ಜಿಯೋ ಫೈಬರ್ ಹೊಸ ಮನರಂಜನಾ ಪ್ಲಾನ್ಸ್: ಜಿಯೋ ಫೈಬರ್ ತನ್ನ ಗ್ರಾಹಕರಿಗಾಗಿ ಹೊಸ ಮನರಂಜನಾ ಯೋಜನೆಗಳನ್ನು ಪರಿಚಯಿಸಿದೆ. ನೀವೂ  ಸಹ ಜಿಯೋ ಫೈಬರ್  ಚಂದಾದಾರರಾಗಿದ್ದರೆ 999+ ಪ್ಲಾನ್ ಖರೀದಿಸಿದಾಗ ಮಾತ್ರ ಓವರ್-ದ-ಟಾಪ್  ಅಂದರೆ ಒಟಿಟಿ ಚಂದಾದಾರಿಕೆಯನ್ನು ಪದೆಯಬಹ್ದುದು. ಆದರೆ ನಮ್ಮಲ್ಲಿ ಬಹುತೇಕ ಜನರಿಗೆ ಈ ಮೊತ್ತ ಬಲು ದುಬಾರಿ ಆಗಿದೆ. ಅಂತಹವರನ್ನು ಗಮನದಲ್ಲಿಟ್ಟುಕೊಂಡು ಜಿಯೋ ಫೈಬರ್ ಹೊಸ ಮನರಂಜನಾ ಪ್ಲಾನ್ಸ್ ತಂದಿದೆ. ಈ ಯೋಜನೆಗಳು 399 ರೂ. ಮತ್ತು 699 ರೂ. ಮೌಲ್ಯದ ಪ್ಲಾನ್‌ಗಳ ವಿಸ್ತರಣೆಯಾಗಿದ್ದು, ಇದು ಬಳಕೆದಾರರಿಗೆ 30 Mbps ಮತ್ತು 100 Mbps ಡೌನ್‌ಲೋಡ್/ಅಪ್‌ಲೋಡ್ ವೇಗವನ್ನು ನೀಡುತ್ತದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಬಳಕೆದಾರರಿಗಾಗಿ ಹೊಸ ಮನರಂಜನಾ ಪ್ಲಾನ್ ಪರಿಚಯಿಸಿದ ಜಿಯೋ ಫೈಬರ್ :
ಜಿಯೋ ಫೈಬರ್ ಬಳಕೆದಾರರಿಗಾಗಿ ಎರಡು ಹೊಸ ಮನರಂಜನಾ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳೆಂದರೆ  ಎಂಟರ್ಟೈನ್ಮೆಂಟ್ ಮತ್ತು ಎಂಟರ್ಟೈನ್ಮೆಂಟ್ ಪ್ಲಸ್ ಪ್ಲಾನ್‌ಗಳು. ಈ ಎರಡೂ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಯೋಣ...


ಇದನ್ನೂ ಓದಿ- ಎಸಿ, ಫ್ಯಾನ್ ಬಳಸಿಯೂ ವಿದ್ಯುತ್ ಬಿಲ್ ಕಡಿಮೆ ಮಾಡಲು ಸಿಂಪಲ್ ಟಿಪ್ಸ್


ಜಿಯೋ ಫೈಬರ್ ಎಂಟರ್ಟೈನ್ಮೆಂಟ್ ಪ್ಲಾನ್ಸ್:
ಈ ಹೊಸ ಎಂಟರ್ಟೈನ್ಮೆಂಟ್  ಮತ್ತು ಎಂಟರ್ಟೈನ್ಮೆಂಟ್ ಪ್ಲಸ್ ಪ್ಲಾನ್‌ಗಳು 399 ರೂ. ಮತ್ತು 699 ರೂ. ಮೌಲ್ಯದ ಪ್ಲಾನ್‌ಗಳ ವಿಸ್ತರಣೆಯಾಗಿವೆ. ನೀವು ಮೊದಲಿಗೆ ಈ ಯೋಜನೆಗಳಲ್ಲಿ ಯಾವುದಾದರೂ ಒಂದನ್ನು ಖರೀದಿಸಬೇಕು. ನಂತರ ತಿಂಗಳಿಗೆ 100 ರೂ. ಮೌಲ್ಯದ ಮನರಂಜನಾ ಪ್ಲಾನ್ಸ್ ತೆಗೆದುಕೊಳ್ಳಬೇಕು. ಇದರೊಂದಿಗೆ ನಿಮಗೆ ಆರು ಒಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆ ಲಭ್ಯವಾಗಲಿದೆ. 


ಏನಿದು ಜಿಯೋ ಫೈಬರ್ ಎಂಟರ್ಟೈನ್ಮೆಂಟ್ ಪ್ಲಸ್ ಪ್ಲಾನ್?
ಬಳಕೆದಾರರು ಇನ್ನೂ ಹೆಚ್ಚಿನ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಬಯಸಿದರೆ  ಅದಕ್ಕಾಗಿ  ಜಿಯೋ ಫೈಬರ್ ಎಂಟರ್ಟೈನ್ಮೆಂಟ್ ಪ್ಲಸ್ ಪ್ಲಾನ್ ನಿಮಗೆ ಸಹಾಯಕವಾಗಿದೆ. ಇದಕ್ಕಾಗಿ ತಿಂಗಳಿಗೆ 200 ರೂ. ಪಾವತಿಸಬೇಕಾಗುತ್ತದೆ. ಈ ಪ್ಲಾನ್ ನಲ್ಲಿ  ಬಳಕೆದಾರರು 14 ಒಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಈ 14 ಅಪ್ಲಿಕೇಶನ್‌ಗಳು  ಡಿಸ್ನಿ+ಹಾಟ್‌ಸ್ಟಾರ್, ಜೀ5, ಸೋನಿಲೈವ್, ವೂಟ್, ಸನ್ನೆಕ್ಸ್ಟ್,  ಡಿಸ್ಕವರ್ +,  ವೂಟ್ ಕಿಡ್ಸ್, ಜಿಯೋ ಸಿನಿಮಾ ಗಳನ್ನೂ ಕೂಡ ಒಳಗೊಂಡಿದೆ. 


ಇದನ್ನೂ ಓದಿ- ಹತ್ತು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಒಳ್ಳೆಯ ಅವಕಾಶ


ಗಮನಾರ್ಹವಾಗಿ ಈ ಯೋಜನೆಗಳು ಜಿಯೋ ಫೈಬರ್  ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಲಭ್ಯವಾಗಲಿದೆ. ನೀವೂ ಪ್ರಿಪೇಯ್ಡ್ ಜಿಯೋ ಫೈಬರ್ ಗ್ರಾಹಕರಾಗಿದ್ದರೆ ಮೊದಲಿಗೆ ಪೋಸ್ಟ್‌ಪೇಯ್ಡ್ ಗ್ರಾಹಕರಾಗಿ ಪರಿವರ್ತಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದಲ್ಲದೆ ನೀವು ಕಂಪನಿಯಿಂದ ಮನರಂಜನಾ ಯೋಜನೆಯನ್ನು ಖರೀದಿಸುತ್ತಿದ್ದರೆ, ನೀವು Jio ಸೆಟ್-ಟಾಪ್ ಬಾಕ್ಸ್  ಅನ್ನು ಸಹ ಕ್ಲೈಮ್ ಮಾಡಬಹುದಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.