ನವದೆಹಲಿ :  ಗ್ರಾಹಕರನ್ನುಆಕರ್ಷಿಸಲು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾದಂತಹ ಅನೇಕ ಟೆಲಿಕಾಂ ಕಂಪನಿಗಳು ಅದ್ಬುತ ಪ್ಲಾನ್ ಗಳನು ಪರಿಚಯಿಸುತ್ತಿದೆ. ನಂಬರ್ ಒನ್ ಆಗಲು, ಕಂಪನಿಗಳು ಅಗ್ಗದ ಯೋಜನೆಗಳನ್ನು ಆರಂಭಿಸಿವೆ.  ಜಿಯೋ (Jio recharge plan) ಅವುಗಳಲ್ಲಿ ಮುಂಚೂಣಿಯಲ್ಲಿದೆ. ಜಿಯೋ ಅಂತಹ ಅನೇಕ ಪ್ಲಾನ್ ಗಳನ್ನು (Jio recharge plan) ಹೊರ ತಂದಿದೆ. ಈ ಪ್ಲಾನ್ ಗಳು ಕಡಿಮೆ ದರದಲ್ಲಿ ಹೆಚ್ಚಿನ ಡೇಟಾವನ್ನು ಒದಗಿಸುತ್ತದೆ. ಅವುಗಳಲ್ಲಿ ಒಂದು 185 ರೂಯ ಪ್ಲಾನ್. ಈ ಪ್ಲಾನ್ ಅಡಿಯಲ್ಲಿ ಕಂಪನಿ ಕಡಿಮೆ ದರದಲ್ಲಿ ಪ್ರತಿದಿನ 2 ಜಿಬಿ ಡೇಟಾ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಜಿಯೋದ 185 ರೂ. ಪ್ಲಾನ್ : 
28 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್ , 185 ರೂ.ಗೆ ಲಭ್ಯವಿದೆ. ಇಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಸಿಗುತ್ತದೆ.  ಅಂದರೆ, ಈ ಯೋಜನೆಯಲ್ಲಿ ಒಟ್ಟು, 56 ಜಿಬಿ ಡೇಟಾ ಲಭ್ಯವಿರುತ್ತದೆ. ಇದರೊಂದಿಗೆ, ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಸೌಲಭ್ಯವಿರುತ್ತದೆ. ಅಲ್ಲದೆ, ಜಿಯೋ ಟಿವಿ (JIO TV) , ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿಯ ಉಚಿತ ಚಂದಾದಾರಿಕೆ ಕೂಡಾ ಸಿಗಲಿದೆ. 


ಇದನ್ನೂ ಓದಿ : Samsung Galaxy Z Fold3 5G ಸ್ಮಾರ್ಟ್‌ಫೋನ್ ಮೇಲೆ 7000 ರೂ.ವರೆಗೆ ಡಿಸ್ಕೌಂಟ್


ಜಿಯೋದ 155 ರೂ. ಪ್ಲಾನ್ : 
ದಿನಕ್ಕೆ ಕೇವಲ 1 ಜಿಬಿ ಡೇಟಾ ಅಗತ್ಯವಿದ್ದರೆ, ಜಿಯೋದ (Jio) ರೂ 155 ಯೋಜನೆಯನ್ನು ಬಳಸಿಕೊಳ್ಳಬಹುದು. ಇದು 28 ದಿನಗಳ ವ್ಯಾಲಿಡಿಟಿಯನ್ನು ಸಹ ಹೊಂದಿರುತ್ತದೆ. ಅಂದರೆ, ಈ ಯೋಜನೆಯಲ್ಲಿ ನೀವು ಒಂದು ತಿಂಗಳಲ್ಲಿ 28 GB ಡೇಟಾವನ್ನು ಪಡೆಯಬಹುದು.  ಇದರೊಂದಿಗೆ, ಅನಿಯಮಿತ ಕರೆ ಮತ್ತು 100 SMS ಪ್ರತಿದಿನ ಲಭ್ಯವಿರುತ್ತದೆ. ಜಿಯೋ ಟಿವಿ, ಜಿಯೋ ಸಿನಿಮಾ (Jio Movies), ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಕೂಡ ಉಚಿತ ಚಂದಾದಾರಿಕೆಯನ್ನು ಪಡೆಯುತ್ತದೆ.


ಜಿಯೋದ ಅಗ್ಗದ ಯೋಜನೆ :
ಜಿಯೋದ ಅಗ್ಗದ ಯೋಜನೆ (Jio cheapest plan) ಕೂಡ ಬಹಳ ಸಹಕಾರಿಯಾಗಲಿದೆ. ಈ ಪ್ಲಾನ್ ನ ವ್ಯಾಲಿಡಿಟಿ  14 ದಿನಗಳವರೆಗೆ ಇರುತ್ತದೆ. ಇದರಲ್ಲಿ  ಪ್ರತಿದಿನ 100 MB ಡೇಟಾ ಸಿಗಲಿದೆ. ಇದರೊಂದಿಗೆ ಅನಿಯಮಿತ ಕರೆ ಕೂಡ ಇದೆ. ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಕೂಡ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. 


ಇದನ್ನೂ ಓದಿ : Book vaccination Slot on WhatsApp: ವ್ಯಾಕ್ಸಿನ್ ಗಾಗಿ ಇನ್ಮುಂದೆ WhatsApp ಮೇಲೂ ಸ್ಲಾಟ್ ಬುಕ್ ಮಾಡಬಹುದು, ಈ ರೀತಿ ನಿಮ್ಮ ಸರ್ಟಿಫಿಕೆಟ್ ಡೌನ್ಲೋಡ್ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ