Electricity Bill Reduce Tips: ಬೇಸಿಗೆ ಇರಲಿ, ಚಲಿಗಾಲವಿರಲಿ ಎಲ್ಲಾ ಋತುಮಾನದಲ್ಲೂ ವಿದ್ಯುತ್ ಬಿಲ್‌ ಹೆಚ್ಚಳದ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ನಿಮ್ಮ ಮನೆಯಲ್ಲಿ ಒಂದು ಸಣ್ಣ ಡಿವೈಸ್ ಅಳವಡಿಸುವ ಮೂಲನ ನೀವು ವಿದ್ಯುತ್ ಬಿಲ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ಪೋರ್ಟಬಲ್ ಪವರ್ ಸ್ಟೇಷನ್‌ಗಳು ಲಭ್ಯವಿವೆ. ಇವುಗಳ ಸಹಾಯದಿಂದ ಕರೆಂಟ್ ಇಲ್ಲದಿದ್ದರೂ ಕೂಡ ಮನೆಯ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಹುದು. ಅಂತಹ ಪೋರ್ಟಬಲ್ ಪವರ್ ಸ್ಟೇಷನ್‌ಗಳನ್ನು ತಯಾರಿಸುವ ಪ್ರಸಿದ್ಧ ಕಂಪನಿಗಳಲ್ಲಿ  GOKKCL ಹೆಸರಿನ ಕಂಪನಿಯೂ ಒಂದು. 


COMMERCIAL BREAK
SCROLL TO CONTINUE READING

GOKKCL ಹೆಸರಿನ ಕಂಪನಿಯು ಪೋರ್ಟಬಲ್ ಪವರ್ ಸ್ಟೇಷನ್‌ಗಳನ್ನು ತಯಾರಿಸುತ್ತದೆ. ತುಂಬಾ ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಈ  ಪೋರ್ಟಬಲ್ ಪವರ್ ಸ್ಟೇಷನ್‌ಗಳ ಪ್ರಮುಖ ವೈಶಿಷ್ಟ್ಯವೆಂದರೆ ಇದನ್ನು ಚಾರ್ಜ್ ಮಾಡಲು ವಿದ್ಯುತ್ ಆವಶ್ಯಕತೆ ಇಲ್ಲ. ಬದಲಿಗೆ ಸೂರ್ಯನ ಬೆಳಕಿನಿಂದ ಇದನ್ನು ಚಾರ್ಜ್ ಮಾಡಬಹುದು. GOKKCL ಕಂಪನಿ ಇದೀಗ GOKKCL 2000 ಮತ್ತು GOKKCL 1200 ಪೋರ್ಟಬಲ್ ಪವರ್ ಸ್ಟೇಷನ್‌ಗಳನ್ನು ಪ್ರಾರಂಭಿಸಿದೆ. ಇದು 2000kW ವರೆಗೆ ಶಕ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಎರಡೂ ಬಹು ಪವರ್ ಔಟ್‌ಲೆಟ್‌ಗಳನ್ನು ಹೊಂದಿವೆ. ಇದು USB-A, USB-C ಮತ್ತು AC ಅನ್ನು ಒಳಗೊಂಡಿದೆ. 


GOKKCL ಪೋರ್ಟಬಲ್ ವಿದ್ಯುತ್ ಕೇಂದ್ರಗಳ ವೈಶಿಷ್ಟ್ಯಗಳು: 
ಈ ಪೋರ್ಟಬಲ್ ಪವರ್ ಸ್ಟೇಷನ್‌ಗಳ ವೈಶಿಷ್ಟ್ಯವೆಂದರೆ, ಈ ಎರಡೂ ವಿದ್ಯುತ್ ಕೇಂದ್ರಗಳನ್ನು 400W ಸೌರ ಫಲಕಗಳ ಸಹಾಯದಿಂದ ಚಾರ್ಜ್ ಮಾಡಬಹುದು. ದೊಡ್ಡ ಮಾದರಿಯು 386 x 275 x 306 ಮಿಮೀ ಅಳತೆಗಳನ್ನು ಹೊಂದಿದ್ದರೆ ಚಿಕ್ಕ ಮಾದರಿಯು 386 x 225 x 317 ಮಿಮೀ ಅಳತೆಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.


ಇದನ್ನೂ ಓದಿ- YouTubeನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ವಿಡಿಯೋ ಯಾವುದು? ಉತ್ತರ ನಿಬ್ಬೇರಗಾಗಿಸಲಿದೆ


Gokkcl ಪೋರ್ಟಬಲ್ ವಿದ್ಯುತ್ ಕೇಂದ್ರಗಳ ವಿಶೇಷಣಗಳು:
>> GOKKCL 2000 ಅನ್ನು 2000W ಪವರ್ ನೀಡಲು ಮತ್ತು GOKKCL 1200 ಅನ್ನು 1200W ಪವರ್ ನೀಡಲು ರೇಟ್ ಮಾಡಲಾಗಿದೆ. 
>> ಇದು ಏಕಕಾಲದಲ್ಲಿ ಅನೇಕ ಸಾಧನಗಳು ಕೆಲಸ ಮಾಡಲು ಅನುವು ಮಾಡಿಕೊಗುತ್ತದೆ. 
>> GOKKCL 2000 ತೂಕವು 22 ಕೆಜಿ ಆಗಿದ್ದರೆ GOKKCL 1200 ನ ತೂಕ 12.5 ಕೆಜಿ. ಆಗಿದೆ. 
>> ಚಿಕ್ಕ ವಿದ್ಯುತ್ ಕೇಂದ್ರವು 960Wh ಬ್ಯಾಟರಿಯನ್ನು ಹೊಂದಿದೆ ಆದರೆ ದೊಡ್ಡ ವಿದ್ಯುತ್ ಕೇಂದ್ರವು 1,997Wh LiFeP04 ಬ್ಯಾಟರಿಯನ್ನು ಹೊಂದಿದೆ.


ಇದನ್ನೂ ಓದಿ- New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು


GOKKCL ಪೋರ್ಟಬಲ್ ಪವರ್ ಸ್ಟೇಷನ್‌ಗಳ ಬೆಲೆ:
* GOKKCL 1200 ಬೆಲೆ HK$4,255 (Rs 44,244) 
* GOKKCL 2000 ಬೆಲೆ HK$6,425 (Rs 66,894). 


GOKKCL ಪೋರ್ಟಬಲ್ ಪವರ್ ಸ್ಟೇಷನ್‌ಗಳ ಲಭ್ಯತೆ:
GOKKCLನ ಎರಡೂ ಮಾದರಿಯ ಪೋರ್ಟಬಲ್ ಪವರ್ ಸ್ಟೇಷನ್‌ಗಳು ಸದ್ಯ ಹಾಂಗ್ ಕಾಂಗ್‌ನಲ್ಲಿ ಮಾರಾಟಕ್ಕೆ ಲಭ್ಯವಿವೆ. ಹೊಸ ವರ್ಷದಿಂದ ಅಂದರೆ 2023ರಿಂದ ಇವು ಯುಎಸ್‌ನಲ್ಲಿಯೂ ಲಭ್ಯವಾಗಲಿವೆ. ಭವಿಷ್ಯದಲ್ಲಿ ಇದು ಇತರ ದೇಶಗಳಲ್ಲೂ ಮಾರಾತವಾಗಲಿದ್ದು, ಬೆಲೆ ವಿಭಿನ್ನವಾಗಿರಬಹುದು ಎಂದು ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.