Jio Offers: 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಈ ಎಲ್ಲಾ ಸೌಲಭ್ಯ
ಜಿಯೋನ 4 ಜಿ ಡಾಟಾ ವೋಚರ್ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಯನ್ನು ಹೊಂದಿದ್ದು, ಇದು 11ರೂ., 21 ರೂ., 51 ರೂ., ಮತ್ತು 101 ರೂ.ಗಳ ಯೋಜನೆಯನ್ನು ಹೊಂದಿದೆ. ಯಾವ ಯೋಜನೆಯಲ್ಲಿ ಗ್ರಾಹಕರಿಗೆ ಯಾವ ಪ್ರಯೋಜನಗಳನ್ನು ನೀಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಬೆಂಗಳೂರು: ಕರೋನಾವೈರಸ್ ಹಿನ್ನಲೆಯಲ್ಲಿ ಇತ್ತೀಜಿನ ದಿನಗಳಲ್ಲಿ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಜನರ ಮೊಬೈಲ್ ಡೇಟಾದ ಬಳಕೆ ಹೆಚ್ಚಾಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ (Reliance Jio) ಗ್ರಾಹಕರಿಗೆ ಅಗ್ಗದ 4 ಜಿ ಡಾಟಾ ವೋಚರ್‌ಗಳನ್ನು ನೀಡುತ್ತದೆ. ಕಂಪನಿಯ ಅಗ್ಗದ ಡೇಟಾ ವೋಚರ್‌ನ ಆರಂಭಿಕ ಬೆಲೆ 11 ರೂಪಾಯಿಗಳು. ಜಿಯೋನ 4 ಜಿ ಡಾಟಾ ವೋಚರ್‌ನಲ್ಲಿ ಅತ್ಯಂತ ಕಡಿಮೆ ಬೆಲೆಯ ಅನೇಕ ರೀಚಾರ್ಜ್ ಯೋಜನೆಗಳಿವೆ. ಇದರಲ್ಲಿ 11ರೂ., 21 ರೂ., 51 ರೂ., ಮತ್ತು 101 ರೂ.ಗಳ ಯೋಜನೆಯನ್ನು ಹೊಂದಿದೆ. ಯಾವ ಯೋಜನೆಯಲ್ಲಿ ಗ್ರಾಹಕರಿಗೆ ಯಾವ ಪ್ರಯೋಜನಗಳನ್ನು ನೀಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
11 ರೂಪಾಯಿಗಳ ಕಡಿಮೆ ರೀಚಾರ್ಜ್ ಯೋಜನೆಯ ಬಗ್ಗೆ ಹೇಳುವುದಾದರೆ ಅದರಲ್ಲಿ 800MB ಡಾಟಾ ನೀಡಲಾಗುತ್ತದೆ. ಇದು ಮಾತ್ರವಲ್ಲದೆ 75 ನಿಮಿಷಗಳ ಉಚಿತ ಕರೆ ಸೌಲಭ್ಯವನ್ನೂ ಸಹ ನೀಡಲಾಗುವುದು, ಇದನ್ನು ಜಿಯೋದಿಂದ ನಾನ್ ಜಿಯೋಗೆ ಬಳಸಬಹುದು. ಅಂದರೆ ಜಿಯೋದಿಂದ ಇತರ ಯಾವುದೇ ನೆಟ್‌ವರ್ಕ್‌ಗೆ ಉಚಿತವಾಗಿ ಕರೆ ಮಾಡಬಹುದು.
21 ರೂಪಾಯಿಗೆ 2 ಜಿಬಿ ಡಾಟಾ, ಉಚಿತ ಕರೆ ಕೂಡ ಲಭ್ಯ..
ಜಿಯೋ (Jio) ಗ್ರಾಹಕರಿಗೆ 21 ರೂ.ಗಳಿಗೆ ಅನ್ಲಿಮಿಟೆಡ್ 2 ಜಿಬಿಯನ್ನು ಡಾಟಾ ಸೌಲಭ್ಯವನ್ನು ನೀಡಲಾಗುತ್ತದೆ. ಮಾತ್ರವಲ್ಲದೆ 200 ನಿಮಿಷಗಳ ಉಚಿತ ಕರೆ ಸೌಲಭ್ಯವನ್ನೂ ಸಹ ನೀಡಲಾಗುವುದು, ಇದನ್ನು ಜಿಯೋದಿಂದ ನಾನ್ ಜಿಯೋಗೆ ಬಳಸಬಹುದು.
Jio 5G: ಜಿಯೋ ಮೂಲಕ ನಾವು ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸುತ್ತೇವೆ- ಮುಖೇಶ್ ಅಂಬಾನಿ
6 ಜಿಬಿ ಡೇಟಾ 51 ರೂ.ಗಳಿಗೆ ಲಭ್ಯ:
ಜಿಯೋದ 51 ರೂ. ಯೋಜನೆಯಲ್ಲಿ ಗ್ರಾಹಕರಿಗೆ 6 ಜಿಬಿ ಡಾಟಾ ನೀಡಲಾಗುತ್ತದೆ. ಇದು ಮಾತ್ರವಲ್ಲ, ಕರೆ ಮಾಡಲು ಜಿಯೋ ಟು ನಾನ್ ಜಿಯೋಗೆ 500 ನಿಮಿಷಗಳನ್ನು ಸಹ ನೀಡಲಾಗುವುದು. ಅಂದರೆ ಜಿಯೋ ಬಳಕೆದಾರರು ಇತರ ನೆಟ್‌ವರ್ಕ್‌ಗಳಿಗೆ 500 ನಿಮಿಷಗಳ ಉಚಿತ ಕರೆ ಸೌಲಭ್ಯ ಪಡೆಯುತ್ತಾರೆ.
3 ನೂತನ 'All in One' ಪ್ಲಾನ್ ಬಿಡುಗಡೆಗೊಳಿಸಿದೆ ಈ ಟೆಲಿಕಾಂ ಕಂಪನಿ, 336 ದಿನಗಳ ಸಿಂಧುತ್ವ
101 ರೂಪಾಯಿ ಯೋಜನೆಯಲ್ಲೂ ಹಲವು ಲಾಭ:
ಕಂಪನಿಯ ಈ ಯೋಜನೆಯಲ್ಲಿ 12 ಜಿಬಿ ಡಾಟಾ ಸೌಲಭ್ಯ ನೀಡಲಾಗಿದೆ. ವಿಶೇಷವೆಂದರೆ 1000 ನಿಮಿಷಗಳ ಕರೆ ಸೌಲಭ್ಯಗಳನ್ನೂ ನೀಡಲಾಗುತ್ತದೆ. ಗ್ರಾಹಕರು ಈ ಕರೆ ಸೌಲಭ್ಯವನ್ನು ಜಿಯೋದಿಂದ ನಾನ್ ಜಿಯೋ ಅಂದರೆ ಜಿಯೋದಿಂದ ಬೇರೆ ನೆಟ್‌ವರ್ಕ್‌ಗಳಿಗೆ ಬಳಸಬಹುದು.