ನವದೆಹಲಿ :  Jio Cheapest Plan: ರಿಲಯನ್ಸ್ ಜಿಯೋ ಇದುವರೆಗಿನ ಅತ್ಯಂತ ಅಗ್ಗದ ಪ್ಲಾನ್ ಪ್ರಾರಂಭಿಸಿದೆ. ಜಿಯೋ ನೀಡುವ ಪ್ಲಾನ್ ಗೆ ಪಾವತಿಸಬೇಕಾಗಿರುವುದು ಕೇವಲ 1 ರೂ (one rupee plan). ಈ ಉತ್ತಮ ಯೋಜನೆಯನ್ನು ವಿಶೇಷವಾಗಿ My Jio ಅಪ್ಲಿಕೇಶನ್‌ನಲ್ಲಿ ಪಟ್ಟಿ ಮಾಡಲಾಗಿದೆ. ವೆಬ್‌ನಲ್ಲಿ ನೋಡಿದರೆ,  ಈ ಪ್ಲಾನ್ ಬಗ್ಗೆ ಮಾಹಿತಿ ಕಾಣಿಸುವುದಿಲ್ಲ. ಇದನ್ನು ವ್ಯಾಲ್ಯೂ ಪ್ಯಾಕ್ ನ ಇತರ ಪ್ಯಾಕ್‌ಗಳಲ್ಲಿ ಇರಿಸಲಾಗಿದೆ. ಜಿಯೋದ  1 ರೂ . ಯೋಜನೆಯ ಪ್ರಯೋಜನಗಳ (benefits of one rupee plan) ಬಗ್ಗೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಜಿಯೋ  1 ರೂ. ಪ್ಲಾನ್ : 
ಸಿಮ್ (SIM) ಅನ್ನು ಸಕ್ರಿಯವಾಗಿಡಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯಲ್ಲಿ ಯಾವುದೇ ಕರೆ ಮತ್ತು SMS ಸೌಲಭ್ಯ ಇರುವುದಿಲ್ಲ. 1 ರೂ. ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಪ್ಲಾನ್ ನಲ್ಲಿ  100MB ಡೇಟಾವನ್ನು ಸಿಗುತ್ತದೆ. ಡೇಟಾ ಮುಗಿದ ನಂತರ ಇಂಟರ್ನೆಟ್ ಸ್ಪೀಡ್ 60kbpsಗೆ ಇಳಿಯುತ್ತದೆ. 


ದುಬಾರಿಯಾಯಿತು Amazon Prime ಚಂದಾದಾರಿಕೆ, ಹೊಸ ಪ್ಲಾನ್ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ


ಭಾರತದ ಅಗ್ಗದ ಯೋಜನೆ :
ಜಿಯೋದ 1 ರೂ. ಪ್ಲಾನ್, ದೇಶದ ಅತ್ಯಂತ ಅಗ್ಗದ ಯೋಜನೆಯಾಗಿದೆ (Jio Cheapest Plan). ಜಿಯೋ ಹೊರತುಪಡಿಸಿ, ಯಾವುದೇ ಟೆಲಿಕಾಂ ಕಂಪನಿಯು ಕೂಡಾ ಒಂದು ರೂಪಾಯಿ ಪ್ಲಾನ್ ನೀಡುತ್ತಿಲ್ಲ.  


ಜಿಯೋ  10 ರೂ ಮತ್ತು  20 ರೂ ಯೋಜನೆ :
ಜಿಯೋ (Jio)10 ಮತ್ತು 20 ರೂಪಾಯಿಗಳ ಅಗ್ಗದ ಯೋಜನೆಗಳನ್ನು ಸಹ ಹೊಂದಿದೆ. 10 ರೂಪಾಯಿ ಪ್ಲಾನ್ ನಲ್ಲಿ   7.47 ರ ಟಾಕ್-ಟೈಮ್ ಅನಿಯಮಿತ ಮಾನ್ಯತೆಯೊಂದಿಗೆ ಲಭ್ಯವಿದೆ. ಇನ್ನು 20 ರೂ. ಪ್ಲಾನ್ ನಲ್ಲಿ 14.95 ರೂ.  ಟಾಕ್ ಟೈಮ್ ಅನಿಯಮಿತ ಮಾನ್ಯತೆಯೊಂದಿಗೆ ಲಭ್ಯವಿರುತ್ತದೆ.


ಇದನ್ನೂ ಓದಿ : ಉಚಿತವಾಗಿ Netflix, Amazon Prime, Disney+Hotstar ಬೇಕೇ?: ಹಾಗಾದರೆ ಈ ಕೆಲಸ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.