1.2 ಕೋಟಿ ಮನೆಗಳೊಂದಿಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತೀಯರ ಮನೆಗಳನ್ನು ಇನ್ನಷ್ಟು ವೇಗವಾಗಿ ಡಿಜಿಟೈಸ್ ಮಾಡುವ ಉದ್ದೇಶದಿಂದ ಮತ್ತು ಭಾರತವನ್ನು  ಡಿಜಿಟಲ್ ಸಮುದಾಯವಾಗಿ ಮಾರ್ಪಡಿಸುವ ಉದ್ದೇಶದಿಂದ ಜಿಯೋದಿಂದ ಈ ಭರವಸೆಯ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ಮನೆಗಳಲ್ಲಿ ಈ ಸಂಪರ್ಕ ಪಡೆಯುವುದಕ್ಕೆ ಉತ್ತೇಜನ ದೊರೆಯುತ್ತದೆ. ಈಗಾಗಲೇ ಕೈಗೆಟುಕುವ ಬೆಲೆಯಲ್ಲಿ ಇರುವ ಜಿಯೋಏರ್ ಫೈಬರ್ ಪ್ಲಾನ್ ಗಳ ಜೊತೆಗೆ ಶೇಕಡಾ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಫ್ರೀಡಂ ಆಫರ್ ಜೊತೆಗೆ ಹೊಸ ಜಿಯೋಏರ್ ಫೈಬರ್ ಬಳಕೆದಾರರು ಶೇ 30ರಷ್ಟು ರಿಯಾಯಿತಿಯನ್ನು ಹೊಸ ಸಂಪರ್ಕವನ್ನು 1000 ರೂಪಾಯಿಯ ಇನ್ ಸ್ಟಲೇಷನ್ ಶುಲ್ಕದ ಮನ್ನಾದ ಮೂಲಕ ಪಡೆಯುತ್ತಾರೆ. ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಜುಲೈ 26ರಿಂದ ಆಗಸ್ಟ್ 15ನೇ ತಾರೀಕಿನ ಮಧ್ಯೆ ಇರುತ್ತದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ : ಅಪ್ಪ ನಿವೃತ್ತಿಯಾಗ್ತಿದ್ದಂತೆ ಮಗ ಫೀಲ್ಡ್‌ʼಗಿಳಿಯಲು ರೆಡಿ... ಈ ಟೂರ್ನಿ ಮೂಲಕ ದ್ರಾವಿಡ್‌ ಪುತ್ರ ಕ್ರಿಕೆಟ್‌ʼಗೆ ಭರ್ಜರಿ ಎಂಟ್ರಿ


ಇನ್ನು ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇದೆಯಾ? ಅದು ಬಹಳ ಸರಳ. Jio.com ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನಿಮಗಿರುವ ಆಸಕ್ತಿಯನ್ನು ತಿಳಿಸಿ ಅಥವಾ 60008-60008 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಜಿಯೋದಿಂದ ಸ್ಥಿರ ನಿಸ್ತಂತು (ವೈರ್ ಲೆಸ್) ಕೊಡುಗೆ ಏರ್ ಫೈಬರ್ ಅನ್ನು ಕಳೆದ ವರ್ಷ ಗಣೇಶ ಚತುರ್ಥಿಗೆ ಪರಿಚಯಿಸಲಾಯಿತು.


ಜಿಯೋದಿಂದ 5ಜಿ ಸ್ಟ್ಯಾಂಡ್ ಅಲೋನ್ ಸಂಪರ್ಕ ಸೇವೆಗಳನ್ನು ನಿಯೋಜಿಸಲಾಗಿದೆ.  5ಜಿ ಸ್ಥಿರ ನಿಸ್ತಂತು ಸಂಪರ್ಕವನ್ನು ಒದಗಿಸುವುದಕ್ಕೆ ಮೀಸಲಿಟ್ಟ ನೆಟ್ ವರ್ಕ್ ಬಳಕೆ ಮಾಡುತ್ತಿದೆ. ನೆಟ್ ವರ್ಕ್ ಇಕ್ಕಟ್ಟಾಗುವುದನ್ನು ನಿರ್ವಹಿಸುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಆದರೂ ಏರ್ ಫೈಬರ್ ನ ಸರಾಸರಿ ಬಳಕೆದಾರರು ಒಂದು ತಿಂಗಳಿಗೆ 400 ಜಿಬಿ ಡೇಟಾ ಬಳಸುತ್ತಾರೆ.


ಏನಿದು ಜಿಯೋಏರ್ ಫೈಬರ್?
ಯಾವುದೇ ತಂತಿ ಇಲ್ಲದೆ ಫೈಬರ್ ರೀತಿ ವೇಗವನ್ನು ಗಾಳಿಯ ಮೂಲಕವೇ ಒದಗಿಸುತ್ತದೆ ಏರ್ ಫೈಬರ್. ಬಳಕೆದಾರರು ಪ್ಲಗ್ ಹಾಕಿ, ಆನ್ ಮಾಡಿದರೆ ಆಯಿತು. ಇಷ್ಟು ಮಾಡಿದಲ್ಲಿ ತಮ್ಮ ಮನೆಯಲ್ಲಿ ವೈಯಕ್ತಿಕವಾ ಹಾಟ್ ಸ್ಪಾಟ್ ಅನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಂತಾಗುತ್ತದೆ.


ಇದನ್ನು ಓದಿ : ಯುವ ಪಡೆ ಹೃದಯವನ್ನ ತಲ್ಲಣಗೊಳಿಸುತ್ತಿದೆ ತಮನ್ನಾ ಸೊಗಸು..! ಫೋಟೋಸ್‌ ಇಲ್ಲಿವೆ


ಜಿಯೋಫೈಬರ್ ಸ್ಥಿರ ನಿಸ್ತಂತು ಸಂಪರ್ಕ ಪರಿಹಾರವಾಗಿದ್ದು, ಇದರಿಂದ ಯಾವುದೇ ಅಡೆತಡೆಯಿಲ್ಲದೆ 1 ಜಿಬಿಪಿಎಸ್ ತನಕದ ಹೈ- ಸ್ಪೀಡ್ ಸಂಪರ್ಕ ಮನೆ ಮತ್ತು ಕಚೇರಿಗಳಿಗೆ ದೊರೆಯುತ್ತದೆ . ಏಕಕಾಲಕ್ಕೆ ಹಲವು ಸಾಧನಗಳನ್ನು ಬಳಸಬಹುದು. ಸ್ಮಾರ್ಟ್ ಫೋನ್, ಪರ್ಸನಲ್ ಕಂಪ್ಯೂಟರ್ ಗಳು, ಟ್ಯಾಬ್ಲೆಟ್, ಸ್ಮಾರ್ಟ್ ಟೀವಿಗಳು, ಮತ್ತು ಇದರ ಜತೆಗೆ ಸೆಟ್ ಟಾಪ್ ಬಾಕ್ಸ್ ಗಳನ್ನು ಸಹ ಏಕಕಾಲಕ್ಕೆ ಸಂಪರ್ಕ ಕೊಡಬಹುದು, ಅದು ಕೂಡ ಇಂಟರ್ ನೆಟ್ ವೇಗದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸಾಧ್ಯವಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.