ಆಟೋ ಎಕ್ಸ್ಪೋದಲ್ಲಿ ಅನಾವರಣವಾಯಿತು ಮಾರುತಿ Jimny 5-Door !
Maruti Jimny in india : ಜಿಮ್ನಿ 5-ಡೋರ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಪರಿಚಯಿಸಲಾಗಿದೆ. ಇದು ಕಂಪನಿಯ 3 ಬಾಗಿಲಿನ ಜಿಮ್ನಿಯ ವಿಸ್ತೃತ ಆವೃತ್ತಿಯಾಗಿದೆ.
Maruti Jimny 5 Door unveiled : ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಿದೆ. ಇದು ಕಂಪನಿಯ 3 ಡೋರ್ ಜಿಮ್ನಿಯ ವಿಸ್ತೃತ ಆವೃತ್ತಿಯಾಗಿದೆ. ಇದಕ್ಕೆ 1.5 ಲೀಟರ್ K15B ಎಂಜಿನ್ ನೀಡಲಾಗಿದೆ. ಕಂಪನಿಯು ಈ ಕಾರನ್ನು ಗುಜರಾತ್‌ನಲ್ಲಿರುವ ತನ್ನ ಸ್ಥಾವರದಲ್ಲಿ ತಯಾರಿಸುತ್ತದೆ. ಇಲ್ಲಿಂದಲೇ ಇದನ್ನು ಭಾರತ ಮತ್ತು ವಿದೇಶಗಳಿಗೆ ಮಾರಾಟ ಮಾಡಲಾಗುವುದು. ಕಂಪನಿಯು ಇಂದಿನಿಂದಲೇ ಹೊಸ ಜಿಮ್ನಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ಈ ಕಾರಿನ ವಿತರಣೆ ಪ್ರಾರಂಭವಾಗುವ ಸಾಧ್ಯತೆಯಿದೆ. ಮಾರುತಿಯ ಈ ಕಾರು ಮಹೀಂದ್ರ ಥಾರ್‌ಗೆ ತೀವ್ರ ಪೈಪೋಟಿ ನೀಡಲಿದೆ.
ಲುಕ್ ಮತ್ತು ಡಿಸೈನ್ :
4X4 ನೊಂದಿಗೆ ಬರುವ ಇದು ಮಾರುತಿಯ ಮೊದಲ ಕಾರು ಇದಾಗಿರಲಿದೆ. 5 ಜನರು ಕುಳಿತುಕೊಳ್ಳಬೇಕಾದ ವ್ಯವಸ್ಥೆ ಈ ಕಾರಿನಲ್ಲಿದೆ. ಇದು 3,985mm ಉದ್ದ, 1,645mm ಅಗಲ ಮತ್ತು 1,720mm ಎತ್ತರವನ್ನು ಹೊಂದಿದೆ. ಇದರ ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ ಆಗಿದೆ. ಜಿಮ್ನಿಯ ಅಪ್ರೋಚ್ ಆಂಗಲ್ 36 ಡಿಗ್ರಿ, ರಾಂಪ್ ಬ್ರೇಕ್-ಓವರ್ ಆಂಗಲ್ 24 ಡಿಗ್ರಿ ಮತ್ತು ಡಿಪಾರ್ಚರ್ ಆಂಗಲ್ 50 ಡಿಗ್ರಿ ಇರಲಿದೆ. ಮಾರುತಿ ಸುಜುಕಿ ಈ ಕಾರನ್ನು 7 ಬಣ್ಣಗಳಲ್ಲಿ ಹೊರ ತರುತ್ತಿದೆ. ಈ ಪೈಕಿ 5 ಮೊನೊಟೋನ್ ಮತ್ತು 2 ಡ್ಯುಯಲ್ ಟೋನ್ ಶೇಡ್ ಆಗಿರಲಿದೆ.
ಇದನ್ನೂ ಓದಿ : ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಫೋನ್ ರೆಕಾರ್ಡ್ ಆಗುತ್ತಿದೆಯೇ ? ಸುಲಭವಾಗಿ ಪತ್ತೆ ಹಚ್ಚಿ
ಕ್ಯಾಬಿನ್ ಮತ್ತು ಇಂಟೀರಿಯರ್ :
5 ಡೋರ್ ಜಿಮ್ನಿಯ ಕ್ಯಾಬಿನ್ ತ್ರೀ ಡೋರ್ ವರ್ಸನ್ ಅನ್ನು ಹೋಲುತ್ತದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯಂತಹ 9.0-ಇಂಚಿನ ಸ್ಮಾರ್ಟ್ ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆರ್ಕಮಿಸ್ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಹೊಂದಿರಲಿದೆ. ವಾಹನದ ಲೋಕೇಶನ್ ಮತ್ತು ಇತರ ಪ್ರಮುಖ ಅಪ್ಡೇಟ್ ಗಳನ್ನು ತೋರಿಸುವ ರಿಮೋಟ್ ಆಯ್ಕೆಗಳನ್ನು ಕೂಡಾ ನೀಡಲಾಗಿದೆ. ಜಿಮ್ನಿಯಲ್ಲಿ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಇದು 6 ಏರ್‌ಬ್ಯಾಗ್‌ಗಳು, ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ (LSD), ESP ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್‌ವ್ಯೂ ಕ್ಯಾಮೆರಾ ಮತ್ತು EBD ಜೊತೆಗೆ ABS ಅನ್ನು ಸಹ ಪಡೆಯುತ್ತದೆ.
ಈ ದಿನ ಆರಂಭವಾಗಲಿದೆ BSNL 4G ಸೇವೆ.! ಕಂಪನಿ ನೀಡಿದ ಸ್ಪಷ್ಟ ಮಾಹಿತಿ ಇಲ್ಲಿದೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.