ISRO PSLV C51 Launched: ISRO ನಿಂದ PSLV C-51/Amazonia-1 ಯಶಸ್ವಿ ಉಡಾವಣೆ
PSLV-C51/Amazonia-1 Launched - PSLV C-51 ಇದು PSLVಯ 51ನೇ ಮಿಷನ್ ಆಗಿದೆ. ಈ ರಾಕೆಟ್ ಮೂಲಕ ಬಾಹ್ಯಾಕಾಶದಲ್ಲಿ ಬ್ರೆಜಿಲ್ ನ Amazonia-1 ಉಪಗ್ರಹದ ಜೊತೆಗೆ ಇತರೆ 18 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಈ ರಾಕೆಟ್ ಅನ್ನು ಚೆನ್ನೈನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿನ ಉಡಾವಣೆ ಮಾಡಲಾಗಿದೆ.
ನವದೆಹಲಿ: PSLV-C51/Amazonia-1 Launched - ಆತ್ಮನಿರ್ಭರ್ ಭಾರತ್ ಪಾಲಿಗೆ ಇಂದು ಐತಿಹಾಸಿಕ ದಿನ. ಏಕೆಂದರೆ ಬಾಹ್ಯಾಕಾಶದಲ್ಲಿ 'ಜೈ ಹಿಂದ್' ಪ್ರತಿಧ್ವನಿಸಲಿದೆ. ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಈ ಬಾರಿ ಉಪಗ್ರಹದ ಜೊತೆಗೆ ಭಗವದ್ಗೀತೆಯ ಎಲೆಕ್ಟ್ರಾನಿಕ್ ನಕಲನ್ನುಸಹ ತೆಗೆದುಕೊಂಡು ಬಾಹ್ಯಾಕಾಶಕ್ಕೆ ಚಿಮ್ಮಿದೆ. ಇದರ ಒಂದು ನ್ಯಾನೋ ಉಪಗ್ರಹದಲ್ಲಿ ಪಿಎಂ ನರೇಂದ್ರ ಮೋದಿ (Narendra Modi) ಅವರ ಚಿತ್ರವೂ ಇದೆ. ಪಿಎಸ್‌ಎಲ್‌ವಿ-ಸಿ 51 / ಅಮೆಜೋನಿಯಾ -1 ಅನ್ನು ಬೆಳಿಗ್ಗೆ 10.24 ಕ್ಕೆ ಶ್ರೀಹರಿಕೋಟದಿಂದ ಯಶಸ್ವಿ ಉಡಾವಣೆ ಕೈಗೊಳ್ಳಲಾಗಿದೆ. ಇದು 2021 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮೊದಲ ಉಡಾವಣೆಯಾಗಿದೆ.
Prime Minister Narendra Modi) ಆತ್ಮನಿರ್ಭರ್ ಭಾರತ್ ಉಪಕ್ರಮ ಮತ್ತು ಬಾಹ್ಯಾಕಾಶ ಖಾಸಗೀಕರಣಕ್ಕೆ ಒಗ್ಗಟ್ಟು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕೇತವಾಗಿದೆ ' ಎಂದು ಹೇಳಿದೆ.
ಇದನ್ನೂ ಓದಿ - ಖಾಸಗಿ ಆಸ್ಪತ್ರೆಗಳಲ್ಲಿ ಸಿಗಲಿದೆ ಕೊರೋನಾ ಲಸಿಕೆಬೆಲೆ ₹ 250 ಮಾತ್ರ..!
ಬ್ರೆಜಿಲ್ ನಿರ್ಮಿತ ಮೊಟ್ಟಮೊದಲ ಉಪಗ್ರಹ ಉಡಾವಣೆ
ಈ ಮಿಷನ್ ಮೂಲಕ SKI ಡಿಜಿಟಲ್ ಭಗವದ್ಗೀತೆಯನ್ನು ಎಸ್‌ಡಿ (ಸುರಕ್ಷಿತ ಡಿಜಿಟಲ್) ಕಾರ್ಡ್‌ನಲ್ಲಿ ಹಾಕಿ ಬಾಹ್ಯಾಕಾಶಕ್ಕೆ ಕಳುಹಿಸಿದೆ. ಹಾಗೆಯೇ ಈ ಉಪಗ್ರಹವು 25 ಸಾವಿರ ಭಾರತೀಯ ಜನರ ಹೆಸರುಗಳನ್ನು ಕೂಡ ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗಿದೆ. ಇಸ್ರೋದ ವಾಣಿಜ್ಯ ಕೈ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ಗೆ ಇಂದಿನ ದಿನ ತುಂಬಾ ವಿಶೇಷ ದಿನವಾಗಿದೆ. ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಸಿ 51 / ಅಮೆಜೋನಿಯಾ -1 ಯುಎಸ್‌ನಲ್ಲಿ ಸಿಯಾಟಲ್‌ನ ಸ್ಯಾಟಲೈಟ್ ರೈಡ್‌ಶೇರ್ ಮತ್ತು ಮಿಷನ್ ಮ್ಯಾನೇಜ್‌ಮೆಂಟ್ ಪ್ರೊವೈಡರ್ ಸ್ಪೇಸ್‌ಪ್ಲೈಟ್ ಇಂಕ್‌ನ ವಾಣಿಜ್ಯ ನಿರ್ವಹಣೆಯಡಿಯಲ್ಲಿ ಪ್ರಾರಂಭಿಸಲಾಗುವ ಎನ್‌ಎಸ್‌ಐಎಲ್‌ನ ಮೊದಲ ಮೀಸಲಾದ ವಾಣಿಜ್ಯ ಮಿಷನ್ ಇದಾಗಿದೆ. ಎನ್‌ಎಸ್‌ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿ ನಾರಾಯಣ್ ಮಾತನಾಡಿ, 'ನಾವು ಉಡಾವಣೆಗೆ ಕುತೂಹಲದಿಂದ ಕಾಯುತ್ತಿದ್ದೇವೆ. ಬ್ರೆಜಿಲ್‌ನಲ್ಲಿ ನಿರ್ಮಿಸಲಾದ ಮೊದಲ ಉಪಗ್ರಹವನ್ನು ಉಡಾಯಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- Parker Solar Probe : ಶುಕ್ರ ಗ್ರಹದ ಬಹು ಅಪರೂಪದ ಫೋಟೋ ಕ್ಲಿಕ್ಕಿಸಿದ ನಾಸಾ..!
ಅಮೆಜೋನಿಯಾ -1 ಬ್ರೆಜಿಲ್ ನ ಮೊದಲ ಉಪಗ್ರಹವಾಗಿದೆ
637 ಕೆಜಿ ತೂಕದ ಅಮೆಜೋನಿಯಾ -1 ಭಾರತದಿಂದ ಉಡಾಯಿಸಲ್ಪಡುವ ಬ್ರೆಜಿಲ್‌ನ ಮೊದಲ ಉಪಗ್ರಹವಾಗಿದೆ. ಇದು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (INPI) ಆಪ್ಟಿಕಲ್ ಭೂ ವೀಕ್ಷಣಾ ಉಪಗ್ರಹವಾಗಿದೆ. ಅಮೆಜೋನಿಯಾ -1 ಮೂಲಕ ಅಮೆಜಾನ್ ಪ್ರದೇಶದಲ್ಲಿನ ಅರಣ್ಯನಾಶದ ಮೇಲ್ವಿಚಾರಣೆ ಮತ್ತು ಬ್ರೆಜಿಲ್ ಪ್ರದೇಶದಲ್ಲಿನ ವೈವಿಧ್ಯಮಯ ಕೃಷಿಯ ವಿಶ್ಲೇಷಣೆ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ಉಪಗ್ರಹವು ಬಳಕೆದಾರರಿಗೆ ರಿಮೋಟ್ ಸೆನ್ಸಿಂಗ್ ಡೇಟಾ ಒದಗಿಸಲಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ- ನಿಮ್ಮ ನಿತ್ಯಪೂಜೆಯಲ್ಲಿ ಈ ಐದು ತಪ್ಪುಗಳಾಗುತ್ತಿರಬಹುದು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.