Jio Phone ಬಳಕೆದಾರರಿಗೆ ಗುಡ್ ನ್ಯೂಸ್; ಈ ಪ್ಲಾನ್ನಲ್ಲಿ ಸಿಗಲಿದೆ 504 GB ಉಚಿತ Data!
ಜಿಯೋ ಪರಿಚಯಿಸಿರುವ 1,001 ರೂ. ಪ್ಲಾನ್ ಅಳವಡಿಸಿಕೊಂಡರೆ ಜಿಯೋದಿಂದ ಜಿಯೋ ನೆಟ್ವರ್ಕ್ಗೆ ಉಚಿತ ಅನಿಯಮಿತ ಕರೆಯನ್ನು ನೀಡುತ್ತಿದೆ. ಪ್ರತಿದಿನ 100 ಎಸ್ಎಮ್ಎಸ್ ಉಚಿತವಾಗಿ ಸಿಗಲಿದೆ.
ನವದೆಹಲಿ: ಜಿಯೋಫೋನ್ ಬಳಕೆದಾರರಿಗಾಗಿ ರಿಲಾಯನ್ಸ್ ಜಿಯೋ ಹೊಸ ವಾರ್ಷಿಕ ಪ್ಲಾನ್ ಪರಿಚಯಿಸಿದೆ. ನೂತನ ಪ್ಲಾನ್ ಮೂಲಕ 504GB ಡೇಟಾ ಸೌಲಭ್ಯವನ್ನು ನೀಡುತ್ತಿದೆ. 336 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‍ನಲ್ಲಿ ಅನ್ಲಿಮಿಟೆಡ್ ನೆಟ್ ಕಾಲಿಂಗ್ ಮಾಡುವ ಆಯ್ಕೆಯನ್ನು ನೀಡಿದೆ. ಅದರ ಜೊತೆಗೆ ಜಿಯೋಫೋನ್ ಹಲವಾರು ವಾರ್ಷಿಕ ಪ್ಲಾನ್ ಪರಿಚಯಿಸಿದೆ. 1,001 ರೂ.ನಿಂದ ಪ್ಲಾನ್ ಆರಂಭಗೊಳ್ಳುತ್ತದೆ.
Airtel, Jio, Vi, BSNL ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ
ಜಿಯೋ (Jio) ಪರಿಚಯಿಸಿರುವ 1,001 ರೂ. ಪ್ಲಾನ್ ಅಳವಡಿಸಿಕೊಂಡರೆ ಜಿಯೋದಿಂದ ಜಿಯೋ ನೆಟ್ವರ್ಕ್ಗೆ ಉಚಿತ ಅನಿಯಮಿತ ಕರೆಯನ್ನು ನೀಡುತ್ತಿದೆ. ಪ್ರತಿದಿನ 100 ಎಸ್ಎಮ್ಎಸ್ ಉಚಿತವಾಗಿ ಸಿಗಲಿದೆ. ಅದರ ಜೊತೆಗೆ 4G ನೆಟ್ವರ್ಕ್ನಡಿಯಲ್ಲಿ 49GB ಡೇಟಾ ನೀಡುತ್ತಿದೆ. ವಾರ್ಷಿಕ ಡೇಟಾ ಇದಾಗಿದ್ದು, ಪ್ರತಿದಿನ 150ಎಂಬಿ ಬಳಸಬಹುದಾಗಿದೆ. ಬೇರೆ ನೆಟ್ವರ್ಕ್ ಕರೆ ಮೇಲೆ 12,000 ನಿಮಿಷಗಳ ಎಫ್ಯುಪಿ ನೀಡುತ್ತಿದೆ.
ಇದಲ್ಲದೆ ಜಿಯೋಫೋನ್ (Jio Phone) ತನ್ನ ಬಳಕೆದಾರಿಗಾಗಿ 1,301 ರೂ.ವಿನ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಮೂಲಕ 4G ನೆಟ್ವರ್ಕ್ನಡಿಯಲ್ಲಿ 164GB ವಾರ್ಷಿಕ ಡೇಟಾ ನೀಡುತ್ತಿದೆ. ಪ್ರತಿದಿನ 500 MB ಡೇಟಾ ಬಳಕೆಗೆ ಸಿಗಲಿದೆ. ಬೇರೆ ನೆಟ್ವರ್ಕ್ ಕರೆಗಳ ಮೇಲೆ 12,000 ನಿಮಿಷಗಳ ಎಫ್ಯುಪಿ ನೀಡುತ್ತಿದೆ. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್ ಉಚಿತವಾಗಿದೆ.
Airtel, VI, Jio ಜಬರ್ದಸ್ತ್ ಪ್ರಿಪೇಯ್ಡ್ offers, ಪ್ರತಿದಿನ ಪಡೆಯಿರಿ 2GBಗಿಂತ ಹೆಚ್ಚಿನ DATA
1501 ರೂ. ಬೆಲೆಯ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ನಲ್ಲಿ 504 GB ಡೇಟಾ ನೀಡುತ್ತಿದೆ. 336 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ಮೂಲಕ ಪ್ರತಿದಿನ 1.5GB ಡೇಟಾ ಬಳಕೆಗೆ ಸಿಗಲಿದೆ. ಇತರೆ ನೆಟ್ವರ್ಕ್ ಕರೆಗಳ ಮೇಲೆ 1200 ಎಫ್ಯುಪಿ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ದಿನಕ್ಕೆ 100 SMS ಉಚಿತವಾಗಿದೆ.