Internet Speed ಕಡಿಮೆಯಾಗಿದೆಯಾ? ಈ ನಾಲ್ಕು ಟಿಪ್ಸ್ ಅನುಸರಿಸಿ, ಸೂಪರ್ ಫಾಸ್ಟ್ ವೇಗದಲ್ಲಿ ಡೌನ್‌ಲೋಡ್ ಮಾಡಿ!
Tips For Internet Speed Increase: ಮನೆಯಲ್ಲಿರುವ ರೌಟರ್ ನಲ್ಲಿ ಇಂಟರ್ನೆಟ್ ವೇಗ ಕಡಿಮೆ ಇದ್ದರೆ, ಬ್ರೌಸಿಂಗ್ ಅಥವಾ ಡೌನ್‌ಲೋಡ್ ಸರಿಯಾಗಿ ಆಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಜನರಿಗೆ ಭಾರಿ ಕಿರಿಕಿರಿ ಅನುಭವಕ್ಕೆ ಬರುತ್ತದೆ. ಇಂದು ನಾವು ನಿಮಗಾಗಿ ನಾಲ್ಕು ಸಲಹೆಗಳನ್ನು ತಂದಿದ್ದು (How to boost internet speed on PC), ಅವುಗಳನ್ನು ಅನುಸರಿಸಿ ನಿಮ್ಮ ಇಂಟರ್ನೆಟ್ ವೇಗವನ್ನು ನೀವು ಹೆಚ್ಚಿಸಿಕೊಳ್ಳಬಹುದು.(Technology News In Kannada)
Internet Hacks And Tips: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಕೆಲಸದಿಂದ ಹಿಡಿದು ಮನರಂಜನೆಯವರೆಗೆ ಎಲ್ಲಾ ಕೆಲಸಕ್ಕೂ ಇಂಟರ್ನೆಟ್ ಬೇಕೇಬೇಕು. ಆದರೆ ಕೆಲವೊಮ್ಮೆ ಇಂಟರ್ನೆಟ್ ವೇಗ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ, ಇದರಿಂದಾಗಿ ಜನರ ಕೆಲಸವು ಸ್ಥಗಿತಗೊಳ್ಳುತ್ತದೆ. ನಿಧಾನಗತಿಯ ವೇಗದಿಂದಾಗಿ, ಬ್ರೌಸಿಂಗ್ ಅಥವಾ ಡೌನ್‌ಲೋಡ್ ಸರಿಯಾಗಿ ಆಗುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ ಜನರು ತುಂಬಾ ಕಿರಿಕಿರಿ ಅನುಭವಿಸುತ್ತಾರೆ. ಇಂದು ನಾವು ನಿಮಗಾಗಿ ನಾಲ್ಕು ಸಲಹೆಗಳನ್ನು ಹೇಳುತ್ತಿದ್ದು, ಅವುಗಳನ್ನು ಅನುಸರಿಸಿ ನೀವು ನಿಮ್ಮ ಇಂಟರ್ನೆಟ್ ವೇಗವನ್ನು ಹೆಚ್ಚಿಸಿಕೊಳ್ಳಬಹುದು. (Technology News In Kannada)
ಕಂಪ್ಯೂಟರ್ ಅನ್ನು ರೌಟರ್ ಹತ್ತಿರಕ್ಕೆ ತೆಗೆದುಕೊಂಡು ಹೋಗಿ (Internet speed Booster)
ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ರೌಟರ್ ಗೆ ಹತ್ತಿರವಾಗಿದ್ದರೆ, ಇಂಟರ್ನೆಟ್ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ರೌಟರ್ ದೂರದಲ್ಲಿದ್ದರೆ ವೇಗ ಕಡಿಮೆಯಾಗುತ್ತದೆ. ರೌಟರ್ ಮತ್ತು ನಿಮ್ಮ ಸಾಧನದ ನಡುವೆ ಯಾವುದೇ ಗೋಡೆ, ವಿಶೇಷವಾಗಿ ಘನ ಗೋಡೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ಗೋಡೆಯು ವೇಗವನ್ನು ಕಡಿಮೆ ಮಾಡಬಹುದು. ನೀವು ರೂಊಟರ್ ಬಳಿ ಕುಳಿತಿದ್ದರೆ ಮತ್ತು ಇನ್ನೂ ವೇಗ ಕಡಿಮೆಯಿದ್ದರೆ ನೀವು ಹೊಸ ರೂಟರ್ ಅನ್ನು ಖರೀದಿಸಬೇಕಾಗಬಹುದು.
ಬ್ರೌಸರ್ ಡೇಟಾ ಅಥವಾ ಹಿಸ್ಟರಿ ಡಿಲೀಟ್ ಮಾಡಿ
ಬ್ರೌಸರ್‌ನಲ್ಲಿ ಶೇಖರಣೆಯಾದ ಡೇಟಾದಿಂದಲೂ ಕೂಡ ಕೆಲವೊಮ್ಮೆ ವೆಬ್‌ಸೈಟ್‌ಗಳು ನಿಧಾನವಾಗಿ ತೆರೆದುಕೊಳ್ಳುತ್ತವೆ. ಈ ಅನುಪಯುಕ್ತ ಫೈಲ್ಗಳನ್ನು ಸ್ವಚ್ಛಗೊಳಿಸಲು, ನೀವು ಬ್ರೌಸರ್ನ ಡೇಟಾ ಮತ್ತು ಹಿಸ್ಟರಿ ಡಿಲೀಟ್ ಮಾಡಬೇಕು. ಇದು ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-WhatsApp Update: ಶೀಘ್ರದಲ್ಲೇ WhatsApp ಬಳಕೆದಾರರಿಗೂ ಸಿಗಲಿದೆ UPI QR Code ಸ್ಕ್ಯಾನ್ ಸೌಲಭ್ಯ!
ಬ್ಯಾಕ್ ಗ್ರೌಂಡ್ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ
ಕೆಲವೊಮ್ಮೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನ ಬ್ಯಾಕ್ ಗ್ರೌಂಡ್ ನಲ್ಲಿ ಕಾರ್ಯನಿರ್ವಹಿಸುವ ಅನುಪಯುಕ್ತ ಅಪ್ಲಿಕೇಶನ್‌ಗಳು ನಿಮ್ಮ ಇಂಟರ್ನೆಟ್‌ನ ವೇಗವನ್ನು ಕಡಿಮೆ ಮಾಡಬಹೂಡು. ಈ ಆ್ಯಪ್‌ಗಳು ಹಿನ್ನೆಲೆಯಲ್ಲಿ ರನ್ ಆಗುತ್ತಲೇ ಇರುತ್ತವೆ ಮತ್ತು ಇಂಟರ್ನೆಟ್ ವೇಗದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ನೀವು ಬಳಸುತ್ತಿರುವ ಆಪ್ ಗಳನ್ನು ಮಾತ್ರ ಹಿನ್ನೆಲೆಯಲ್ಲಿ ರನ್ ಮಾಡಿ. ಇದರ ಹೊರತಾಗಿ, ಸುಖಾ ಸುಮ್ಮನೆ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳನ್ನು ಮುಚ್ಚಿ.
ಇದನ್ನೂ ಓದಿ-Wifi Router Install Tips: ಮರೆತೂ ಈ ಐದು ಸ್ಥಳಗಳಲ್ಲಿ ವೈಫೈ ರೌಟರ್ ಇನ್ಸ್ಟಾಲ್ ಮಾಡ್ಬೇಡಿ, ಇಲ್ದಿದ್ರೆ!
ರೌಟರ್ ರೀಸ್ಟಾರ್ಟ್ ಮಾಡಿ (How to increase internet speed in router settings)
ರೌಟರ್ ಸೆಟ್ಟಿಂಗ್‌ಗಳು ಅಥವಾ ಸ್ಟೋರೇಜ್ ದೋಷಗಳಿಂದಾಗಿ ಕೆಲವೊಮ್ಮೆ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮೋಡೆಮ್ ಅಥವಾ ರೌಟರ್ ಅನ್ನು ರೀಸ್ಟಾರ್ಟ್ ಮಾಡುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ರೌಟರ್ ಅನ್ನು ಆಫ್ ಮಾಡಿ ಮತ್ತು ಸ್ವಲ್ಪ ಸಮಯದ ನಂತರ ಅದನ್ನು ಮತ್ತೆ ಆನ್ ಮಾಡಿ. ಇದು ಆಗಾಗ್ಗೆ ಇಂಟರ್ನೆಟ್ ವೇಗವನ್ನು ಹೆಚ್ಚಿಸುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI