Jio Republic Day Offer: ಭಾರತದ ಟೆಲಿ ಜಗತ್ತಿನಲ್ಲಿ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಹೆಸರು ಮಾಡಿರುವ ರಿಲಯನ್ಸ್ ಜಿಯೋ, ಗಣರಾಜ್ಯೋತ್ಸವದ ಪ್ರಯುಕ್ತ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ.  ರಿಲಯನ್ಸ್ ಜಿಯೋ ತನ್ನ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಗಣರಾಜ್ಯೋತ್ಸವದ ಕೊಡುಗೆಯನ್ನು ಪರಿಚಯಿಸಿದ್ದು ಈ ಆಫರ್ ಅಡಿಯಲ್ಲಿ, 2999 ರೂ.ಗಳನ್ನು ರೀಚಾರ್ಜ್ ಮಾಡಿದರೆ, ಗ್ರಾಹಕರು ರೂ.3 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಕೂಪನ್‌ಗಳನ್ನು ಪಡೆಯುತ್ತಾರೆ. ಈ ಕೂಪನ್‌ಗಳನ್ನು ಶಾಪಿಂಗ್, ಪ್ರಯಾಣ ಮತ್ತು ಆಹಾರದ ಬಿಲ್‌ಗಳನ್ನು ಪಾವತಿಸಲು ಬಳಸಬಹುದು. ಗ್ರಾಹಕರು ಜಿಯೋ ಯೋಜನೆಯನ್ನು ರೀಚಾರ್ಜ್ ಮಾಡಿದ ತಕ್ಷಣ, ಅವರು ಸ್ವೀಕರಿಸುವ ಕೂಪನ್‌ಗಳು ತಕ್ಷಣವೇ MyJio ಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.  


COMMERCIAL BREAK
SCROLL TO CONTINUE READING

ಹೌದು, ರಿಲಯನ್ಸ್ ಜಿಯೋ ರಿಪಬ್ಲಿಕ್ ಡೇ ಆಫರ್ ಅಡಿಯಲ್ಲಿ  2999 ರೂ. ಯೋಜನೆಯ ಮೇಲೆ ಸಾಕಷ್ಟು ಹೆಚ್ಚಿನ ಪ್ರಯೋಜನಗಳನ್ನು ಪ್ರಕಟಿಸಿದೆ. ಉದಾಹರಣೆಗೆ, ಕಳೆದ ವರ್ಷ ನ್ಯೂ ಇಯರ್ ಕೊಡುಗೆಯಲ್ಲಿ, ಗ್ರಾಹಕರು ಹೆಚ್ಚಿನ ಸೇವೆಯನ್ನು ಪಡೆಯಲಿದ್ದಾರೆ. ಆದಾಗ್ಯೂ, ಈ ಕೊಡುಗೆಯು ಜನವರಿ 15 ರಿಂದ ಜನವರಿ 31, 2024 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ . ಹಾಗಿದ್ದರೆ, ಗಣರಾಜ್ಯೋತ್ಸವ 2024 ರ ಈ ಯೋಜನೆಯೊಂದಿಗೆ ಲಭ್ಯವಿರುವ ವಿಶೇಷ ಪ್ರಯೋಜನಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- Gadget Repair Guide: ಸ್ಮಾರ್ಟ್ ಫೋನ್ ನಿಂದ ಹಿಡಿದು ಸಿಲಿಂಗ್ ಫ್ಯಾನ್ ವರೆಗೆ ಎಲ್ಲವನ್ನೂ ಮನೆಯಲ್ಲಿಯೇ ಈ ರೀತಿ ಸರಿಪಡಿಸಿ!


ರಿಲಯನ್ಸ್ ಜಿಯೋ ರಿಪಬ್ಲಿಕ್ ಡೇ ಆಫರ್:
ರಿಲಯನ್ಸ್ ಜಿಯೋದ 2999 ರೂ. ಯೋಜನೆ ವರ್ಷದ ಯೋಜನೆ. ಇದರ ಮಾನ್ಯತೆ ಒಂದು ವರ್ಷ ಎಂದರೆ 365 ದಿನಗಳವರೆಗ್ ಇರುತ್ತದೆ. ಇದರಲ್ಲಿರುವ ಪ್ರಯೋಜನಗಳೆಂದರೆ- 
* ಈ ಯೋಜನೆಯಲ್ಲಿ ಪ್ರತಿದಿನ 2.5GB ಹೈ-ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 100 ಉಚಿತ ಎಸ್ಎಂಎಸ್ ಸೌಲಭ್ಯಗಳು ಲಭ್ಯವಿವೆ. 
* ಈ ಯೋಜನೆಯು ಅನಿಯಮಿತ 5G ಡೇಟಾವನ್ನು ಸಹ ಒಳಗೊಂಡಿದೆ
* ಇದಲ್ಲದೆ, ಇದರಲ್ಲಿ ಇನ್ನೂ ಹಲವು ಪ್ರಯೋಜನಗಳು ಕೂಡ ಲಭ್ಯವಿವೆ. 


ಇದನ್ನೂ ಓದಿ- ಫೋನ್ ಚಾರ್ಜರ್ ಬಿಳಿ ಅಥವಾ ಕಪ್ಪು ಬಣ್ಣದ್ದೇ ಯಾಕಿರುತ್ತದೆ ? ಇಲ್ಲಿದೆ ಉತ್ತರ


ಈ ಆಫರ್‌ನೊಂದಿಗೆ, Jio ನಿಮಗೆ ಹಲವಾರು ಬ್ರಾಂಡ್ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. ಅವುಗಳೆಂದರೆ- 
Ajio ನಿಂದ ಶಾಪಿಂಗ್‌ನಲ್ಲಿ ರಿಯಾಯಿತಿ:- 

2499ರೂ.ಗಿಂತ ಹೆಚ್ಚಿನ ಖರೀದಿಗಳ ಮೇಲೆ 500 ರೂ.ವರೆಗೆ ರಿಯಾಯಿತಿ ಕೂಪನ್. 


Tira ನಿಂದ ವಿಮಾನ ಟಿಕೆಟ್‌ಗಳನ್ನು ಬುಕಿಂಗ್‌ನಲ್ಲಿ ಕ್ಯಾಶ್‌ಬ್ಯಾಕ್, 1000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಖರೀದಿಗಳ ಮೇಲೆ 30% ರಿಯಾಯಿತಿ ಕೂಪನ್.


Ixigo ನಿಂದ ಪ್ರಯಾಣ ಪ್ಯಾಕೇಜ್‌ಗಳ ಮೇಲೆ ರಿಯಾಯಿತಿ


Swiggy ಇಂದ ಆರ್ಡರ್ ಮಾಡುವಾಗ ರಿಯಾಯಿತಿ ಕೂಪನ್‌ಗಳು


ಇದಲ್ಲದೆ, ರಿಲಯನ್ಸ್ ಡಿಜಿಟಲ್ ನಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ವಿಶೇಷ ಕೊಡುಗೆಗಳ ಪ್ರಯೋಜನಗಳು ಲಭ್ಯವಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.