ISRO: PSLV-C52 ಯಶಸ್ವಿ ಉಡಾವಣೆ
ISRO: ಇಸ್ರೋ ಈ ವರ್ಷದ ಮೊದಲ ಉಡಾವಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಸೋಮವಾರ ಬೆಳಗ್ಗೆ PSLV-C52 ಯಶಸ್ವಿಯಾಗಿ ಉಡಾವಣೆಯಾಯಿತು. ಪಿಎಸ್‌ಎಲ್‌ವಿ ತನ್ನೊಂದಿಗೆ ಎರಡು ಸಣ್ಣ ಉಪಗ್ರಹಗಳನ್ನೂ ಹೊತ್ತೊಯ್ದಿದೆ.
ISRO: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಮೊದಲ ಮಿಷನ್ ಆರಂಭಿಸಿದೆ. ಇದರ ಅಡಿಯಲ್ಲಿ ಪಿಎಸ್‌ಎಲ್‌ವಿ-ಸಿ52 (PSLV-C52) ಅನ್ನು ಸೋಮವಾರ ಅಂದರೆ ಇಂದು ಬೆಳಗ್ಗೆ 5.59ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಕೇಂದ್ರದಿಂದ ಇದನ್ನು ಉಡಾವಣೆ ಮಾಡಲಾಯಿತು.
ಪಿಎಸ್‌ಎಲ್‌ವಿ-ಸಿ52 (PSLV-C52) ಮೂಲಕ ಭೂ ವೀಕ್ಷಣಾ ಉಪಗ್ರಹ EOS-04 ಅನ್ನು ಕಕ್ಷೆಗೆ ಕಳುಹಿಸುವ ಕ್ಷಣಗಣನೆ ಭಾನುವಾರ ಬೆಳಗ್ಗೆಯಿಂದಲೇ ಆರಂಭವಾಗಿತ್ತು. ಇದೀಗ ಪಿಎಸ್‌ಎಲ್‌ವಿ-ಸಿ52 (PSLV-C52) ಯಶಸ್ವಿಯಾಗಿ ಉಡಾವಣೆಯಾಗಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ತನ್ನೊಂದಿಗೆ ಎರಡು ಸಣ್ಣ ಉಪಗ್ರಹಗಳನ್ನೂ ಹೊತ್ತೊಯ್ದಿದೆ.
Facebook ದಾರಿ ತುಳಿದ WhatsApp, ಇನ್ಮುಂದೆ DP ಜೊತೆಗೆ ಕವರ್ ಫೋಟೋ ಅಂಟಿಸಲು ಬರುತ್ತಿದೆ ಹೊಸ ವೈಶಿಷ್ಟ್ಯ
EOS-04 ಏನು ಮಾಡುತ್ತದೆ?
ಭೂ ವೀಕ್ಷಣಾ ಉಪಗ್ರಹ (Earth Observation Satellite – EOS-04) ಒಂದು 'ರೇಡಾರ್ ಇಮೇಜಿಂಗ್ ಉಪಗ್ರಹ'ವಾಗಿದ್ದು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಕೃಷಿ, ಅರಣ್ಯ ಮತ್ತು ತೋಟ, ಮಣ್ಣಿನ ತೇವಾಂಶ, ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಶನ್‌ಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಪಿಎಸ್‌ಎಲ್‌ವಿ ಎರಡು ಸಣ್ಣ ಉಪಗ್ರಹಗಳನ್ನು ಹೊತ್ತೊಯ್ಯುಯ್ದಿದ್ದು, ಇದರಲ್ಲಿ ಇನ್‌ಸ್ಪೈರ್‌ಸ್ಯಾಟ್-1, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಐಎಸ್‌ಟಿ) ಉಪಗ್ರಹವಾಗಿದೆ, ಇದನ್ನು ಬೌಲ್ಡರ್‌ನ ಕೊಲೊರಾಡೋ ವಿಶ್ವವಿದ್ಯಾಲಯದ ವಾತಾವರಣ ಮತ್ತು ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದ ಸಹಯೋಗದೊಂದಿಗೆ ನಿರ್ಮಿಸಲಾಗಿದೆ.
ಇದನ್ನೂ ಓದಿ- Jio Best Plan! ಉಚಿತ Netflix, Amazon Prime ಸೇರಿದಂತೆ 100 GB ಡೇಟಾ ಮತ್ತು ಹಲವು ಲಾಭ
ಈ ಯೋಜನೆಗಳು ವೇಗವನ್ನು ಪಡೆಯುತ್ತವೆ:
NTU, ಸಿಂಗಾಪುರ ಮತ್ತು NCU, ತೈವಾನ್ ಸಹ INSPIRESAT-1 ನಲ್ಲಿ ಕೊಡುಗೆ ನೀಡಿವೆ. ಈ ಉಪಗ್ರಹದ ಉದ್ದೇಶವು ಅಯಾನುಗೋಳದ ಡೈನಾಮಿಕ್ಸ್ ಮತ್ತು ಸೂರ್ಯನ ಕರೋನಲ್ ಥರ್ಮಲ್ ಪ್ರಕ್ರಿಯೆಗಳ ತಿಳುವಳಿಕೆಯನ್ನು ಸುಧಾರಿಸುವುದು. ಎರಡನೇ ಉಪಗ್ರಹ ಇಸ್ರೋದ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ ಸ್ಯಾಟಲೈಟ್ (INS-2TD) ಆಗಿದೆ. ಥರ್ಮಲ್ ಇಮೇಜಿಂಗ್ ಕ್ಯಾಮೆರಾವನ್ನು ತನ್ನ ಸಾಧನವಾಗಿ ಹೊಂದಿರುವ ಉಪಗ್ರಹವು ಭೂಮಿಯ ಮೇಲ್ಮೈ ತಾಪಮಾನ, ಜೌಗು ಪ್ರದೇಶಗಳು ಅಥವಾ ಸರೋವರಗಳ ಮೇಲ್ಮೈ ನೀರಿನ ತಾಪಮಾನ, ಸಸ್ಯವರ್ಗ ಮತ್ತು ಹಗಲು-ರಾತ್ರಿಯ ಮೌಲ್ಯಮಾಪನದಲ್ಲಿ ಸಹಾಯ ಮಾಡುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಕಾರ, ಈ ಉಪಗ್ರಹ ಉಡಾವಣೆಯು ಅದರ ಯೋಜನೆಗಳಿಗೆ ಪ್ರಚೋದನೆಯನ್ನು ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.