ನವದೆಹಲಿ: Infinix Smart 6 Plus ಹೊಸ ಸ್ಮಾರ್ಟ್‍ಫೋನ್‍ ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್‍ ನೀಡುವ ಉದ್ದೇಶದಿಂದ Infinix ಈ ಇದನ್ನು ರಿಲೀಸ್ ಮಾಡುತ್ತಿದೆ.   


COMMERCIAL BREAK
SCROLL TO CONTINUE READING

ಗ್ರಾಹಕರು ಫ್ಲಿಪ್‌ಕಾರ್ಟ್‌ನಿಂದ ಈ ಫೋನ್ ಅನ್ನು ಸುಲಭವಾಗಿ ಖರೀದಿಸಬಹುದು. ಕೈಗೆಟುಕುವ ಬೆಲೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಫೋನ್ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸೈನ್‌ನಿಂದ ಡಿಸ್‌ಪ್ಲೇ ಮತ್ತು ಕ್ಯಾಮೆರಾದವರೆಗೆ ಇತರೆ ಫೋನ್‍ಗಳನ್ನು ಮೀರಿಸುವಂತಹ ಫೀಚರ್ಸ್ ಈ ಫೋನಿನಲ್ಲಿದೆ ಎಂದು ಹೇಳಲಾಗುತ್ತಿದೆ.   


ಇದನ್ನೂ ಓದಿ: ಕೇವಲ 600 ರೂಪಾಯಿಗೆ ಸಿಗುತ್ತದೆ Realmeಯ ಸ್ಮಾರ್ಟ್ ಫೋನ್ ..!


Infinix Smart 6 Plus ವೈಶಿಷ್ಟ್ಯಗಳು


ಮಾಹಿತಿಯ ಪ್ರಕಾರ Infinix ಸ್ಮಾರ್ಟ್ 6 ಪ್ಲಸ್‌ನಲ್ಲಿ 6.82-ಇಂಚಿನ HD + ರೆಸಲ್ಯೂಶನ್ ಡಿಸ್ಪ್ಲೇ ಇರುತ್ತದೆ. ಜೊತೆಗೆ 6GB RAM ಮತ್ತು 64GB ಸ್ಟೋರೇಜ್ ಇರುತ್ತದೆ. ಈ ಸ್ಮಾರ್ಟ್‌ಫೋನ್ ‘ಝಿದ್ ಹೈ ಬಾಡಿ’ ಎಂಬ ಕ್ಯಾಪ್ಶನ್‍ನೊಂದಿಗೆ ಮಾರುಕಟ್ಟೆಗೆ ಎಂಟ್ರಿಯಾಗುತ್ತಿದೆ. ಆದ್ದರಿಂದ ಇದರ ವೈಶಿಷ್ಟ್ಯಗಳು ಈ ಶ್ರೇಣಿಯ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಇದೆ. ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ 5,000mAh ಬ್ಯಾಟರಿ ನೀಡಿದೆ. ಒಟ್ಟಾರೆ ಈ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗಿರುವ ಎಲ್ಲಾ ವೈಶಿಷ್ಟ್ಯಗಳು ಇದರಲ್ಲಿವೆ. ಬಳಸುವಾಗ ಇದು ನಿಮಗೆ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ.


Infinix Smart 6 Plusನ ನಿರೀಕ್ಷಿತ ಬೆಲೆ


ಈ ಸ್ಮಾರ್ಟ್‌ಫೋನ್‌ ಬೆಲೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಬಿಡುಗಡೆಯಾದ ನಂತರವೇ ಬೆಲೆ ತಿಳಿಯಲಿದೆ. ಸದ್ಯಕ್ಕೆ ಇದರ ಬೆಲೆ 10 ಸಾವಿರ ರೂ.ಗಿಂತ ಕಡಿಮೆ ಇರುತ್ತೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ವಾಟ್ಸಾಪ್‌ನಲ್ಲಿ ಯಾರನ್ನಾದರೂ ಬ್ಲಾಕ್ ಮಾಡುವ ಮುನ್ನ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ


ಸ್ಮಾರ್ಟ್‍ಫೋನ್ ವಿನ್ಯಾಸ


ಸ್ಮಾರ್ಟ್‍ಫೋನ್‍ ವಿನ್ಯಾಸವನ್ನು ಬಹಳ ವಿಶಿಷ್ಟವಾಗಿ ಇರಿಸಲಾಗಿದೆ. ಇದು ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್ ಆಗಿರುತ್ತದೆ. ಇದರ ವಿನ್ಯಾಸ ಮತ್ತು ದೊಡ್ಡ ಡಿಸ್‌ಪ್ಲೇ ಇದರ ಪ್ರಮುಖ ಆಕರ್ಷಣೆಯಾಗಿರುತ್ತದೆ. ಇದನ್ನು ನೀವು ಕಣ್ಣುಮುಚ್ಚಿ ಖರೀದಿಸಬಹುದಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.