iPhone 15 Plus Price Cut : ಆಪಲ್ ಫೋನ್‌ಗಳ   ಕ್ರೇಜ್ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ತಮ್ಮ ಜೇಬಿನಲ್ಲಿ ಐಫೋನ್ ಇರಬೇಕು ಎಂದೇ ಬಯಸುತ್ತಾರೆ. ಆದರೆ ಅದು ದುಬಾರಿಯಾಗಿರುವುದರಿಂದ ಅದನ್ನು ಖರೀದಿಸುವುದು ಹೆಚ್ಚು ಮಂದಿಗೆ ಕನಸಾಗಿಯೇ ಉಳಿಯಲಿದೆ. ಆದರೆ ದೀಪಾವಳಿ ಆಫರ್ ಗಳಲ್ಲಿ ಐಫೋನ್ ಗಳ ಮೇಲೆ ಬಂಪರ್ ಡಿಸ್ಕೌಂಟ್ ಗಳನ್ನು ನೀಡಲಾಗುತ್ತಿದೆ. ಆಪಲ್ ಇತ್ತೀಚೆಗೆ ತನ್ನ ಐಫೋನ್ 15 ಸರಣಿಯನ್ನು ಬಿಡುಗಡೆ ಮಾಡಿದೆ. ಮಾರಾಟಕ್ಕೆ ಲಭ್ಯವಾದ ಕೆಲವೇ ದಿನಗಳಲ್ಲಿ, ಐಫೋನ್ 15 ಪ್ಲಸ್ ಬೆಲೆಯಲ್ಲಿ ಹಠಾತ್ ಕುಸಿತ ಕಂಡುಬಂದಿದೆ. ಹೌದು ಫ್ಲಿಪ್ ಕಾರ್ಟ್ ಐಫೋನ್ 15 ಪ್ಲಸ್ ಮೇಲೆ ಭರ್ಜರಿ ಆಫರ್ ನೀಡಿದೆ. ಐಫೋನ್ 15 ಪ್ಲಸ್ ಈಗ  50 ಸಾವಿರಕ್ಕಿಂತ ಕಡಿಮೆ ಬೆಲೆಗೆ  ಲಭ್ಯ. 


COMMERCIAL BREAK
SCROLL TO CONTINUE READING

iPhone 15 Plus ಆಫರ್ : 
iPhone 15 Plus (128GB) 89,900 ರೂಪಾಯಿ ಬೆಲೆಯಲ್ಲಿ  ಲಾಂಚ್ ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲೂ  ಈ ಫೋನ್ ಅನ್ನು ಅದೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ,   ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳು ಲಭ್ಯವಿದೆ.


ಇದನ್ನೂ ಓದಿ : Honda Cars: ಹೋಂಡಾದ City, Amaze ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್


iPhone 15 Plus ಬ್ಯಾಂಕ್ ಆಫರ್ : 
ಐಫೋನ್ 15 ಪ್ಲಸ್ ಖರೀದಿಸಲು ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಅನ್ನು ಬಳಸಿದರೆ, 3,000 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ನಂತರ ಈ  ಫೋನ್ ಬೆಲೆ 85,900 ರೂ.ಗ ಇಳಿಯುತ್ತದೆ. ಇದಾದ ಬಳಿಕ ಎಕ್ಸ್ ಚೇಂಜ್ ಆಫರ್ ಕೂಡಾ ಇದ್ದು, ಇದರ ಮೂಲಕ ಭಾರೀ ಡಿಸ್ಕೌಂಟ್ ನಲ್ಲಿ ಫೋನ್  ಅನ್ನು ಖರೀದಿಸಬಹುದು. 


iPhone 15 Plus ಎಕ್ಸ್ಚೇಂಜ್ ಆಫರ್ : 
iPhone 15 Plus ಮೇಲೆ  39,150 ರೂಪಾಯಿಗಳವರೆಗೆ ವಿನಿಮಯ ಕೊಡುಗೆ ಅಥವಾ ಎಕ್ಸ್ಚೇಂಜ್ ಆಫರ್ ನೀಡಲಾಗಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ, ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 39,150 ರೂ.  ಆಫ್ ಸಿಗುತ್ತದೆ. ಹೀಗೆ ಸಂಪೂರ್ಣ ಆಫ್ ಪಡೆಯುವುದು ಸಾಧ್ಯವಾದರೆ  ಫೋನ್‌ನ ಬೆಲೆ 46,750 ರೂ.ಆಗುತ್ತದೆ.  


ಇದನ್ನೂ ಓದಿ : SmartXonnect ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ TVS Jupiter 125


Apple iPhone 15 Plus ವಿನ್ಯಾಸವು ನಿಖರವಾಗಿ iPhone 14 Plus ನಂತೆಯೇ ಇರುತ್ತದೆ. ಆದರೆ ಈ ಬಾರಿ ಕಾರ್ನರ್ ಅನ್ನು ಸ್ವಲ್ಪ ಕರ್ವ್ ಆಗಿ ನೀಡಲಾಗಿದೆ. ಇದಲ್ಲದೇ ಡೈನಾಮಿಕ್ ಐಲ್ಯಾಂಡ್ ಕೂಡಾ ಲಭ್ಯವಿದೆ. ಈ ಫೋನ್ ನಲ್ಲಿ 48MP ಕ್ಯಾಮೆರಾ ಲಭ್ಯವಿದೆ. ಇದಲ್ಲದೆ, ಲೈಟ್ನಿಂಗ್ ಪೋರ್ಟ್ ಬದಲಿಗೆ, ಯುಎಸ್‌ಬಿ-ಸಿ ಪೋರ್ಟ್ ಚಾರ್ಜಿಂಗ್‌ ಅನ್ನು ನೀಡಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.