ಪ್ರಸ್ತುತ ಸ್ಮಾರ್ಟ್‌ಫೋನ್‌ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಫೋನ್ ಸಹಾಯದಿಂದ, ನಮ್ಮ ದೈನಂದಿನ ಜೀವನದ ಕಾರ್ಯಗಳು ಶುರುವಾಗುತ್ತವೆ. ಅದು ಬ್ಯಾಂಕಿಂಗ್ ಕೆಲಸ ಆಗಿರಬಹುದು, ದಿನಸಿ  ಶಾಪಿಂಗ್ ಅಥವಾ ಅಗತ್ಯ ಅಪ್ಲಿಕೇಶನ್‌ಗಳೇ ಆಗಿರಲಿ ಅವುಗಳನ್ನ  ಫೋನ್‌ನಲ್ಲಿಯೇ ಮಾಡಲಾಗುತ್ತದೆ. ಇದಲ್ಲದೆ, ನಮ್ಮ ಫೋಟೋಗಳು, ವೀಡಿಯೊಗಳನ್ನು ಸಹ ಫೋನ್‌ನಲ್ಲಿ ಸೇವ್ ಮಾಡಲಾಗುತ್ತದೆ. ಮೇಲ್ ನಲ್ಲಿ ಬರುವ ದಾಖಲೆಗಳನ್ನು ಸಹ ಫೋನ್‌ನಲ್ಲಿ ಸೇವ್ ಮಾಡುತ್ತವೆ. ಅನೇಕ ಕೆಲಸಗಳನ್ನು ಮೊಬೈಲ್ ನಲ್ಲಿ ಮಾಡುವುದರಿಂದ ಮತ್ತು ಎಲ್ಲಾ ಫೈಲ್ ಗಳನ್ನ ಉಳಿಸುವುದರಿಂದ, ಫೋನ್‌ನ ಸ್ಟೋರ್ ಸಾಮರ್ಥ್ಯವು ಕಡಿಮೆಯಾಗುತ್ತದೆ ಮತ್ತು ಇದು ಫೋನ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಫೋನ್‌ನ ಸಾಮರ್ಥ್ಯವನ್ನು ನೀವು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂಬುದನ್ನು ಇಲ್ಲಿ ನಾವು ತಿಳಿಸುತ್ತಿದ್ದೇವೆ. 


COMMERCIAL BREAK
SCROLL TO CONTINUE READING

ಸ್ಟೋರೇಜ್ ಮೆಮೊರಿಯನ್ನು(Cache Memory) ಡಿಲೀಟ್ ಮಾಡಿ:


ಸ್ಟೋರೇಜ್ ನಲ್ಲಿ ಅನೇಕ ಫೈಲ್ ಉಳಿಸಲಾಗಿರುವುದರಿಂದ ಕೆಲವೇ ದಿನಗಳಲ್ಲಿ ಸ್ಟೋರೇಜ್(Storage) ತುಂಬುತ್ತದೆ. ಲೋಡ್ ಮಾಡುವ ಸಮಯವನ್ನು ಕಡಿಮೆ ಮಾಡಲು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಸಾಕಷ್ಟು ಡೇಟಾವನ್ನು ಸಂಗ್ರಹಿಸುತ್ತವೆ. ಸಂಗ್ರಹ ಮೆಮೊರಿಯಲ್ಲಿರುವ ಬೇಡವಾದ ಫೈಲ್ ಗಳನ್ನ ಡಿಲೀಟ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಸ್ಟೋರೇಜ್ ಉಳಿಯುತ್ತದೆ.


ಇದನ್ನೂ ಓದಿ : Best Prepaid Plans Bellow 100 Rupees: 100 ರೂ.ಗಿಂತಲೂ ಕಮ್ಮಿ ಬೆಲೆಗೆ ಸಿಗುವ ಈ ಪ್ಲಾನ್ ನಲ್ಲಿ ಸಿಗುತ್ತೆ 21GB ಡೇಟಾ


ಡೌನ್‌ಲೋಡ್‌ ಫೈಲ್ಸ್ ಗಳನ್ನ ಡಿಲೀಟ್ ಮಾಡಿ :


ನಾವು ಆಗಾಗ್ಗೆ ಫೋನ್‌ನಲ್ಲಿರುವ ಫೈಲ್‌ಗಳನ್ನು ಮೇಲ್ ಮೂಲಕ ಡೌನ್‌ಲೋಡ್(Downloads) ಮಾಡುತ್ತಲೇ ಇರುತ್ತೇವೆ. ಡೌನ್‌ಲೋಡ್ ಮಾಡಿದ ನಂತರ, ಅದನ್ನು ಎಲ್ಲೋ ಸೇವ್ ಆಗಿರುತ್ತೆ ಎಂಬುದನ್ನು ನಾವು ಮರೆಯುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಫೋನ್‌ನ ಡೌನ್‌ಲೋಡ್‌ಗೆ ಹೋಗಿ ಮತ್ತು ಬೇಡವಾದ ಫೈಲ್ ಅನ್ನು ಡಿಲೀಟ್ ಮಾಡಿ. ಇದರಿಂದ ನಿಮಗೆ ಸ್ಟೋರೇಜ್ ಉಳಿಯುತ್ತದೆ.


ಇದನ್ನೂ ಓದಿ : COVID-19 Vaccine Certificate : ಲಸಿಕೆ ಹಾಕಿಸಿಕೊಂಡ ನಂತರ ಈ ತಪ್ಪು ಮಾಡಿದವರಿಗೆ ಸರ್ಕಾರದ ಎಚ್ಚರಿಕೆ


App ಗಳನ್ನ ಆಗಾಗ ಕ್ಲಿನ್ ಮಾಡಿ :


ಫೋನ್‌ನ ಮೆಮೊರಿ ಹೆಚ್ಚಾದಾಗ ಬಳಕೆದಾರರು ಅನೇಕ ಅಪ್ಲಿಕೇಶನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಬದಲಿಗೆ ಗೂಗಲ್ ಫೈಲ್‌ (Google File) ಆಪ್ ಬಳಸಿ. ಇದು ಕ್ಲೀನಿಂಗ್ ಆ್ಯಪ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಸ್ಟೋರೇಜ್ ಸಾಮರ್ಥ್ಯವನ್ನು ಸಹ ಸುಧಾರಿಸುತ್ತದೆ.


ಇದನ್ನೂ ಓದಿ : ನಿಮ್ಮ Smart Phone ಬೇರೆ ಅವರಿಗೆ ಮಾರುವ ಮುನ್ನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!


WhatsApp ಅಥವಾ ಬೇರೆಡೆಯಿಂದ ಬರುವ video ಡಿಲೀಟ್ ಮಾಡಿ :


ನೀವು ಪ್ರತಿದಿನ ವಾಟ್ಸಾಪ್(WhatsApp) ಅಥವಾ ಇತರ ಕಡೆಯಿಂದ ಹೆಚ್ಚಿನ ಸಂಖ್ಯೆಯ ವೀಡಿಯೊಗಳು ಬರುತ್ತಲೇ ಇರುತ್ತವೆ. ಈ ಎಲ್ಲಾ ವೀಡಿಯೊಗಳು ಯಾವುದೇ ಪ್ರಯೋಜನವಿಲ್ಲ. ಹೆಚ್ಚಿನ ವೀಡಿಯೊಗಳು ಗುಡ್ ಮಾರ್ನಿಂಗ್, ಫನ್ನಿ ವಿಡಿಯೋಗಳನ್ನ ಡಿಲೀಟ್ ಮಾಡಿ. ಇದರಿಂದ ಫೋನ್‌ನ ಸ್ಟೋರೇಜ್ ಸಾಮರ್ಥ್ಯವನ್ನು ಮರುಪಡೆಯಬಹುದು.


ಇದನ್ನೂ ಓದಿ : ಭಾರತದಲ್ಲಿನ ನೂತನ ಡಿಜಿಟಲ್ ನಿಯಮಗಳ ಬಗ್ಗೆ ಗೂಗಲ್ ನ ಸುಂದರ್ ಪಿಚ್ಚೈ ಹೇಳಿದ್ದೇನು?


ಬಳಕೆಯಾಗದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ :


ಮೊಬೈಲ್(Mobile) ನಲ್ಲಿ ಬಳಕೆಯಾಗದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದರಿಂದ ಸ್ಟೋರೇಜ್  ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದರೊಂದಿಗೆ, ನೀವು ಫೋನ್‌ನ ಸ್ಟೋರೇಜ್  ಗಮನಾರ್ಹವಾಗಿ ಹೆಚ್ಚಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.