Cheapest Jio Plan: ಒಟಿಟಿ ವೇದಿಕೆಗಳ ಇಂದಿನ ಕಾಲದಲ್ಲಿ ಮೊಬೈಲ್ ಬಳಕೆದಾರರು ರೀಚಾರ್ಜ್ ಪ್ಲಾನ್ ನಲ್ಲಿ ಡೇಟಾ ಮತ್ತು ಕರೆ ಸೌಲಭ್ಯದ ಜೊತೆಗೆ ಉಚಿತ ಓಟಿಟಿ ವೇದಿಕೆಗಳ ಚಂದಾದಾರಿಕೆಗಳಿಗಾಗಿ ಕೂಡ ಹುಡುಕಾಟ ನಡೆಸುತ್ತಿದ್ದಾರೆ. ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಕೆಲವೇ ಯೋಜನೆಗಳ ಅಡಿಯಲ್ಲಿ ಉಚಿತ ಚಂದಾದಾರಿಯನ್ನು ನೀಡುತ್ತವೆ. ಇನ್ನೊಂದೆಡೆ ಓಟಿಟಿ ಪ್ರಯೋಜನಗಳೊಂದಿಗೆ ಬರುವ ಯೋಜನೆಗಳು ಕೂಡ ತುಂಬಾ ದುಬಾರಿಯಾಗಿವೆ. ಒಂದು ವೇಳೆ ಉಚಿತ ಓಟಿಟಿ ವೇದಿಕೆಯ ಚಂದದಾರಿಕೆ ನೀಡಿದರು ಕೂಡ ಇತರ ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತದೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಜಿಯೋ ಟೆಲಿಕಾಂ ಕಂಪನಿಯ ಪ್ಲಾನ್ ನಲ್ಲಿ ನಿಮಗೆ ಒಂದಲ್ಲ-ಎರಡಲ್ಲ ಒಟ್ಟು 3 ಟಾಪ್ ಓಟಿಟಿ ವೇದಿಕೆಗಳ ಉಚಿತ ಚಂದದಾರಿಕೆಯನ್ನು ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಜಿಯೋದ ಈ ಯೋಜನೆಯಲ್ಲಿ, ಬಳಕೆದಾರರು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಏಕಕಾಲದಲ್ಲಿ ಪಡೆಯಬಹುದು. ಈ ಯೋಜನೆಯ ಬೆಲೆ ತುಂಬಾ ಹೆಚ್ಚು ಎಂದು ನೀವು ಭಾವಿಸಿದ್ದರೆ, ನಿಮ್ಮ ಗ್ರಹಿಕೆ ತಪ್ಪಾಗಿದೆ. ಜಿಯೋದ ಈ ಯೋಜನೆಯ ಬೆಲೆ 400 ರೂ.ಗಿಂತ ಕಡಿಮೆಯಾಗಿದೆ. OTT ಜೊತೆಗೆ, ಈ ಯೋಜನೆಯು ಬಳಕೆದಾರರಿಗೆ ಡೇಟಾ ಮತ್ತು ಕರೆಗಳಂತಹ ಹಲವು ಟೆಲಿಕಾಂ ಪ್ರಯೋಜನಗಳನ್ನು ಸಹ ಒದಗಿಸುತ್ತದೆ. 


ಜಿಯೋ ಕಂಪನಿ ನೀಡುತ್ತಿರುವ ಈ ಯೋಜನೆಯ ಬೆಲೆ 399 ರೂ. ಇದು ಕಂಪನಿಯ ಪೋಸ್ಟ್‌ಪೇಯ್ಡ್ ಯೋಜನೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಪ್ರಯೋಜನಗಳ ಕುರಿತು ಹೇಳುವುದಾದರೆ, ಜಿಯೋದಿಂದ ಚಲಾಯಿಸಲಾಗುತಿರುವ ಈ ರೂ 399 ಪೋಸ್ಟ್ಪೇಯ್ಡ್ ಯೋಜನೆಯು ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ನೀಡುತ್ತದೆ, ಇದು FUP ಮಿತಿಯಿಲ್ಲದೆ ಬರುತ್ತದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯನ್ನು ತೆಗೆದುಕೊಂಡ ನಂತರ, ನೀವು ಯಾವುದೇ ನೆಟ್‌ವರ್ಕ್‌ನಲ್ಲಿ ಒಂದು ತಿಂಗಳವರೆಗೆ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಆನಂದಿಸಬಹುದು. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಂತೆಯೇ. ಕರೆ ಮಾಡುವುದರ ಹೊರತಾಗಿ, ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 100 ಉಚಿತ SMS ಅನ್ನು ಸಹ ಪಡೆಯುತ್ತಾರೆ. 


ಇದನ್ನೂ ಓದಿ-BSNL Cheapest Plan: 200 ಕ್ಕಿಂತ ಕಡಿಮೆ ಬೆಲೆಯಲ್ಲಿ 100 ದಿನಗಳವರೆಗೆ ಅದ್ಭುತ ಪ್ರಯೋಜನ


ಈ ಯೋಜನೆಯ ಅಡಿ ಸಿಗುತ್ತಿರುವ ಡೇಟಾ ಸೌಲಭ್ಯದ ಕುರಿತು ಹೇಳುವುದಾದರೆ, ಈ ಪೋಸ್ಟ್‌ಪೇಯ್ಡ್ ಯೋಜನೆಯು ಗ್ರಾಹಕರಿಗೆ ಒಂದು ತಿಂಗಳವರೆಗೆ 75GB ಡೇಟಾ ಪ್ರವೇಶವನ್ನು ನೀಡುತ್ತದೆ. ಡೇಟಾ ಕೋಟಾ ಮುಗಿದ ನಂತರ, ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 1 ಜಿಬಿಗೆ 10 ರೂ.ಗಳನ್ನು ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ. ಹೆಚ್ಚುವರಿಯಾಗಿ, ಈ ಯೋಜನೆಯು 200 GB ವರೆಗೆ ಡೇಟಾ ರೋಲ್‌ಓವರ್ ಅನ್ನು ಸಹ ಹೊಂದಿದೆ.


ಇದನ್ನೂ ಓದಿ-ಇನ್ನು WhatsApp ಕಾಲ್ ಮಾಡಿದರೂ ಹಣ ಪಾವತಿಸಬೇಕು.! ಸರ್ಕಾರದ ಕ್ರಮದ ಹಿಂದಿದೆ ಈ ಕಾರಣ


OTT ಚಂದಾದಾರಿಕೆ
ಈ ಯೋಜನೆಯ ಪ್ರಮುಖ ಪ್ರಯೋಜನಗಳ ಕುರಿತು ಹೇಳುವುದಾದರೆ, ಈ ಯೋಜನೆಯಲ್ಲಿ ಬಳಕೆದಾರರು ಏಕಕಾಲದಲ್ಲಿ ಮೂರು OTT ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ OTT ಪ್ಲಾಟ್‌ಫಾರ್ಮ್‌ಗಳಾಗಿರುವ Netflix, Amazon Prime ಮತ್ತು Disney + Hotstar. ಚಂದಾದಾರಿಕೆ ಇದರಲ್ಲಿ ಲಭ್ಯವಿದೆ.


ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.