Jio Free OTT Postpaid Plan Offer: ರಿಲಯನ್ಸ್ ಮಾಲೀಕತ್ವದ ಜಿಯೋ ಕಂಪನಿಯ ಪ್ರಿಪೇಯ್ಡ್ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ, ಆದರೆ ಅದರ ಒಂದು ಪೋಸ್ಟ್‌ಪೇಯ್ಡ್ ಯೋಜನೆಯ ಜನಪ್ರಿಯತೆ ಇಂದಿಗೂ ಕೂಡ ಕಡಿಮೆಯಾಗಿಲ್ಲ, ಇದರ ಹಿಂದಿನ ಕಾರಣವೂ ತುಂಬಾ ವಿಶೇಷವಾಗಿದೆ.  ಏಕೆಂದರೆ, ಕಂಪನಿಯು ತನ್ನ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಹಲವು ಕೊಡುಗೆಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಬಳಕೆದಾರರು ಕೂಡ ಅವುಗಳನ್ನು ತುಂಬಾ ಇಷ್ಟಪಡುತ್ತಾರೆ. ಯುವಕರನ್ನು ಗುರಿಯಾಗಿಸುವುದು ಕಂಪನಿಯ ನೇರ ಉದ್ದೇಶವಾಗಿದೆ. ನೀವು ಪೋಸ್ಟ್‌ಪೇಯ್ಡ್ ಯೋಜನೆಯನ್ನು ಖರೀದಿಸಲು ಬಯಸುತ್ತಿದ್ದು, ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆಯ ಹುಡುಕಾಟದಲ್ಲಿದ್ದರೆ, ನಾವು ಜಿಯೋ ಕಂಪನಿಯ ಒಂದು ಯೋಜನೆಯ ಕುರಿತು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ, ಇದರಲ್ಲಿ ನೀವು ದುಬಾರಿ ಪ್ರಿಪೇಯ್ಡ್‌ ಯೋಜನೆಗಳಂತಹ ಹಲವು ಪ್ರಯೋಜನಗಳನ್ನು ಪಡೆಯುತ್ತೀರಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Smartphone Tips: ನಿಮ್ಮ ಸ್ಮಾರ್ಟ್ ಫೋನಗೂ ವೈರಸ್ ಸೇರಿಕೊಂಡಿದೆಯಾ? ಈ ಸುಲಭ ವಿಧಾನದಿಂದ ಪತ್ತೆಹಚ್ಚಿ


ಈ ಯೋಜನೆ ಯಾವುದು?
ನಾವು ಹೇಳಲಿರುವ ಜಿಯೋ ಪ್ಲಾನ್‌ನ ಬೆಲೆ ಕೇವಲ 399 ರೂ. ಈ ಯೋಜನೆಯಲ್ಲಿ ನೀವು ಹಲವಾರು ವೈಶಿಷ್ಟ್ಯಗಳನ್ನು ಗಮನಿಸಬಹುದು. ಇದರಲ್ಲಿ, ನಿಮಗೆ 75 GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 200 GB ವರೆಗೆ ಡೇಟಾ ರೋಲ್‌ಓವರ್ ನೀಡಲಾಗುತ್ತದೆ. ಅಷ್ಟೇ ಅಲ್ಲ, ಈ ಅಗ್ಗದ ಪೋಸ್ಟ್‌ಪೇಯ್ಡ್ ಪ್ಲಾನ್‌ನಲ್ಲಿ ನೀವು ನಿತ್ಯ 100 SMS ಅನ್ನು ಸಹ ಪಡೆಯುತ್ತೀರಿ, ನಿಮ್ಮ ಡೇಟಾ ಖಾಲಿಯಾದಾಗ ಅಥವಾ ಇಂಟರ್ನೆಟ್ ಕಾರ್ಯನಿರ್ವಹಿಸದಿದ್ದಾಗ ಈ ಯೋಜನೆ ನಿಮಗೆ ಹೆಚ್ಚು ಉಪಯೋಗಕ್ಕೆ ಬರುತ್ತದೆ.


ಇದನ್ನೂ ಓದಿ-WhatsApp ನಲ್ಲಿ ನಿಮಗೂ ಸ್ಟೇಟಸ್ ಬಳಸುವ ಅಥವಾ ನೋಡುವ ಅಭ್ಯಾಸವಿದೆಯಾ? ಹಾಗಾದರೆ ಈ ಸಂತಸದ ಸುದ್ದಿ ನಿಮಗಾಗಿ


ಈ ವಿಶೇಷ ಪ್ರಯೋಜನಗಳನ್ನು ಸಹ ಈ ಯೋಜನೆ ಒಳಗೊಂಡಿದೆ
ನಾವು ಈ ಯೋಜನೆಯ ವಿಶೇಷ ಪ್ರಯೋಜನಗಳ ಕುರಿತು ಹೇಳುವುದಾದರೆ, ಬಳಕೆದಾರರಿಗೆ ಇದರಲ್ಲಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಸಾಮಾನ್ಯವಾಗಿ, ಈ OTT ವೇದಿಕೆಗಳ ಚಂದಾದಾರಿಕೆಗೆ ತಿಂಗಳಿಗೆ ನೀವು ರೂ. 200 ರಿಂದ ರೂ 500 ವರೆಗೆ (ಬೇಸಿಕ್ ಪ್ಲಾನ್) ಶುಲ್ಕ ಪಾವತಿಸಬೇಕು, ಆದ್ದರಿಂದ ನೀವು ಜಿಯೋದ ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಖರೀದಿಸಿದರೆ, ಮನರಂಜನೆಗಾಗಿ ನೀವು ಈ ಅಪ್ಲಿಕೇಶನ್‌ಗಳಿಗಾಗಿ ಪ್ರತ್ಯೇಕವಾಗಿ ಹಣವನ್ನು ಖರ್ಚು ಮಾಡುವ. ಅಗತ್ಯವಿಲ್ಲ, ಇದು ಈ ಯೋಜನೆಯ ದೊಡ್ಡ ವೈಶಿಷ್ಟ್ಯವಾಗಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.