How To Get Free iPhone 12: ಅತ್ಯಂತ ಪ್ರೀಮಿಯಮ್ ಹಾಗೂ ದುಬಾರಿ ಫೋನ್ ಗಳಲ್ಲಿ ಐಫೋನ್ ಕೂಡ ಒಂದು. ಆದರೆ ಈ ಫೋನ್ ಮೇಲೆ ಒಂದು ಅದ್ಭುತ ಆಫರ್ ನೀಡಲಾಗುತ್ತಿದ್ದು, ಇದರಿಂದ ಐಫೋನ್ 12 ಅನ್ನು ನೀವು ಉಚಿತವಾಗಿ ಪಡೆದುಕೊಳ್ಳಬಹುದು. ಆದರೆ ಅದರ ಹಿಂದೆ ಒಂದು ಟ್ವಿಸ್ಟ್ ಇದೆ. ಐಫೋನ್ 12 ಅನ್ನು ಉಚಿತವಾಗಿ ಪಡೆದುಕೊಳ್ಳುವ ಈ ಅವಕಾಶವನ್ನು ವೆರಿಝೋನ್ ನೀಡುತ್ತಿದೆ. ಈ ಐಫೋನ್ ಅನ್ನು ಎರಡು ವರ್ಷಗಳ ಹಿಂದಿನ $699 (ರೂ. 55,840) ಆರಂಭಿಕ ಬೆಲೆಯಲ್ಲಿ ಮತ್ತು 64GB ಮೂಲ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ವೆರಿಝೋನ್ ಡೀಲ್ ಈ ಫೋನ್ ಅನ್ನು ಫ್ರೀಯಾಗಿಸಿದೆ. ಈ ಐಫೋನ್ ಪಡೆಯಲು ಯಾವುದೇ ಟ್ರೇಡ್ ಇನ್ ಮೂಲಕ ಹೋಗುವ ಅವಶ್ಯಕತೆ ಇಲ್ಲ. ಉಚಿತ ಐಫೋನ್ 12 ಲಾಭ ಪಡೆಯಲು ನೀವು ಮಾಡಬೇಕಾಗಿರುವುದು ಇಷ್ಟೇ.  iPhone 12 ನ ಲಾಭವನ್ನು ಉಚಿತವಾಗಿ ಪಡೆಯಲು Verizon ನಿಂದ ಹೊಸ ಲೈನ್ ಖರೀದಿಸಬೇಕು.


COMMERCIAL BREAK
SCROLL TO CONTINUE READING

ಐಫೋನ್ 12 A14 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬರುತ್ತದೆ, ಉತ್ತಮ ಕ್ಯಾಮೆರಾ ಕಾರ್ಯಕ್ಷಮತೆ. ಇದು iOS 16 ಆವೃತ್ತಿಗೆ ಇತ್ತೀಚಿನ ಅಪ್‌ಗ್ರೇಡ್ ಅನ್ನು ಸಹ ಪಡೆದುಕೊಳ್ಳುತ್ತದೆ, ಹೊಸ ಆವೃತ್ತಿ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ಐಫೋನ್ 12 ಡೀಲ್ ಅನ್ನು ಇನ್ನಷ್ಟು ಆಕರ್ಷಕಗೊಳಿಸುತ್ತದೆ. ಆದಾಗ್ಯೂ, ಫೋನ್ ನಿಮ್ಮದಾಗುವ ಮೊದಲು ನೀವು ಪೂರೈಸಬೇಕಾದ ಈ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ನೀವು ತಿಳಿದಿರಬೇಕು.


ಇದನ್ನೂ ಓದಿ-Facebook, Instagram ಹಾಗೂ WhatsApp ನ ಈ ವೈಶಿಷ್ಟ್ಯಗಳನ್ನು ಬಳಸಲು ಇನ್ಮುಂದೆ ಶುಲ್ಕ ಪಾವತಿಸಬೇಕು


Verizon ನಲ್ಲಿ iPhone 12 ಡೀಲ್‌
ಹಂತ 1: ವೇರಿಝೋನ್ ವೆಬ್ ಸೈಟ್ ಗೆ ಭೇಟಿ ನೀಡಿ ಐಫೋನ್ 12ಕ್ಕಾಗಿ ಹುಡುಕಾಟ ನಡೆಸಿ.
ಹಂತ 2: ನಿಮ್ಮ ಆಯ್ಕೆಗೆ ಅನುಗುಣವಾಗಿ ಐಫೋನ್ 12ರ ಮೆಮೊರಿ ಹಾಗೂ ಕಲರ್ ಆಪ್ಶನ್ ಅನ್ನು ಆಯ್ದುಕೊಳ್ಳಿ.
ಹಂತ 3: ಈಗ Add New ಲೈನ್ ಆಪ್ಶನ್ 'ಗೆಟ್ ಇಟ್ ಫ್ರೀ ವಿಥ್ ಸೆಲೆಕ್ಟ್ 5ಜಿ ಅನ್ ಲಿಮಿತಾದ್ ಪ್ಲಾನ್ಸ್, ನ್ಯೂ ಲೈನ್ಸ್ ರಿಕ್ವಾಯರ್ಡ್ ಮೇಲೆ ಕ್ಲಿಕ್ಕಿಸಿ. 
ಹಂತ 4: ಮುಂದುವರೆಯಿರಿ ಆಯ್ಕೆಯ ಮೇಲೆ ಕ್ಲಿಕ್ಕಿಸಿ ಮುಂದಿನ ವಿಂಡೋದಲ್ಲಿ ಹೊಸ ಬಳಕೆದಾರ ಆಪ್ಶನ್ ಆಯ್ದುಕೊಳ್ಳಿ. 
ಹಂತ 5: ಇದಾದ ಬಳಿಕ ಹೊಸ ಸ್ಕ್ರೀನ್ ತೆರೆದುಕೊಳ್ಳಲಿದ್ದು, ಅದರಲ್ಲಿ ನೀವು ನಿಮ್ಮ ಪಿನ್ ಕೋಡ್ ನಮೂದಿಸಬೇಕು ಹಾಗೂ ಲೋಕೇಶನ್ ಅನ್ನು ಖಾತರಿಪಡಿಸಬೇಕು.


ಇದನ್ನೂ ಓದಿ-New Smartphone Launch: ಭಾರತಕ್ಕೆ ಲಗ್ಗೆ ಇಡುತ್ತಿದೆ ಈ 200ಎಂಪಿ ಕ್ಯಾಮರಾ ಫೋನ್, ಇಲ್ಲಿದೆ ಬೆಲೆ-ವೈಶಿಷ್ಟ್ಯಗಳ ವಿವರ

ಹಂತ 6: ಈಗ ನಿಮ್ಮ ಮುಂದೆ ವೆರಿಜೋನ್ ಪ್ಲಾನ್ ಗಳು ಕಾಣಿಸಿಕೊಳ್ಳಲಿವೆ. ನಿಮ್ಮ ಬಳಕೆಗೆ ಅನುಗುಣವಾಗಿ ಪ್ಲಾನ್ ಆಯ್ದುಕೊಳ್ಳಿ ಮತ್ತು ಉಚಿತ ಐಫೋನ್ ಲಾಭ ಪಡೆದುಕೊಳ್ಳಲು 36 ತಿಂಗಳ ಅವಧಿಗಾಗಿ ಹಣಪಾವತಿಗಾಗಿ ಮುಂದುವರೆಯಿರಿ.
ಹಂತ 7: ಒಂದೊಮ್ಮೆ ಯೋಜನೆಗಾಗಿ ಹಣ ಪಾವತಿಯಾದ ಬಳಿಕ ಮೇಲೆ ಸೂಚಿಸಲಾದ ಅವಧಿಗಾಗಿ ವೆರಿಜೋನ್ ಸದಸ್ಯತ್ವದ ಯೋಜನೆಯ ಜೊತೆಗೆ ಐಫೋನ್ 12 ನಿಮ್ಮ ಬಳಿ ಬರಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.