New Technology: ಭಾರತೀಯ ಮೂಲದ ವಿಜ್ಞಾನಿ, ಅಮೆರಿಕದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ರಾಸಾಯನಿಕ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಂಕುರ್ ಗುಪ್ತಾ (Ankur Gupta) ಮತ್ತು ಅವರ ತಂಡ ಅದ್ಭುತ ಆವಿಷ್ಕಾರವನ್ನು ಹೊರತಂದಿದೆ. ಈ ತಂತ್ರಜ್ಞಾನವನ್ನು ಬಳಸಿ ಪೂರ್ತಿ ಬ್ಯಾಟರಿ ಖಾಲಿಯಾಗಿರುವ ಫೋನ್, ಲ್ಯಾಪ್‌ಟಾಪ್ ಅನ್ನು ಕೇವಲ ಒಂದು ನಿಮಿಷದಲ್ಲಿ ಮತ್ತು ಎಲೆಕ್ಟ್ರಿಕ್ ಕಾರ್ ಅನ್ನು ಹತ್ತೇ ಹತ್ತು ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂಬ ಅಂಶ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ (Journal Proceedings of the National Academy of Sciences) ಪ್ರಕಟವಾದ ಅಧ್ಯಯನದ ಪ್ರಕಾರ, ಸೂಕ್ಷ್ಮ ರಂಧ್ರಗಳ ಸಂಕೀರ್ಣ ಜಾಲದೊಳಗೆ ಸಣ್ಣ ಚಾರ್ಜ್ಡ್ ಕಣಗಳಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. 


ಈ ಅಧ್ಯಯದ ರುವಾರಿಯಾದ ಭಾರತೀಯ ಮೂಲದ ವಿಜ್ಞಾನಿ ಅಂಕುರ್ ಗುಪ್ತಾ  (Indian-born scientist Ankur Gupta) ಅವರ ಪ್ರಕಾರ, ಈ ಅಭೂತಪೂರ್ವ ಆವಿಷ್ಕಾರವು ಸೂಪರ್ ಕೆಪಾಸಿಟರ್‌ಗಳಂತಹ ಹೆಚ್ಚು ಪರಿಣಾಮಕಾರಿ ಶೇಖರಣಾ ಸಾಧನಗಳ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- WhatsApp ಹ್ಯಾಕ್ ಆಗದಂತೆ ತಡೆಯಲು ಈ ಐದು ಟಿಪ್ಸ್ ಅನುಸರಿಸಿ


ತ್ವರಿತ ಚಾರ್ಜ್ ಆಗುವಿಕೆ: 
ಸಂಶೋಧಕರ ಪ್ರಕಾರ, ಸೂಪರ್ ಕೆಪಾಸಿಟರ್ (Super Capacitor) ಶಕ್ತಿಯ ಶೇಖರಣಾ ಸಾಧನವಾಗಿದೆ. ಇದು ಸಣ್ಣ ಅಯಾನು ಸಂಗ್ರಹ ರಂಧ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಇವು ಬ್ಯಾಟರಿಗಳಿಗೆ ಹೋಲಿಸಿದರೆ, ಸೂಪರ್‌ಕೆಪಾಸಿಟರ್‌ಗಳು ವೇಗವಾಗಿ ಚಾರ್ಜಿಂಗ್ ಸಮಯ ಮತ್ತು ಉಡಾವಣಾ ಜೀವನವನ್ನು ಹೊಂದಿವೆ ಎಂದು ಅಂಕುರ್ ಗುಪ್ತಾ ಹೇಳಿದ್ದಾರೆ. 


ಈ ಹೊಸ ಆವಿಷ್ಕಾರವು ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸಾಧನಗಳಲ್ಲಿ ಶಕ್ತಿಯನ್ನು ಸಂಗ್ರಹಿಸಲು ಮಾತ್ರವಲ್ಲದೆ ವಿದ್ಯುತ್‌ನ ಸಂಪೂರ್ಣ ಕಾರ್ಯವಿಧಾನಕ್ಕೂ ಬಹಳ ಮುಖ್ಯವಾಗಿದೆ ಎಂದು ಈ ಸಂಶೋಧನೆಯ  ಸಹಾಯಕ ಪ್ರಾಧ್ಯಾಪಕರೊಬ್ಬರು  ತಿಳಿಸಿದ್ದಾರೆ. ವಿದ್ಯುತ್ ವ್ಯವಸ್ಥೆಗೆ ಸಂಬಂಧಿಸಿದಂತೆ, ಅಗತ್ಯಕ್ಕೆ ಅನುಗುಣವಾಗಿ ಬದಲಾಗುತ್ತಿರುವ ವಿದ್ಯುತ್ ಅನ್ನು ಸರಿಯಾಗಿ ನಿರ್ವಹಿಸಲು, ಕಡಿಮೆ ಸಮಯದಲ್ಲಿ ವಿದ್ಯುತ್ ಉಳಿಸುವ ಮತ್ತು ಹೆಚ್ಚಿನ ಅಗತ್ಯದ ಸಮಯದಲ್ಲಿ ತ್ವರಿತವಾಗಿ ವಿದ್ಯುತ್ ನೀಡುವ ಇಂತಹವುಗಳ ಅವಶ್ಯಕತೆಯಿದೆ ಎಂದವರು ಉಲ್ಲೇಖಿಸಿದ್ದಾರೆ. 


ಇದನ್ನೂ ಓದಿ- Jio Prepaid Plans: ಜಿಯೋದ ಈ ಯೋಜನೆಗಳಲ್ಲಿ Netflix, Amazon Prime, Disney+ Hotstar ಫುಲ್ ಫ್ರೀ
 
ಸೂಪರ್ ಕೆಪಾಸಿಟರ್‌ನ ವಿಶೇಷತೆ ಬಗ್ಗೆ ಸಂಶೋಧಕರು ಹೇಳಿದ್ದೇನು? 

ಸಂಶೋಧಕರ ಪ್ರಕಾರ, ಸೂಪರ್ ಕೆಪಾಸಿಟರ್‌ನ ಪ್ರಮುಖ ವಿಶೇಷತೆ ಅದರ ವೇಗ. ಈ ಸಂಶೋಧನೆಯು ಸಾವಿರಾರು ಸಣ್ಣ ಅಂತರ್ಸಂಪರ್ಕಿತ ರಂಧ್ರಗಳನ್ನು ಒಳಗೊಂಡಿರುವ ಸಂಕೀರ್ಣ ಜಾಲದಲ್ಲಿ ಕೆಲವೇ ನಿಮಿಷಗಳಲ್ಲಿ ಅಯಾನುಗಳ ಚಲನೆಯನ್ನು ಅಂದಾಜು ಮಾಡಲು ಸಹಾಯ ಮಾಡುತ್ತದೆ. ಈ ಆವಿಷ್ಕಾರದ ಮೊದಲು, ವಿಜ್ಞಾನಿಗಳು ನೇರ ರಂಧ್ರದಲ್ಲಿ ಅಯಾನುಗಳ ಚಲನೆಯ ಬಗ್ಗೆ ಮಾತ್ರ ತಿಳಿದಿದ್ದರು ಎಂದು ಸಂಶೋಧಕರ ತಂಡ ಮಾಹಿತಿ ನೀಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.