iPhone 15 Discount Sale On Flipkart: ನೀವೂ iPhone 15 ಅನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದು, ಅದಕ್ಕೆ ತಂಕ್ಕಂತೆ ನಿಮ್ಮ ಬಳಿ ಬಜೆಟ್ ಇಲ್ಲ ಎಂದರೆ, ಚಿಂತಿಸಬೇಕಾಗಿಲ್ಲ.  ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ನಿಮಗೆ iPhone 15 ಮೇಲೆಉತ್ತಮ ಕೊಡುಗೆಯನ್ನು ನೀಡುತ್ತಿದೆ. ಈ ಕೊಡುಗೆಯ ಲಾಭ ಪಡೆದು ನೀವು ಅದನ್ನು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. iPhone 15 ನ 128GB ರೂಪಾಂತರದ ಮಾರುಕಟ್ಟೆ ಬೆಲೆ  79,900 ರೂ, ಗಳಾಗಿದೆ. ಆದರೆ ನೀವು ಅದನ್ನು 37,198 ರೂಗಳಿಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಇದರ ಮೇಲೆ ಶೇ. 16 ರಷ್ಟು ರಿಯಾಯಿತಿ ನೀಡುತ್ತಿದೆ. ಇದಕ್ಕೆ ವಿಶೇಷ ಬೆಲೆಯನ್ನು ಲಗತ್ತಿಸಲಾಗಿದೆ. ಪ್ರತ್ಯೇಕವಾಗಿ, ನೀವು ಅದನ್ನು ಬ್ಯಾಂಕ್, ವಿನಿಮಯ ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳೊಂದಿಗೆ ಖರೀದಿಸಬಹುದು. (Technology News In Kannada)


COMMERCIAL BREAK
SCROLL TO CONTINUE READING

ಲೆಕ್ಕಾಚಾರ ಈ ರೀತಿಯಾಗಿರಲಿದೆ (Iphone 15 sale on flipkart price)
ಎಂಆರ್‌ಪಿ- ₹79,900
ಫ್ಲಿಪ್‌ಕಾರ್ಟ್ ಕೊಡುಗೆ- ₹66,999 (16% ರಿಯಾಯಿತಿ- ಇದರಲ್ಲಿ ವಿಶೇಷ ಬೆಲೆ)
ವಿನಿಮಯದೊಂದಿಗೆ ಖರೀದಿಸಿ- iPhone 13- 29,500
₹66,999- ₹29,500 - ₹37,698
ಆಕ್ಸಿಸ್ ಕಾರ್ಡ್ ರಿಯಾಯಿತಿ- ₹500
₹37,698- ₹500= ₹37,198


ಹೇಗೆ ಖರೀದಿಸಬೇಕು?
ಮೊದಲು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ಗೆ ಭೇಟಿ ನೀಡಿ.  ಅಲ್ಲಿ iPhone 15 (128GB) ಗಾಗಿ ಹುಡುಕಿ (Iphone 15 sale on flipkart 128gb). ಈಗ ಅಲ್ಲಿ ನೀಡಿರುವ MRP ಮತ್ತು ಲಭ್ಯವಿರುವ ಆಫರ್‌ಗಳನ್ನು ಒಮ್ಮೆ ಗಮನಿಸಿ. ಬ್ಯಾಂಕ್ ಕೊಡುಗೆಗಳು, ವಿನಿಮಯ ಕೊಡುಗೆಗಳು ಮತ್ತು ಬಹುತೇಕ ಅಲ್ಲಿ ಗೋಚರಿಸುತ್ತವೆ. iPhone 15 (128GB) ಮೂಲ ಬೆಲೆ ₹ 79,900 ಆಗಿದ್ದು, ಅದರ ಮೇಲೆ Flipkart ಶೇ.16 ರಷ್ಟು ವಿಶೇಷ ಬೆಲೆ ರಿಯಾಯಿತಿಯನ್ನು ನೀಡುತ್ತಿದೆ ಅಂದರೆ 12,901 ರೂ. ಇದರ ನಂತರ ಫೋನ್‌ನ ಬೆಲೆ ₹79,900- ₹12,901 = ₹66,999 ಕ್ಕೆ ಇಳಿಕೆಯಾಗಲಿದೆ. ಈಗ ನೀವು iPhone 13 ಅನ್ನು ಹೊಂದಿದ್ದರೆ ಅದರ ವಿನಿಮಯದಲ್ಲಿ ನೀವು 29,500 ರೂಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. ಆದರೆ, ನಿಮ್ಮ ಫೋನ್‌ನ ಸ್ಥಿತಿಯ ಆಧಾರದ ಮೇಲೆ ಈ ಬೆಲೆ ನಿರ್ಧರಿಸಲಾಗುತದೆ ಎಂಬುದನ್ನು ನೆನಪಿನಲ್ಲಿಡಿ. ಇದರ ನಂತರ ಫೋನ್‌ನ ಬೆಲೆ ₹66,999- ₹29,500 = ₹37,698 ಆಗುತ್ತದೆ.


ಇದನ್ನೂ ಓದಿ-WhatsApp Hacks: ವಾಟ್ಸ್ ಆಪ್ ವೇದಿಕೆಯಲ್ಲಿ ಲಾಕ್ ಮಾಡಲಾದ ಚಾಟ್ ಫೋಲ್ಡರ್ ಅನ್ನು ಕೂಡ ಮರೆಮಾಚಬಹುದು!


ಇದೆಲ್ಲವನ್ನೂ ಅನ್ವಯಿಸಿ 'ಬೈ ನೌ' ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಹಣ ಪಾವತಿಸಲು ಹೋದಾಗ ಮಲ್ಟಿಬ್ಯಾಂಕ್ ಕೊಡುಗೆಗಳು, UPI ಪಾವತಿ, Flipkart ಫಸ್ಟ್ ಪಾವತಿಯಂತಹ ಪಾವತಿ ವಿಧಾನಗಳು ಅಲ್ಲಿ ಗೋಚರಿಸುತ್ತವೆ. ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಾವತಿಸಿದರೆ, ಅದರ ನಂತರ ನಿಮಗೆ ಮತ್ತೆ 500 ರೂ.ವರೆಗೆ ರಿಯಾಯಿತಿ ಸಿಗುತ್ತದೆ (ಆಕ್ಸಿಸ್ ಕಾರ್ಡ್ ರಿಯಾಯಿತಿ- ₹ 500) ಅಂದರೆ ₹ 37,698- ₹ 500 = ₹ 37,198. ನೀವು 37,198 ರೂಗಳಲ್ಲಿ iPhone 15 ಅನ್ನು ಮನೆಗೆ ತರಬಹುದು.


ಇದನ್ನೂ ಓದಿ-Aadhaar Card ವಂಚನೆಯಿಂದ ಪಾರಾಗಲು ಪ್ರತಿಯೊಬ್ಬರಿಗೂ ತಿಳಿದಿರಬೇಕು ಈ ಐದು ಸಂಗತಿಗಳು!


ಐಫೋನ್ 15 ನಲ್ಲಿ ವಿಶೇಷತೆ ಏನು?
ಐಫೋನ್ 15 ರ ಮೂಲ ರೂಪಾಂತರದ ಕುರಿತು ಹೇಳುವುದಾದರೆ, ಅದರ ಹಿಂಭಾಗವು ಮ್ಯಾಟ್ ಫಿನಿಶ್‌ನೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇ ಗಾತ್ರ 6.10 ಇಂಚುಗಳು, ರಿಫ್ರೆಶ್ ರೇಟ್ 60Hz. ಇದರ ತೂಕ 171. ಇದು IP68 ರೇಟಿಂಗ್ ಅನ್ನು ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ (48MP+12MP) ಫ್ರಂಟ್ 12MP. ಇದು Apple ನ ಇತ್ತೀಚಿನ ನವೀಕರಣ iOS 17 ಅಪ್‌ಡೇಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪ್ರೊಸೆಸರ್ ಕುರಿತು ಹೇಳುವುದಾದರೆ, ಇದು ಹೆಕ್ಸಾ-ಕೋರ್, Apple A16 ಬಯೋನಿಕ್ ಚಿಪ್ಸೆಟ್ ಅನ್ನು ಹೊಂದಿದೆ. ಮೆಮೊರಿ ಮತ್ತು ಬಣ್ಣ ಆಯ್ಕೆಗಳ ಕುರಿತು ಹೇಳುವುದಾದರೆ, ಬಳಕೆದಾರರು ಇದನ್ನು 128GB, 256GB, 512GB ಮತ್ತು ಕಪ್ಪು, ನೀಲಿ, ಹಸಿರು, ಗುಲಾಬಿ, ಹಳದಿ ಬಣ್ಣಗಳಲ್ಲಿ ಖರೀದಿಸಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ