ಭಾರತದ ವಾಯು ರಕ್ಷಣೆಯ ವಿಸ್ತರಣೆ: ವಿಶೋರದ್ ಕ್ಷಿಪಣಿ ವ್ಯವಸ್ಥೆ
ವಿಶೋರದ್ ನಲ್ಲಿ ಪ್ರೊಪಲ್ಷನ್‌ಗಾಗಿ ಡ್ಯುಯಲ್ ಥ್ರಸ್ಟ್ ಸಾಲಿಡ್ ಮೋಟರ್ ಅಳವಡಿಸಲಾಗಿದೆ. ಇದು ಸಣ್ಣದಾದ ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಆರ್‌ಸಿಎಸ್) ಅನ್ನು ಹೊಂದಿದ್ದು, ಇದು ಸಂಚಾರದಲ್ಲಿರುವ ವಾಹನದ ಕೋನ ಮತ್ತು ಸ್ಥಿರತೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
ವಿಶೋರದ್ (VSHORAD) ಅಥವಾ ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಮ್ ಒಂದು ಮಾನವರು ಸಾಗಿಸಬಹುದಾದ ಮ್ಯಾನ್ ಪೋರ್ಟಬಲ್ ಏರ್ ಡಿಫೆನ್ಸ್ ಸಿಸ್ಟಮ್ (MANPAD) ಆಗಿದ್ದು, ಕಡಿಮೆ ಎತ್ತರದಲ್ಲಿ ಹಾರಿ ಬರುವ ಅಪಾಯಗಳನ್ನು ಎದುರಿಸಲು ನೆರವಾಗುತ್ತದೆ. ಇದು ಸೇನೆಗೆ ಅತ್ಯವಶ್ಯಕವಾಗಿದ್ದು, ದೇಶೀಯ ಪ್ರಯತ್ನಗಳ ಮೂಲಕ, ಹೈದರಾಬಾದಿನ ರಿಸರ್ಚ್ ಸೆಂಟರ್ ಇಮಾರತ್ ನೇತೃತ್ವದಲ್ಲಿ, ಡಿಆರ್‌ಡಿಓದ ಪ್ರಯೋಗಾಲಯಗಳು ಮತ್ತು ಭಾರತೀಯ ಉದ್ಯಮ ಸಹಯೋಗಿಗಳ ಸಹಕಾರದೊಂದಿಗೆ ಇದನ್ನು ಅಭಿವೃದ್ಧಿ ಪಡಿಸಲಾಗಿದೆ.
ವಿಶೋರದ್ ನಲ್ಲಿ ಪ್ರೊಪಲ್ಷನ್‌ಗಾಗಿ ಡ್ಯುಯಲ್ ಥ್ರಸ್ಟ್ ಸಾಲಿಡ್ ಮೋಟರ್ ಅಳವಡಿಸಲಾಗಿದೆ. ಇದು ಸಣ್ಣದಾದ ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್ (ಆರ್‌ಸಿಎಸ್) ಅನ್ನು ಹೊಂದಿದ್ದು, ಇದು ಸಂಚಾರದಲ್ಲಿರುವ ವಾಹನದ ಕೋನ ಮತ್ತು ಸ್ಥಿರತೆಯನ್ನು ನಿಯಂತ್ರಿಸಲು ನೆರವಾಗುತ್ತದೆ.
ಅದರೊಡನೆ, ಆಯುಧ ವ್ಯವಸ್ಥೆಯನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗುವಂತೆ ಲಾಂಚರ್ ಸೇರಿದಂರೆ ಕ್ಷಿಪಣಿಯ ವಿನ್ಯಾಸವನ್ನು ಅತ್ಯಂತ ಜಾಗರೂಕವಾಗಿ ನಡೆಸಲಾಗಿದೆ. ಅದನ್ನು ಸುಲಭವಾಗಿ ಸಾಗಿಸುವುದರಿಂದ, ವಿವಿಧ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ- ಒಂಟಿತನ ನಿವಾರಣೆಗೆ ಸಿಕ್ಕ ದೊಡ್ಡ ಪರಿಹಾರ ಇದು! ವಿಶ್ವದಲ್ಲಿ ಕ್ರಾಂತಿ ಸೃಷ್ಟಿಸಲು ಬರಲಿದ್ದಾರೆ ವರ್ಚ್ಯುವಲ್ ಮನುಷ್ಯರು!
ಗಮನಾರ್ಹ ಬೆಳವಣಿಗೆಯೊಂದರಲ್ಲಿ, ಭಾರತದ ರಕ್ಷಣಾ ವಲಯ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ವೆರಿ ಶಾರ್ಟ್ ರೇಂಜ್ ಏರ್ ಡಿಫೆನ್ಸ್ (VSHORAD) ಕ್ಷಿಪಣಿ ವ್ಯವಸ್ಥೆಯ 30 ಘಟಕಗಳನ್ನು ಖರೀದಿಸಿ, ವಾಯು ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. ಈ 30 ಆಯುಧಗಳು ಮೂಲ ಮಾದರಿ ವಿನ್ಯಾಸದಿಂದ ಪೂರ್ಣ ಪ್ರಮಾಣದ ಉತ್ಪಾದನೆಗೆ ಮೊದಲ್ಗೊಳ್ಳಲಿವೆ.
ವಿಶೋರದ್ ಆಯುಧ ವ್ಯವಸ್ಥೆ ಸೈನಿಕರಿಗೆ ಶತ್ರುಗಳ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಂದ ವಾಯು ರಕ್ಷಣಾ ಜಾಲದಲ್ಲಿ ಅಂತಿಮ ರಕ್ಷಣೆಯನ್ನು ಒದಗಿಸಲಿದೆ.
ಬಲ್ಲ ಮೂಲಗಳ ಪ್ರಕಾರ, ವಿಶೋರದ್ ವ್ಯವಸ್ಥೆ 24 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಗುರುತಿಸಿ, ಅವುಗಳ 7 ಕಿಲೋಮೀಟರ್ ವ್ಯಾಪ್ತಿಯಲ್ಲಿರುವಾಗ ದಾಳಿ ನಡೆಸಬಲ್ಲದು.
ಇದನ್ನೂ ಓದಿ- ಈ ಗೀಸರ್ ಗೆ ವಿದ್ಯುತ್ ಬೇಕಾಗಿಲ್ಲ ! ಕೆಲವೇ ಸೆಕೆಂಡುಗಳಲ್ಲಿ ನೀಡುತ್ತದೆ ಕೊತ ಕೊತ ಕುದಿಯುವ ನೀರು
ಈ ವಿಶೋರದ್ ಕ್ಷಿಪಣಿ ವ್ಯವಸ್ಥೆಗಳನ್ನು ಡೆವಲಪ್‌ಮೆಂಟ್ ಕಮ್ ಪ್ರೊಡಕ್ಷನ್ (DcPP) ನೀತಿಯ ಮೂಲಕ ಖರೀದಿಸಲಾಗುತ್ತದೆ. ಡಿಸಿಪಿಪಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಜಾರಿಗೆ ತಂದಿರುವ ಕಾರ್ಯತಂತ್ರದ ನೀತಿಯಾಗಿದೆ. ಈ ನೀತಿಯಡಿ, ಡಿಆರ್‌ಡಿಓ ರಕ್ಷಣಾ ಉತ್ಪನ್ನದ ವಿನ್ಯಾಸ ನಡೆಸುವ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ವಿವರವಾದ ನೀಲಿ ನಕಾಶೆಯನ್ನು ರಚಿಸಿ, ತಾಂತ್ರಿಕ ವೈಶಿಷ್ಟ್ಯಗಳನ್ನು ಮೂಲ ಮಾದರಿಯನ್ನು ನಿರ್ಮಿಸುವ ಸಲುವಾಗಿ ಖಾಸಗಿ ವಲಯದ ಅಥವಾ ಸಾರ್ವಜನಿಕ ವಲಯದ ಉದ್ಯಮಗಳೊಡನೆ ಹಂಚಿಕೊಳ್ಳುತ್ತದೆ.
ಈ ಖರೀದಿ ಗುತ್ತಿಗೆಗೆ ಆದೇಶ ನೀಡಿರುವುದು ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಮಹತ್ತರ ಮೈಲಿಗಲ್ಲಾಗಿದ್ದು, ಅದರಲ್ಲೂ ಅತ್ಯಂತ ಕಡಿಮೆ ವ್ಯಾಪ್ತಿಯ ವೈಮಾನಿಕ ಅಪಾಯಗಳನ್ನು ಎದುರಿಸಲು ಅತ್ಯಂತ ಅನುಕೂಲಕರವಾಗಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ, ರಕ್ಷಣಾ ಮತ್ತು ರಾಜಕೀಯ ವಿಶ್ಲೇಷಕರು)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.