Xiaomi India : ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಟಿವಿ ಬ್ರ್ಯಾಂಡ್ Xiaomi ಇಂಡಿಯಾ, ಹಿರಿಯ ನಾಗರಿಕ ಬಳಕೆದಾರರಿಗಾಗಿ  at home phone support ಸೇವೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, Xiaomi ಹಿರಿಯ ನಾಗರಿಕರಿಗೆ ಫೋನ್ ಸೆಟಪ್ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳನ್ನು ಪಡೆಯಲು, ಗ್ರಾಹಕರು ಕೆಲವು ಸುಲಭ ಹಂತಗಳನ್ನು ಅನುಸರಿಸಬೇಕಾಗುತ್ತದೆ. QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮತ್ತು  ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡುವ ಮೂಲಕ ತಮ್ಮಗೆ ಬೇಕಾಗಿರುವ ಸೇವೆಯನ್ನು ಆಯ್ಕೆ ಮಾಡಬಹುದಾಗಿದೆ. ವೈಯಕ್ತಿಕ ವಿವರಗಳನ್ನು ಸಲ್ಲಿಸಿದ ನಂತರ, Xiaomi ಸೇವಾ ಪ್ರತಿನಿಧಿಯು ಪಿನ್ ಕೋಡ್ ಪರಿಶೀಲಿಸುವ ಮೂಲಕ ಸೇವೆಯ ಪ್ರಕಾರ ಮತ್ತು ಅರ್ಹತೆಯನ್ನು ಪರಿಶೀಲಿಸಲು  ಗ್ರಾಹಕರನ್ನು ಸಂಪರ್ಕಿಸುತ್ತಾರೆ. 


COMMERCIAL BREAK
SCROLL TO CONTINUE READING

ನಿಮಾಗೇ ಅಗತ್ಯವಿರುವ ಸೇವೆಯನ್ನು ಆಯ್ಕೆ ಮಾಡಿದ ಕೆಲವೇ ಕ್ಷಣಗಳಲ್ಲಿ  Xiaomi ಸೇವಾ ಪ್ರತಿನಿಧಿ ಮನೆ ಬಾಗಿಲಿಗೆ ಬರುತ್ತಾರೆ. ಇದಲ್ಲದೆ, ಗ್ರಾಹಕರು ಹಾಟ್‌ಲೈನ್  ನಂಬರ್  1800-103-6286 ಮತ್ತು ವಾಟ್ಸಾಪ್ ಸಂಖ್ಯೆ - 8861826286 ಮೂಲಕವೂ ಟೋಕನ್ ಪಡೆಯಬಹುದಾಗಿದೆ. 


ಇದನ್ನೂ ಓದಿ : 7 ಸೀಟರ್ ಬಿಟ್ಟುಬಿಡಿ.. ಬಂದೇಬಿಡ್ತು 10 ಸೀಟರ್’ನ ಬೆಸ್ಟ್ ಕಾರು: ಹಿಂದೆಂದೂ ಕಂಡಿರದ ವೈಶಿಷ್ಟ್ಯ; ಭಾರಿ ಅಗ್ಗದ ಬೆಲೆಯಲ್ಲಿ!


ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುವ ಸಲುವಾಗಿ ನವೀನ ಮತ್ತು ಕಸ್ಟಮೈಸ್ ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ Xiaomi ಇಂಡಿಯಾದ ಅಧ್ಯಕ್ಷ ಮುರಳಿಕೃಷ್ಣನ್ ಬಿ ಹೇಳಿದ್ದಾರೆ.  ವಿವಿಧ ಕಾರಣಗಳಿಂದ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದ ಹಿರಿಯ ನಾಗರಿಕ ಬಳಕೆದಾರರಿಗಾಗಿ ಈ ಸೇವೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 


ಸೀಮಿತ ಅವಧಿಗೆ ಅನ್ವಯವಾಗುವಂತೆ ಮನೆ ಬಾಗಿಲಿಗೆ ತೆರಳಿ ಉಚಿತ ಸೇವೆಯನ್ನು ನೀಡುವ ಮೂಲಕ, ಗ್ರಾಹಕರಿಗೆ ತಡೆರಹಿತ ಸೇವಾ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ಈ ಸೇವೆಯನ್ನು ಒದಗಿಸುತ್ತಿರುವುದಾಗಿ ಹೇಳಿದ್ದಾರೆ. 


ಇದನ್ನೂ ಓದಿ : Vastu Tips: ಮೊಬೈಲ್ ವಾಲ್ ಪೇಪರ್ ನಲ್ಲಡಗಿದೆ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ! 


30 ದಿನಗಳವರೆಗೆ ಉಚಿತ ಸೇವೆ :
ಈ ಪ್ರಯೋಜನವು  ಹತ್ತಿರದ ಸೇವಾ ಕೇಂದ್ರದಿಂದ 20 ಕಿಮೀ ವ್ಯಾಪ್ತಿಯೊಳಗೆ ವಾಸಿಸುವ ಹಿರಿಯ ನಾಗರಿಕರಿಗೆ ಲಭ್ಯವಿರಲಿದೆ. ಪರಿಚಯಾತ್ಮಕ ಕೊಡುಗೆಯಾಗಿ ಹಿರಿಯ ನಾಗರಿಕರಿಗೆ 30 ದಿನಗಳವರೆಗೆ ಉಚಿತ ಸೇವೆ ನೀಡಲಾಗುವುದು.  ಇತರ ಗ್ರಾಹಕರು ಸಹ ಸೇವೆಗಳನ್ನು ಪಡೆಯಬಹುದು. ಆದರೆ 249 ರೂಪಾಯಿ ಮತ್ತು ತೆರಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.


ಈ ನಗರಗಳಲ್ಲಿ ಸೇವೆ ಲಭ್ಯ :
ಮೊದಲ ಹಂತದಲ್ಲಿ, ಸೇವೆಯು  ಅಹಮದಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ದೆಹಲಿ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನೋಯ್ಡಾ, ಪುಣೆ ಸೇರಿದಂತೆ 15 ನಗರಗಳಲ್ಲಿ ಲೈವ್ ಆಗಲಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.