ಮಾತನಾಡುವ ಬದಲು ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿ ಆಗುತ್ತಿರುವುದು ಇದಕ್ಕೆ : ಅತಿ ಹೆಚ್ಚು ಸರ್ಚ್ ಆಗುವುದೇ ಈ ವಿಷಯ !
Vivo ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಜನ ತಮ್ಮ ಮೊಬೈಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯವನ್ನು.
ಬೆಂಗಳೂರು : ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿವೆ. ಇತ್ತೀಚಿನ ದಿನಗಳಲ್ಲಿ ನಮಗೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೂ ಅದು ಬೆರಳ ತುದಿಯಲ್ಲಿ ನಮಗೆ ಲಭ್ಯವಾಗುತ್ತದೆ. ಗೂಗಲ್ ಮೂಲಕ ಎಲ್ಲಾ ಮಾಹಿತಿಗಳು ಕ್ಷಣ ಮಾತ್ರದಲ್ಲಿ ಲಭ್ಯವಾಗುತ್ತದೆ. ಕೈಯ್ಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು ಪದೇ ಪದೇ ಗೂಗಲ್ ಸರ್ಚ್, ಸಾಮಾಜಿಕ ಮಾಧ್ಯಮಕ್ಕೆ ಭೇಟಿ ನೀಡುವುದು, ಮೊಬೈಲ್ ಗೇಮ್ ಗಳಲ್ಲಿ ಕಾಲ ಕಳೆಯುವುದು ವೀಡಿಯೊಗಳನ್ನು ನೋಡುವಂತಹ ಅನೇಕ ಕೆಲಸಗಳನ್ನು ಮಾಡುತ್ತೇವೆ.
ಸಂಶೋಧನಾ ವರದಿ ಬಿಡುಗಡೆ :
ಇತ್ತೀಚೆಗೆ, Vivo ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಭಾರತೀಯರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅತಿ ಹೆಚ್ಚು ಯಾವ ಕೆಲಸಕ್ಕೆ ಬಳಸುತ್ತಾರೆ ಎನ್ನುವುದು ಬಹಿರಂಗವಾಗಿದೆ. ಈ ವರದಿ ಪ್ರಕಾರ ಜನ ತಮ್ಮ ಮೊಬೈಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡುವುದು ಇದೇ ವಿಷಯವನ್ನು.
ಇದನ್ನೂ ಓದಿ : ಈ ಟ್ರಿಕ್ ಬಳಸಿದರೆ ಮೊಬೈಲ್ ಇಂಟರ್ನೆಟ್ ಇಲ್ಲದಿದ್ದರೂ ಕಾರ್ಯನಿರ್ವಹಿಸುತ್ತೆ ವಾಟ್ಸಾಪ್!
ಫೋನ್ ಅನ್ನು ಈ ವಿಷಯಕ್ಕಾಗಿಯೇ ಹೆಚ್ಚು ಬಳಸುವುದು :
ಸ್ಮಾರ್ಟ್‌ಫೋನ್‌ಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆದರೆ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ. ವರದಿಯ ಪ್ರಕಾರ, ಸುಮಾರು 86% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುತ್ತಾರೆ. ಇದು ತುಂಬಾ ಅನುಕೂಲಕರ ವಿಧಾನವಾಗಿದ್ದು ಸಮಯ ಉಳಿಯುತ್ತೆ ಎನ್ನುವ ಕಾರಣಕ್ಕೆ ಜನ ಈ ಆಯ್ಕೆಯತ್ತ ವಾಲುತ್ತಿದ್ದಾರೆ.
ಶಾಪಿಂಗ್‌ಗಾಗಿ ಬಳಕೆ :
ವರದಿಯ ಪ್ರಕಾರ, ಸುಮಾರು 80.8% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಆನ್‌ಲೈನ್ ಶಾಪಿಂಗ್ ಮಾಡುತ್ತಾರೆ. ಸುಮಾರು 61.8% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಸುಮಾರು 66.2% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಆನ್‌ಲೈನ್ ಸರ್ವಿಸ್ ಬುಕ್ ಮಾಡುತ್ತಾರೆ. ಸುಮಾರು 73.2% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದರೆ ಸುಮಾರು 58.3% ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಡಿಜಿಟಲ್ ನಗದು ಪಾವತಿಗಳನ್ನು ಮಾಡುತ್ತಾರೆ.
ಇದನ್ನೂ ಓದಿ : ಖಾತೆಯಲ್ಲಿ 10 ಸಾವಿರ ರೂ.ಗಳೂ ಬ್ಯಾಲೆನ್ಸ್ ಹೊಂದಿರದ ವ್ಯಕ್ತಿಗೆ 9 ಕೋಟಿ ನೀಡಿದ ಏಟಿಎಮ್!
ಮಹಿಳೆಯರು ಅಥವಾ ಪುರುಷರು... ಯಾರು ಹೆಚ್ಚು ಬಳಸುತ್ತಾರೆ? :
ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಸುವ ಪುರುಷರ ಸಂಖ್ಯೆ ಮಹಿಳೆಯರಿಗಿಂತ ಹೆಚ್ಚು. ಶೇ.62ರಷ್ಟು ಪುರುಷರು ಸ್ಮಾರ್ಟ್ ಫೋನ್ ಹೊಂದಿದ್ದರೆ, ಶೇ.38ರಷ್ಟು ಮಹಿಳೆಯರು ಮಾತ್ರ ಸ್ಮಾರ್ಟ್ ಫೋನ್ ಬಳಸುತ್ತಾರೆ. ಸ್ಮಾರ್ಟ್ ಫೋನ್ ಬಳಕೆಯಲ್ಲಿ ನಗರ ಮತ್ತು ಗ್ರಾಮೀಣ ಜನರ ನಡುವೆಯೂ ವ್ಯತ್ಯಾಸವಿದೆ. ಶೇ.58ರಷ್ಟು ನಗರವಾಸಿಗಳ ಬಳಿ ಸ್ಮಾರ್ಟ್ ಫೋನ್ ಇದ್ದರೆ, ಶೇ.41ರಷ್ಟು ಗ್ರಾಮೀಣ ಜನರ ಬಳಿ ಮಾತ್ರ ಸ್ಮಾರ್ಟ್ ಫೋನ್ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.