WhatsApp: ಜಗತ್ತಿನ ಪ್ರಸಿದ್ದ ಮೆಸೇಜಿಂಗ್ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಸಂದೇಶಗಳನ್ನು ಸರ್ಕಾರವು ಮೇಲ್ವಿಚಾರಣೆ ಮಾಡುತ್ತಿದೆ ಎಂಬ ಮಾತು ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಈ ಕುರಿತಂತೆ ಭಾರತ ಸರ್ಕಾರದ ಅಧಿಕೃತ ಟ್ವಿಟರ್ ಚಾನೆಲ್ ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದ್ದು ಈ ವದಂತಿ ಕುರಿತಂತೆ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದೆ. 


COMMERCIAL BREAK
SCROLL TO CONTINUE READING

ಏನಿದು ವದಂತಿ? 
ವಾಸ್ತವವಾಗಿ, ಇತ್ತೀಚೆಗೆ ವಾಟ್ಸಾಪ್ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ವಾಟ್ಸಾಪ್ ಸಂದೇಶಗಳನ್ನು ಸರ್ಕಾರವು ಓದುತ್ತದೆ. ವಾಟ್ಸಾಪ್ ಸಂದೇಶಗಳಲ್ಲಿ ಎರಡು ಟಿಕ್‌ಗಳ ಬದಲಿಗೆ ಮೂರು ಟಿಕ್‌ಗಳು ಗೋಚರಿಸಿದರೆ, ನಿಮ್ಮ ಸಂದೇಶಗಳನ್ನು ಸರ್ಕಾರ ಓದುತ್ತಿದೆ ಎಂದು ವದಂತಿಯನ್ನು ಹರಡುವವರು ಹೇಳಿಕೊಳ್ಳುತ್ತಿದ್ದರು. ಇದಲ್ಲದೆ, ವಾಟ್ಸಾಪ್ ಸಂದೇಶದಲ್ಲಿ ಎರಡು ನೀಲಿ ಟಿಕ್ ಮತ್ತು ಒಂದು ಕೆಂಪು ಟಿಕ್ ಗೋಚರಿಸಿದರೆ, ಸಂದೇಶ ಕಳುಹಿಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂತಲೂ ಹೇಳಲಾಗಿತ್ತು. ಮತ್ತೊಂದೆಡೆ, ಮೂರು ಕೆಂಪು ಟಿಕ್ ಕಾಣಿಸಿಕೊಂಡರೆ, ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ವದಂತಿ ಹರಡಲಾಗುತ್ತಿದೆ.  ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿರುವ ಪಿ‌ಐ‌ಬಿ, ಇದೊಂದು ವದಂತಿ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದೆ. 


ಇದನ್ನೂ ಓದಿ- WhatsApp ಬಳಕೆದಾರರೇ ಎಚ್ಚರ! ಎಚ್ಚರ! ಈ ನಂಬರ್‌ನಿಂದ ಬರುವ ಕಾಲ್ ಅನ್ನು ಮಿಸ್ ಆಗಿಯೂ ಪಿಕ್ ಮಾಡಲೇಬೇಡಿ!


ಈ ಕುರಿತಂತೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಫೋಟೋ ಶೇರ್ ಮಾಡಿ ಮಾಹಿತಿ ಹಂಚಿಕೊಂಡಿರುವ ಪಿಐಬಿ ಫ್ಯಾಕ್ಟ್ ಚೆಕ್, ಇದು ಜನರನ್ನು ದಾರಿ ತಪ್ಪಿಸುವ ವದಂತಿಯಷ್ಟೆ, ಈ ವೈರ ಸಂದೇಶದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಒತ್ತಿ ಹೇಳಿದೆ. ಅಷ್ಟೇ ಅಲ್ಲದೆ, ಅಧಿಕೃತ ವಾಟ್ಸಾಪ್ ಪ್ಲಾಟ್‌ಫಾರ್ಮ್ ರೆಡ್ ಟಿಕ್ ಅನ್ನು ಬಳಸುವುದಿಲ್ಲ ಎಂದು ಪಿ‌ಐ‌ಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಬದಲಾಗಿ, ಅವರು ಬೂದು ಮತ್ತು ನೀಲಿ ಬಣ್ಣದ ಟಿಕ್ ಬಳಸುತ್ತಾರೆ. ಆದ್ದರಿಂದ, ನಿಮಗೆ ಫೋಟೋದಲ್ಲಿ ಕೆಂಪು ಟಿಕ್ ಅನ್ನು ತೋರಿಸಿದರೆ, ಅದು ನಿಮ್ಮನ್ನು ದಾರಿ ತಪ್ಪಿಸುವ ಉದ್ದೇಶದಿಂದ ಮಾಡಲಾಗಿದೆ ಮತ್ತು ವಾಸ್ತವವಾಗಿ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. 


ವಾಟ್ಸಪ್‌ನಲ್ಲಿ ಈಗ ಇಷ್ಟು ಜನರೊಂದಿಗೆ ಒಟ್ಟಿಗೆ ವಿಡಿಯೋ ಕಾಲ್ ಮಾಡಬಹುದು


ಸಾಮಾಜಿಕ ಜಾಲತಾಣದ ಸಂದೇಶಗಳನ್ನು ಸರ್ಕಾರ ಮೇಲ್ವಿಚಾರಣೆ ಮಾಡುವ ಬಗ್ಗೆಯೂ ಸ್ಪಷ್ಟತೆ ನೀಡಿರುವ ಪಿ‌ಐ‌ಬಿ ಫ್ಯಾಕ್ಟ್ ಚೆಕ್, ಭಾರತ ಸರ್ಕಾರವು ವಾಟ್ಸಾಪ್ ಆಗಲಿ ಅಥವಾ ಇನ್ನಾವುದೇ  ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಖಾಸಗಿ ಸಂದೇಶಗಳನ್ನು ಮೇಲ್ವಿಚಾರಣೆ ಮಾಡುವುದಿಲ್ಲ ಎಂದು ತಿಳಿಸಿದೆ. 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.