ನಿಮ್ಮ ಫೋನಿಗೂ ಪದೇ ಪದೇ ಬರುತ್ತಿದೆಯೇ Emergency Alert!ಇದರ ಹಿಂದಿನ ಕಾರಣ ತಿಳಿದುಕೊಳ್ಳಿ
Emergency Alert Message:ಎಮರ್ಜೆನ್ಸಿ ಅಲರ್ಟ್ ಹೆಸರಿನಲ್ಲಿ ಜನರಿಗೆ ಸಂದೇಶ ಕಳುಹಿಸಲಾಗಿದೆ. ಸಂದೇಶ ಬಂದ ಸಮಯದಲ್ಲಿ, ಫೋನ್‌ನಲ್ಲಿ ಬಹಳ ಜೋರಾಗಿ ಧ್ವನಿ ಕೇಳಿ ಬಂದಿದೆ.
Emergency Alert Message : ಭಾರತ ಸರ್ಕಾರವು ತುರ್ತು ಎಚ್ಚರಿಕೆ ವ್ಯವಸ್ಥೆಯ ( Emergency Alert System)ಟೆಸ್ಟಿಂಗ್ ನಡೆಸುತ್ತಿದೆ. ಈ ಟೆಸ್ಟ್ ನಡೆಸುತ್ತಿರುವಾಗ ಅನೇಕ ಬಳಕೆದಾರರ ಫೋನ್ ಗೆ ಸಂದೇಶ ಬಂದಿದೆ. ಎಮರ್ಜೆನ್ಸಿ ಅಲರ್ಟ್ ಹೆಸರಿನಲ್ಲಿ ಜನರಿಗೆ ಸಂದೇಶ ಕಳುಹಿಸಲಾಗಿದೆ. ಸಂದೇಶ ಬಂದ ಸಮಯದಲ್ಲಿ, ಫೋನ್‌ನಲ್ಲಿ ಬಹಳ ಜೋರಾಗಿ ಧ್ವನಿ ಕೇಳಿ ಬಂದಿದೆ. ಹೀಗೆ ಬಂದಿರುವ ಮೆಸೇಜ್ Emergency Alertನದ್ದಾಗಿತ್ತು. ಈ ಮೆಸೇಜ್ Severe ಫ್ಲ್ಯಾಷ್‌ನೊಂದಿಗೆ ಬಂದಿದೆ. ಇದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಿದ್ಧಪಡಿಸುತ್ತಿದೆ. ತುರ್ತು ಸಮಯದಲ್ಲಿ ಎಚ್ಚರಿಕೆಗಳನ್ನು ಕಳುಹಿಸಲು ಈ ಸಂದೇಶಗಳನ್ನು ಬಳಸಲಾಗುತ್ತದೆ.
ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಎಷ್ಟು ಹೊತ್ತಿಗೆ ಬಂತು? :
ಸಿಸ್ಟಂ ಅನ್ನು ಟೆಸ್ಟ್ ಮಾಡಲು ಸರ್ಕಾರವು ಜಿಯೋ ಮತ್ತು ಬಿಎಸ್ಎನ್ಎಲ್ ಬಳಕೆದಾರರಿಗೆ ನಿನ್ನೆ ಮಧ್ಯಾಹ್ನ 1.30 ಕ್ಕೆ ಸಂದೇಶವನ್ನು ಕಳುಹಿಸಿದೆ. ಈ ಸಂದೇಶವನ್ನು ಸಿ-ಡಾಟ್ ಮೂಲಕ ಕಳುಹಿಸಲಾಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಮತ್ತೊಂದು ಸಂದೇಶವನ್ನು ಕಳುಹಿಸಲಾಗಿದ್ದು, ಇದು ಕೇವಲ ಟೆಸ್ಟಿಂಗ್ ಮೆಸ್ಸೇಜ್ ಎಂದು ಜನರಿಗೆ ತಿಳಿಸಲಾಗಿದೆ. ಸಿ-ಡಾಟ್ ಪ್ರಕಾರ, ವಿವಿಧ ಸ್ಥಳಗಳಲ್ಲಿ ಇದೇ ರೀತಿಯ ಪರೀಕ್ಷೆಯನ್ನು ಮಾಡಲಾಗುತ್ತದೆ.
ಇದನ್ನೂ ಓದಿ : Sim Card New Rules: ಈಗ ಒಂದು ಐಡಿಯಲ್ಲಿ ಇಷ್ಟು ಸಿಮ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು
ಎಮೆರ್ಜೆನ್ಸಿ ಅಲರ್ಟ್ ಸಿಸ್ಟಮ್ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್‌ನ ಸಾಮರ್ಥ್ಯಗಳು ಮತ್ತು ಪರಿಣಾಮಕಾರಿತ್ವವನ್ನು ಪರೀಕ್ಷಿಸುವ ಉದ್ದೇಶವಾಗಿದೆ. ಸಿ-ಡಾಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಜ್‌ಕುಮಾರ್ ಉಪಾಧ್ಯಾಯ ಮಾತನಾಡಿ, ಪ್ರಸ್ತುತ ಈ ತಂತ್ರಜ್ಞಾನವನ್ನು ವಿದೇಶಿ ಮಾರಾಟಗಾರರು ಒದಗಿಸುತ್ತಿದ್ದಾರೆ. ಆದ್ದರಿಂದ ಸಿ-ಡಾಟ್ ಈ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್‌ಕುಮಾರ್ ಉಪಾಧ್ಯಾಯ ಅವರು 'ಸೆಲ್ ಬ್ರಾಡ್‌ಕಾಸ್ಟಿಂಗ್ ಟೆಕ್ನಾಲಜಿ'ಯ ಕೆಲಸವು ಪ್ರಸ್ತುತ ನಡೆಯುತ್ತಿದೆ. ಇದನ್ನು 'ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ' (ಎನ್‌ಡಿಎಂಎ) ಅನುಷ್ಠಾನಗೊಳಿಸಲಿದೆ ಎಂದು ಹೇಳಿದರು. ಈ ತಂತ್ರಜ್ಞಾನವನ್ನು ಪ್ರಸ್ತುತ Jio ಮತ್ತು BSNL ನಲ್ಲಿ ಪರೀಕ್ಷಿಸಲಾಗುತ್ತಿದೆ.
ಈ ಸಂದೇಶದ ಹಲವು ಆವೃತ್ತಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಬಂದಿರುವ ಸಂದೇಶದಲ್ಲಿ, 'ಇದು ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್ ಇದನ್ನು ಭಾರತ ಸರ್ಕಾರ ಕಳುಹಿಸಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಕೇವಲ ಟೆಸ್ಟಿಂಗ್ ಉದ್ದೇಶದಿಂದ ಮಾತ್ರ ಇದನ್ನೂ ಕಳುಹಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಇದನ್ನೂ ಓದಿ : ನಿಮ್ಮ ಫೋನ್ ಗೆ ಸ್ಕ್ರೀನ್ ಗಾರ್ಡ್ ಹಾಕಿದ್ದೀರಾ ? ಹಾಗಿದ್ದರೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ