಕ್ ಲಭ್ಯವಿರುತ್ತದೆ. ಏರ್‌ಟೆಲ್ ತನ್ನ 5G ಸೇವೆಯನ್ನು ಈಗಾಗಲೇ ಪ್ರಾರಂಭಿಸಿದೆ. Jio ಈ ವರ್ಷ ದೀಪಾವಳಿಯಿಂದ ಅಂದರೆ ಅಕ್ಟೋಬರ್ 24ರಿಂದ  ತನ್ನ 5G ಸೇವೆಯನ್ನ ಪ್ರಾರಂಭಿಸಲಿದೆ. 5G ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಜನರು ಇದೀಗ 5G ಫೋನ್ ಖರೀದಿಸಲು ಮುಂದಾಗಿದ್ದಾರೆ. ಆದರೆ, 5G ಫೋನ್ ಖರೀದಿಸುವ ವೇಳೆ ಕೆಲವು ವಿಷಯಗಳ ಬಗ್ಗೆ ಗಮನ  ಹರಿಸಬೇಕು. ಇಲ್ಲವಾದರೆ,  ನೆಟ್ವರ್ಕ್ ಸ್ಪೀಡ್ 4G ಗಿಂತಲೂ ಕಡಿಮೆಯಿರುತ್ತದೆ. 


COMMERCIAL BREAK
SCROLL TO CONTINUE READING

ಫೋನ್ ಹೆಚ್ಚು ಹೆಚ್ಚು ಬ್ಯಾಂಡ್‌ಗಳನ್ನು ಹೊಂದಿರಬೇಕು :
ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ,  ಸಿಂಗಲ್ 5G ಬ್ಯಾಂಡ್ ಹೊಂದಿರುವ ಫೋನ್ ಖರೀದಿಸಬಾರದು. ಸಿಂಗಲ್ ಬ್ಯಾಂಡ್ ಹೊಂದಿರುವ ಫೋನ್‌ಗಳು 4Gಯಷ್ಟೇ ವೇಗವನ್ನು ನೀಡುವ ಸಾಧ್ಯತೆಯಿದೆ. ಯಾವ ಬ್ಯಾಂಡ್‌ಗಳು ಭಾರತದಲ್ಲಿ ಸಪೋರ್ಟ್ ಮಾಡುತ್ತವೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಆದ್ದರಿಂದ, ಗರಿಷ್ಠ ಬ್ಯಾಂಡ್ ಗಳ ಸ್ಮಾರ್ಟ್ಫೋನ್ ಖರೀದಿಸುವುದು ಒಳಿತು. 


ಇದನ್ನೂ ಓದಿ : 5G Services : Jio, Airtel ಮತ್ತು Vi ನ 5G ಸೇವೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ


ಯಾವ ಬ್ಯಾಂಡ್ ಉತ್ತಮ ನೆಟ್‌ವರ್ಕ್ ಪಡೆಯುತ್ತದೆ ? : 
5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರು ಎಂಎಂವೇವ್ ರೇಡಿಯೊ ಫ್ರೀಕ್ವೆನ್ಸಿ ಹೊಂದಿರುವ ಫೋನ್‌ಗಳನ್ನು ಖರೀದಿಸಬಾರದು. Sub-6Ghz 5G ಫ್ರೀಕ್ವೆನ್ಸಿ ಹೊಂದಿರುವ  ಸ್ಮಾರ್ಟ್‌ಫೋನ್ ಖರೀದಿಸಲು ಸಲಹೆ ನೀಡಲಾಗುತ್ತದೆ. ಇವುಗಳನ್ನು ಮಧ್ಯಮ ಶ್ರೇಣಿಯ ಬ್ಯಾಂಡ್‌ಗಳು ಎಂದು ಕರೆಯಲಾಗುತ್ತದೆ. ಇದು ಪ್ರತಿ ಕೆಲಸಕ್ಕೂ ಉತ್ತಮವಾಗಿರುತ್ತದೆ. 


ಬ್ಯಾಟರಿ ಬಾಳಿಕೆ ಅತ್ಯಂತ ಮುಖ್ಯ : 
ಹೆಚ್ಚಿನ ಡೇಟಾವನ್ನು ಸ್ವೀಕರಿಸುವುದರಿಂದ ಹೆಚ್ಚು ಬ್ಯಾಟರಿ ಖರ್ಚಾಗುತ್ತದೆ. ಹೊಸ 5G ಫೋನ್ ಅನ್ನು ಖರೀದಿಸುವುದಾದರೆ, ಬ್ಯಾಟರಿ ಬಗ್ಗೆ ಹೆಚ್ಚು ಗಮನ ಹರಿಸಬೇಕು.  5G ಫೋನ್‌ಗಳಲ್ಲಿ, ಸಿಗ್ನಲ್ ಸ್ವೀಕರಿಸಲು ಮೂರು ಹೆಚ್ಚುವರಿ ಆಂಟೆನಾಗಳನ್ನು ಒದಗಿಸಲಾಗಿರುತ್ತದೆ. ಕಡಿಮೆ ಬ್ಯಾಟರಿ ಹೊಂದಿರುವ ಫೋನ್ ಅನ್ನು ಬಳಸಿದರೆ, ಬ್ಯಾಟರಿ ಬಿಸಿಯಾಗುವುದು ಮತ್ತು ತ್ವರಿತ ಡಿಸ್ಚಾರ್ಜ್ ಸಮಸ್ಯೆ  ಎದುರಿಸಬೇಕಾಗಬಹುದು. 


ಇದನ್ನೂ ಓದಿ : ಶೀಘ್ರದಲ್ಲಿ ಟ್ವಿಟ್ಟರ್ ನಲ್ಲಿಯೂ ಕೂಡ ನಿಮ್ಮ ಪೋಸ್ಟ್ ಎಡಿಟ್ ಮಾಡಬಹುದು..! ಹೇಗೆ ಅಂತೀರಾ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.