Smartphone Hang Problem: ಪ್ರಸ್ತುತ ಜಗತ್ತಿನಲ್ಲಿ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರುವ ಸ್ಮಾರ್ಟ್‌ಫೋನ್‌ಗಳು ಕೇವಲ ಕರೆಗಳನ್ನು ಮಾಡಲು, ಸಂದೇಶ ಕಳುಹಿಸಲು, ಇಂಟರ್ನೆಟ್ ಬ್ರೌಸ್ ಮಾಡಲು ಮಾತ್ರ ಸೀಮಿತವಾಗಿಲ್ಲ. ಸ್ಮಾರ್ಟ್‌ಫೋನ್‌ನಲ್ಲಿ ಹಲವು ಪ್ರಮುಖ ದಾಖಲೆಗಳನ್ನು ಕೂಡ ಸಂಗ್ರಹಿಸಲಾಗಿರುತ್ತದೆ. ಅಷ್ಟೇ ಅಲ್ಲದೆ, ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಆನ್‌ಲೈನ್ ಪಾವತಿ, ಟಿಕೆಟ್‌ಗಳನ್ನು ಕಾಯ್ದಿರಿಸುವುದು ಮುಂತಾದ ಅನೇಕ ಪ್ರಮುಖ ಕೆಲಸಗಳಿಗೂ ಕೂಡ ಸ್ಮಾರ್ಟ್‌ಫೋನ್ ಅತ್ಯಗತ್ಯ ಎಂತಲೇ ಹೇಳಬಹುದು. ಇಂತಹ ಸ್ಮಾರ್ಟ್‌ಫೋನ್ ಪದೇ ಪದೇ ಹ್ಯಾಂಗ್ ಆಗುತ್ತಿದ್ದರೆ ಇದರಿಂದ ಪ್ರಮುಖ ಕೆಲಸಗಳು ಸ್ಥಗಿತಗೊಳ್ಳಬಹುದು. ಆದರೆ, ನೀವು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸರಳ ವಿಧಾನಗಳನ್ನು ಬಳಸಿಕೊಂಡು ನೀವು ಈ ಸಮಸ್ಯೆಯಿಂದ ಪರಿಹಾರ ಪಡೆಬಹುದು.  


COMMERCIAL BREAK
SCROLL TO CONTINUE READING

ನಿಮ್ಮ ಸ್ಮಾರ್ಟ್‌ಫೋನ್ ಕೂಡ ಪದೇ ಪದೇ ಹ್ಯಾಂಗ್ ಆಗುತ್ತಿದ್ದರೆ ಈ ಸಮಸ್ಯೆಯನ್ನು ನಿವಾರಿಸಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕೆಲವು ಟ್ರಿಕ್ಸ್ ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.  ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುವುದನ್ನು ನೀವು ತಪ್ಪಿಸಬಹುದು, ಇದರೊಂದಿಗೆ ನಿಮ್ಮ ಯಾವುದೇ ಕೆಲಸಗಳು ಕೂಡ ಸ್ಮಾರ್ಟ್‌ಫೋನ್ ಸಮಸ್ಯೆಯಿಂದಾಗಿ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬಹುದು. ಅಂತಹ ಕೆಲವು ಸುಲಭ ಸಲಹೆಗಳು ಈ ಕೆಳಕಂಡಂತಿವೆ... 


1. ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡುವುದು: 
ಇದ್ದಕ್ಕಿದ್ದಂತೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತಿದ್ದರೆ ಫೋನ್ ರೀಸ್ಟಾರ್ಟ್ ಮಾಡುವುದು ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು. ವಾಸ್ತವವಾಗಿ, ಸ್ಮಾರ್ಟ್‌ಫೋನ್ ರೀಸ್ಟಾರ್ಟ್ ಮಾಡುವುದರಿಂದ  ಸ್ಮಾರ್ಟ್‌ಫೋನ್‌ನ ಮೆಮೊರಿಯನ್ನು ರಿಫ್ರೆಶ್ ಮಾಡಲು ಇದು ಸಹಾಯ ಮಾಡುತ್ತದೆ. ಜೊತೆ ಫೋನ್‌ನಲ್ಲಿ ಹ್ಯಾಂಗ್ ಆಗುವ ಸಮಸ್ಯೆಯನ್ನು ಪರಿಹರಿಸಬಹುದು.


ಇದನ್ನೂ ಓದಿ- ಪತಿ ಪತ್ನಿ ಪರಸ್ಪರರ ವಾಟ್ಸಾಪ್ ಮೆಸೇಜ್ ಪರಿಶೀಲಿಸಬಹುದೇ? ಕಾನೂನು ಏನು ಹೇಳುತ್ತೇ?


2.  ಸ್ಮಾರ್ಟ್‌ಫೋನ್‌ನ ಮೆಮೊರಿ ಕ್ಲಿಯರ್ ಮಾಡುವುದು: 
ಕೆಲವೊಮ್ಮೆ ಸ್ಮಾರ್ಟ್‌ಫೋನ್ ಮೆಮೋರಿ ಬಹುತೇಕ ಫುಲ್ ಆದಾಗಲೂ ಸಹ ಫೋನ್ ಹ್ಯಾಂಗ್ ಆಗುತ್ತದೆ. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಅನಗತ್ಯ ಫೈಲ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಆಗಾಗ್ಗೆ ಕ್ಲಿಯರ್ ಮಾಡುತ್ತಿರಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗದೆ ಕಾರ್ಯನಿರ್ವಹಿಸಲು ಸಹಾಯಕವಾಗುತ್ತದೆ. 


3.  ಸ್ಮಾರ್ಟ್‌ಫೋನ್ ಅಪ್ಡೇಟ್: 
ನಿಮ್ಮ ಸ್ಮಾರ್ಟ್‌ಫೋನ್‌ನ ಸಾಫ್ಟ್‌ವೇರ್ ಹಳೆಯದಾಗಿದ್ದರೂ ಸಹ ಅದು ನಿಮ್ಮ ಫೋನ್ ಹ್ಯಾಂಗ್ ಆಗಲು ಕಾರಣವಾಗಬಹುದು. ಇದನ್ನು ತಪ್ಪಿಸಲು ಆಗಾಗ್ಗೆ ನೀವು  ಇತ್ತೀಚಿನ ಸಾಫ್ಟ್‌ವೇರ್ ನವೀಕರಣಗಳೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅಪ್ಡೇಟ್ ಮಾಡುವುದು ಅಗತ್ಯವಾಗಿದೆ. ಸಾಫ್ಟ್‌ವೇರ್ ಅನ್ನು ನವೀಕರಿಸುವುದರಿಂದ ಸ್ಮಾರ್ಟ್‌ಫೋನ್ ಹ್ಯಾಂಗಿಂಗ್ ಸಮಸ್ಯೆ ಬಹುತೇಕ ಕಡಿಮೆಯಾಗುತ್ತದೆ.  


4.  ಸ್ಮಾರ್ಟ್‌ಫೋನ್ ಅನ್ನು ಡೀಫಾಲ್ಟ್ ಸೆಟ್ಟಿಂಗ್‌ಗಳಿಗೆ ಹೊಂದಿಸಿ: 
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದರೆ ಇದರಿಂದ ನಿಮ್ಮ ಸಾಧನವು ಹ್ಯಾಂಗ್ ಆಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ನೀವು  ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಡೀಫಾಲ್ಟ್ ಸೆಟ್ಟಿಂಗ್‌ಗಳಿಗೆ ಹೊಂದಿಸಬಹುದು. ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸುತ್ತದೆ. ಹ್ಯಾಂಗಿಂಗ್ ಸಮಸ್ಯೆಯಿಂದ ಪರಿಹಾರವನ್ನೂ ನೀಡುತ್ತದೆ. 


ಇದನ್ನೂ ಓದಿ- ರೈಲ್ವೆ ನಿಲ್ದಾಣದಲ್ಲಿ ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಲಸಗಳನ್ನು ಮಾಡಲೇಬಾರದು


5.   ಸ್ಮಾರ್ಟ್‌ಫೋನ್ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿ: 
ನೀವು ಮೇಲ್ಕಂಡ ಎಲ್ಲಾ ವಿಧಾನಗಳನ್ನು ಬಳಸಿದ ನಂತರವೂ ನಿಮ್ಮ ಸ್ಮಾರ್ಟ್‌ಫೋನ್ ಸರಿಹೋಗದಿದ್ದರೆ ಅದನ್ನು ಸ್ಥಳೀಯವಾಗಿ ಸರಿಪಡಿಸುವ ಬದಲಿಗೆ ನೀವು ಯಾವ ಕಂಪನಿಯ ಸ್ಮಾರ್ಟ್‌ಫೋನ್ ಹೊಂದಿದ್ದೀರೋ ಅದೇ ಕಂಪನಿಯ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿ. ಒಂದೊಮ್ಮೆ ನಿಮ್ಮ ಫೋನಿನ  ಹಾರ್ಡ್‌ವೇರ್ ಹಾನಿಗೊಳಗಾಗಿದ್ದರೆ ಸರ್ವಿಸ್ ಸೆಂಟರ್‌ನಲ್ಲಿ ಇದನ್ನು ಸರಿಪಡಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.