itel Super Guru 4G :itel ಹೊಸ ಫೀಚರ್ ಫೋನ್ ಐಟೆಲ್ ಸೂಪರ್ ಗುರು 4G ಅನ್ನು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯ ಫೋನ್ ಬಯಸುವವರಿಗೆ ಇದು ಬೆಸ್ಟ್ ಆಯ್ಕೆ.ಇದರ ಬೆಲೆ 2,000 ರೂ.ಗಿಂತಲೂ ಕಡಿಮೆ.ಹಲವು ಭಾರತೀಯ ಭಾಷೆಗಳಲ್ಲಿ ಸುದ್ದಿಗಳನ್ನು ನೋಡುವುದು,ಯೂಟ್ಯೂಬ್ ನೋಡುವುದು, UPI ಪಾವತಿಗಳನ್ನು ಮಾಡುವುದು ಮುಂತಾದ ಹಲವು ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿದೆ. Itel Super Guru 4G ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ನೋಡೋಣ. 


COMMERCIAL BREAK
SCROLL TO CONTINUE READING

ಭಾರತದಲ್ಲಿ itel Super Guru 4G ಬೆಲೆ : 
ಹೊಸ ಐಟೆಲ್ ಸೂಪರ್ ಗುರು 4G ಫೋನ್ ಬೆಲೆ 1,799.ಇದು ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ಅಮೆಜಾನ್‌ನಲ್ಲಿ ಲಭ್ಯವಿದೆ. ಹಸಿರು,ಕಪ್ಪು ಮತ್ತು ಗಾಢ ನೀಲಿ ಬಣ್ಣಗಳಲ್ಲಿ ಈ ಫೋನ್ ಬರುತ್ತದೆ. 


ಇದನ್ನೂ ಓದಿ : SBI Account Block: ಎಸ್‌ಬಿ‌ಐ ಹೆಸರಿನಲ್ಲಿ ಬರುವ ಈ ಸಂದೇಶದ ಬಗ್ಗೆ ಇರಲಿ ಎಚ್ಚರ


itel ಸೂಪರ್ ಗುರು 4G ವಿಶೇಷಣಗಳು : 
Itel Super Guru 4G 2-ಇಂಚಿನ ಸ್ಕ್ರೀನ್, 1000mAh ಬ್ಯಾಟರಿ ಮತ್ತು UPI ಪಾವತಿಗಳಿಗಾಗಿ ಬಾರ್‌ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ಸಹಾಯ ಮಾಡುವ VGA ಕ್ಯಾಮೆರಾವನ್ನು ಹೊಂದಿದೆ.ಈ ಫೋನ್ ನಲ್ಲಿ ಇಂಟರ್ನೆಟ್ ಮೂಲಕ YouTube ವೀಡಿಯೊಗಳನ್ನು ಪ್ಲೇ ಮಾಡಬಹುದು. ಚಿಕ್ಕ YouTube ವೀಡಿಯೊಗಳನ್ನು ಇದರಲ್ಲಿ ವೀಕ್ಷಿಸಬಹುದು.ಇದಲ್ಲದೆ,ಈ ಫೋನ್ 13 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ.


Itel Super Guru 4G ಫೋನ್ ನಿಮಗೆ ನಾಲ್ಕು ಭಾಷೆಗಳಲ್ಲಿ BBC ನ್ಯೂಸ್ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇಂಗ್ಲೀಷ್,ಹಿಂದಿ,ಉರ್ದು ಮತ್ತು ಪಂಜಾಬಿಯಲ್ಲಿ BBC ನ್ಯೂಸ್ ವೀಕ್ಷಿಸಬಹುದು.ಇದು ಲೆಟ್ಸ್ ಚಾಟ್ ಎಂಬ ಚಾಟಿಂಗ್ ಅಪ್ಲಿಕೇಶನ್ ಅನ್ನು ಹೊಂದಿದೆ. ಸೊಕೊಬಾನ್, 2048 ಮತ್ತು ಟೆಟ್ರಿಸ್‌ನಂತಹ ಆಟಗಳನ್ನು ಕೂಡಾ ಒಳಗೊಂಡಿದೆ.ಈ ಫೀಚರ್ ಫೋನ್ ಡ್ಯುಯಲ್ 4G ಕನೆಕ್ಟಿವಿಟಿ ಮತ್ತು VoLTE ಅನ್ನು ಹೊಂದಿದೆ ಎಂದು ಗಮನಿಸಬೇಕಾದ ಅಂಶ. 


ಇದನ್ನೂ ಓದಿ :  Vivo Y200i: 12GB RAM, 6000mAh ಬ್ಯಾಟರಿಯ ವಿವೋ Y200i ಸ್ಮಾರ್ಟ್‌ಫೋನ್ ಬಿಡುಗಡೆ


ಫೆಬ್ರವರಿಯಲ್ಲಿ, itel ಹೆಸರಿನ ಸ್ಮಾರ್ಟ್‌ಫೋನ್ ಕಂಪನಿಯು itel P55 ಮತ್ತು itel P55+ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಈ ಫೋನ್‌ಗಳು 6.6 ಇಂಚಿನ ದೊಡ್ಡಸ್ಕ್ರೀನ್, 50MP ಮುಖ್ಯ ಕ್ಯಾಮೆರಾ, 5,000mAh ಶಕ್ತಿಶಾಲಿ ಬ್ಯಾಟರಿ ಮತ್ತು ಇನ್ನೂ ಹಲವು ವಿಶೇಷತೆಗಳನ್ನು ಹೊಂದಿವೆ. 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ itel P55 ಫೋನ್  9,999 ರೂ.ಗೆ ಲಭ್ಯವಿದೆ.  ಆದರೆ 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ರೂಪಾಂತರವು  10,499ರೂ.ನಲ್ಲಿ ಸಿಗುತ್ತದೆ. ಆದರೆ, 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ itel P55+ ಫೋನ್ Amazonನಲ್ಲಿ ಕೇವಲ 9,999 ರೂ.ಗಳಲ್ಲಿ ಲಭ್ಯವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.