Jio ₹175 Plan Benefits: ಭಾರತದ ಅತಿದೊಡ್ಡ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ನಾಯಕತ್ವದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೊಮ್ಮೆ ಕೈಗೆಟುವ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಜಿಯೋ ₹175 ಪ್ಲಾನ್​ನಲ್ಲಿ ಗ್ರಾಹಕರಿಗೆ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ ಓಟಿಟಿ  ಪ್ರಯೋಜನಗಳು ಕೂಡ ಉಚಿತವಾಗಿ ಲಭ್ಯವಿದೆ.  


COMMERCIAL BREAK
SCROLL TO CONTINUE READING

ಜಿಯೋ ₹175 ಪ್ರಿಪೇಯ್ಡ್ ಯೋಜನೆ (Jio ₹175 Prepaid Plan) : 
ರಿಲಯನ್ಸ್ ಜಿಯೋ (Reliance Jio) ತನ್ನ ಬಳಕೆದಾರರಿಗಾಗಿ ₹175 ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜೊತೆಗೆ 12 ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಸ್ಟ್ರೀಮಿಂಗ್, ಬ್ರೌಸಿಂಗ್ ಮತ್ತು ಇತರ ಆನ್‌ಲೈನ್ ಕೆಲಸಗಳಿಗಾಗಿ ಹೆಚ್ಚಿನ ಡೇಟಾವನ್ನು ಬಯಸುವವರಿಗೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದ್ದು, ಹೆಚ್ಚು ಕರೆ ಮಾಡದ ಅಥವಾ ಸಂದೇಶಗಳನ್ನು ಬಳಸದ ಗ್ರಾಹಕರಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿ ಆಗಿದೆ. 


ಇದನ್ನೂ ಓದಿ- ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards


ಜಿಯೋದ ₹175 ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು (Jio ₹175 Prepaid Plan Benefits): 
ಜಿಯೋದ ₹175 ಪ್ರಿಪೇಯ್ಡ್ ಯೋಜನೆಯು (Jio ₹175 Prepaid Plan) 28 ದಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಒಟ್ಟು 10 ಜಿಬಿವರೆಗೆ ಹೈ ಸ್ಪೀಡ್ ಡೇಟಾ ಪ್ರಯೋಜನ ಲಭ್ಯವಿದೆ. ಡೇಟಾ ಮುಗಿದ ಬಳಿಕ  64 Kbps ನಲ್ಲಿ ಅನಿಯಮಿತ ಡೇಟಾ ಪ್ರಯೋಜನವನ್ನೂ ಪಡೆಯಬಹುದು. 


ಜಿಯೋದ ₹175 ಪ್ರಿಪೇಯ್ಡ್ ಯೋಜನೆಯಲ್ಲಿ ಓಟಿಟಿ ಪ್ರಯೋಜನಗಳು: 
ಇದರಲ್ಲಿ, ಜಿಯೋ ಸಿನಿಮಾ ಚಂದಾದಾರಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಈ ರಿಚಾರ್ಜ್ ಯೋಜನೆಯ  ಪ್ರಮುಖ ವೈಶಿಷ್ಟ್ಯವೆಂದರೆ  ಇದರಲ್ಲಿ JioTV ಮೊಬೈಲ್ ಅಪ್ಲಿಕೇಶನ್ ಮೂಲಕ 12 ಪ್ರೀಮಿಯಂ ಓ‌ಟಿ‌ಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಕೂಡ ಪಡೆಯಬಹುದಾಗಿದೆ.  ಅವುಗಳೆಂದರೆ... Sony LIV, ZEE5, Lionsgate Play, Discovery+, Sun NXT, Kanchha Lanka, Planet Marathi, Chaupal, DocuBay, EPIC ON ಮತ್ತು Hoichoi.
  
ಇದನ್ನೂ ಓದಿ- ಉತ್ತಮ ಮೈಲೇಜ್ ಜೊತೆಗೆ EV ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಕನಸಿನ ಕಾರ್


ಜಿಯೋದ ₹175 ಪ್ರಿಪೇಯ್ಡ್ ಯೋಜನೆಯನ್ನು ರೀಚಾರ್ಜ್ ಮಾಡುವುದು ಹೇಗೆ?
ಜಿಯೋದ ₹175 ಪ್ರಿಪೇಯ್ಡ್ ಯೋಜನೆ ಪ್ರಯೋಜನಗಳನ್ನು ಪಡೆಯಲು ನೀವು ಬಯಸಿದರೆ ಇದಕ್ಕಾಗಿ MyJio ಅಪ್ಲಿಕೇಶನ್ ಮೂಲಕ ಚಂದಾದಾರರಾಗಬೇಕು. ನಂತರ  ನಿಮ್ಮ ಖಾತೆಗೆ JioCinema ಪ್ರೀಮಿಯಂ ಕೂಪನ್ ಕ್ರೆಡಿಟ್ ಮಾಡಲಾಗುತ್ತದೆ. ಪ್ರೀಮಿಯಂ ವಿಷಯದೊಂದಿಗೆ ಬರುವ ಈ ಕೈಗೆಟುಕುವ ಯೋಜನೆಯೊಂದಿಗೆ, ನೀವು ಸುಲಭವಾಗಿ ಸ್ಟ್ರೀಮಿಂಗ್ ಮತ್ತು ಬ್ರೌಸಿಂಗ್ ಅನ್ನು ಆನಂದಿಸಬಹುದಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.