WhatsApp Call Charge : ಬಳಕೆದಾರರ ಅನುಕೂಲಕ್ಕಾಗಿ  ವಾಟ್ಸಾಪ್ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ವಾಟ್ಸಾಪ್  ಅನ್ನು ಚಾಟಿಂಗ್, ವಿಡಿಯೋ ಆಡಿಯೋ ಶೇರಿಂಗ್ ಗಾಗಿ ಬಳಸಲಾಗುತ್ತದೆ. ಇತ್ತೀಚೆಗೆ ಬಹುತೇಕ ಮಂದಿ ವಾಟ್ಸಾಪ್ ಅನ್ನು ಕರೆ ಮಾಡುವುದಕ್ಕಾಗಿಯೂ ಬಳಸುತ್ತಾರೆ. ಇಲ್ಲಿಯವರೆಗೆ ವಾಟ್ಸಾಪ್ ಕರೆ ಮಾಡುವ ವೈಶಿಷ್ಟ್ಯವನ್ನು ಬಳಕೆದಾರರು ಉಚಿತವಾಗಿ ಬಳಸಬಹುದಾಗಿತ್ತು. ಆದರೆ ಇನ್ನು ಮುಂದೆ, ಈ ವೈಶಿಷ್ಟ್ಯವನ್ನು ಉಚಿತವಾಗಿ ಬಳಸುವುದು ಸಾಧ್ಯವಾಗುವುದಿಲ್ಲ.  ಬಳಕೆದಾರರು ವಾಟ್ಸಾಪ್ ಕರೆ ಮಾಡಬೇಕಾದರೆ ಅದಕ್ಕೆ ಹಣ ಪಾತಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಮುಂದಿನ ದಿನಗಳಲ್ಲಿ ವಾಟ್ಸಾಪ್ ಕರೆಗಳಿಗಾಗಿ ಕಂಪನಿಗೆ ಶುಲ್ಕ  ಪಾವತಿಸಬೇಕಾಗಬಹುದು : 
ವಾಟ್ಸಾಪ್‌ನಲ್ಲಿ ಕರೆ ಮಾಡುವುದು ಇನ್ನು ಮುಂದೆ ದುಬಾರಿಯಾಗಿ ಪರಿಣಮಿಸಬಹುದು.  ವಾಟ್ಸಾಪ್ ಕರೆ ಮಾಡಿದರೂ ಇನ್ನು ಮುಂದೆ ಜೇಬಿಗೆ ಕತ್ತರಿ ಬೀಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕಂಪನಿಯು ಈ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಂಪನಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಒಂದು ವೇಳೆ  ಕಂಪನಿ ಈ ಬಗ್ಗೆ ತೀರ್ಮಾನ ಕೈಗೊಂಡರೆ, ವಾಟ್ಸಾಪ್  ಕರೆ ಮಾಡುವುದಕ್ಕೆ ಹಣ ಪಾವತಿಸಬೇಕಾಗುತ್ತದೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ವಾಟ್ಸಾಪ್ ಬಳಕೆದಾರರಿಗೆ ಶಾಕ್ ಆಗಿದ್ದಂತೂ ಸುಳ್ಳಲ್ಲ. ಯಾಕೆಂದರೆ, ಈಗಾಗಲೇ ಬಹುತೇಕ ಮಂದಿ ನಾರ್ಮಲ್ ಕಾಲಿಂಗ್ ಬದಲು ವಾಟ್ಸಾಪ್ ಕಾಲ್ ಅನ್ನೇ ಅವಲಂಬಿಸಿದ್ದಾರೆ. 


ಇದನ್ನೂ ಓದಿ : Jio Fiber: ಮಾರುಕಟ್ಟೆಯಲ್ಲಿ ಭಾರಿ ಭಾರಿ ಹಲ್ ಚಲ್ ಸೃಷ್ಟಿಸಿದೆ ಜಿಯೋ ಫೈಬರ್ನ ಈ ಅಗ್ಗದ ಪ್ಲಾನ್


ನಷ್ಟ ಎದುರಿಸುತ್ತಿರುವ ಟೆಲಿಕಾಂ ಕಂಪನಿಗಳು :
 ಮೊದಲೇ ಹೇಳಿದಂತೆ ವಾಟ್ಸಾಪ್ ಕರೆ ಉಚಿತವಾಗಿರುವ  ಕಾರಣ, ಬಹುತೇಕ ಮಂದಿ ಇದರ ಮೊರೆ ಹೋಗಿದ್ದಾರೆ. ಯಾವುದೇ ಸಿಮ್ ಕಾರ್ಡ್ ಇಲ್ಲದೆಯೂ ಇಂಟರ್ನೆಟ್ ಸಹಾಯದಿಂದ WhatsApp ಕರೆಗಳನ್ನು ಮಾಡಬಹುದು. ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ನಷ್ಟ ಅನುಭವಿಸುತ್ತಿರುವುದು ಸುಳ್ಳಲ್ಲ. ಈ ಕಾರಣದಿಂದಲೇ  ವಾಟ್ಸಾಪ್ ಕರೆಗೆ ಹಣ ವಿಧಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.  ಈ ಕಾರಣಕ್ಕಾಗಿಯೇ ಈ ಇಂಟರ್ನೆಟ್ ಕರೆಗಳಿಗೆ ಶುಲ್ಕ ವಿಧಿಸುವ ನಿರ್ಧಾರದ ಕುರಿತು DoT ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದಿಂದ ಅಭಿಪ್ರಾಯ ಕೇಳಿದೆ.  ಈ ಎಯಾ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ  ವಾಟ್ಸಾಪ್ ಕರೆಗಳಿಗೂ ಬಹು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. 


ಇದನ್ನೂ ಓದಿ :  ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ iPhone 14! ಮಿಸ್‌ ಮಾಡದಿರಿ ಈ ಚಾನ್ಸ್‌


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.