ಓಲಾ ಕಂಪನಿಯ ಒತ್ತಡ ಹೆಚ್ಚಿಸಿದೆ ಈ ಎಲೆಕ್ಟ್ರಿಕ್ ಸ್ಕೂಟರ್: ಕೇವಲ ₹999 ಬುಕ್ಕಿಂಗ್ ಮಾಡಿ
ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಬೇಡಿಕೆ ಇದೆ. ಅದರಲ್ಲೂ ಓಲಾ ಕಂಪನಿಯ ಇವಿಗಳು ಅತಿ ಹೆಚ್ಚು ಬೇಡಿಕೆ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಾಗಿವೆ. ಆದರೆ, ಇದೀಗ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇದು ಓಲಾದ ಒತ್ತಡವನ್ನು ಹೆಚ್ಚಿಸಿವೆ.
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್: ಪ್ರಸ್ತುತ ದೇಶದಲ್ಲಿ ದ್ವಿಚಕ್ರ ವಾಹನಗಳಿಗೆ ಭಾರೀ ಬೇಡಿಕೆ ಇದೆ. ಅದರಲ್ಲೂ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿ ಹೊರ ಹೊಮ್ಮಿದೆ. ಓಲಾ ಕಂಪನಿಯು ತಿಂಗಳಿಗೆ 18 ರಿಂದ 20,000 ಯುನಿಟ್‌ಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯ Ola S1, Ola S1 Pro ಮತ್ತು Ola S1 Air ಇವಿಗಳಿಗೆ ದೇಶದಲ್ಲಿ ತುಂಬಾ ಬೇಡಿಕೆ ಇದೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಸ್ಕೂಟರ್ ಓಲಾ ಕಂಪನಿಯ ಒತ್ತಡವನ್ನು ಹೆಚ್ಚಿಸಿದೆ. ಕೇವಲ ₹999 ಬುಕ್ಕಿಂಗ್ ಮಾಡಬಹುದಾದ ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 15 ದಿನಗಳಲ್ಲಿ ಬರೋಬ್ಬರಿ 18 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಯಾವುದು? ಅದರ ವಿಶೇಷತೆ ಏನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್:
ಹೌದು, ಸದ್ಯ ಇವಿ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಓಲಾ ಕಂಪನಿಯ ಟೆನ್ಶನ್ ಹೆಚ್ಚಾಗುವಂತೆ ಮಾಡಿರುವುದು ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್. ಇ-ಬೈಕ್‌ಗಳನ್ನು ತಯಾರಿಸುವ ಭಾರತದ ಸ್ವಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಜಾಯ್ ತಮ್ಮ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ತಿಂಗಳು ಜರುಗಿದ ಆಟೋ ಎಕ್ಸ್‌ಪೋ 2023 ರಲ್ಲಿ ಪರಿಚಯಿಸಿತು. ವಿಶೇಷವೆಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ ₹999 ಬುಕ್ಕಿಂಗ್ ಮಾಡಬಹುದಾಗಿದ್ದು, 15 ದಿನಗಳಲ್ಲಿ 18,600 ಬುಕಿಂಗ್‌ಗಳನ್ನು ಸ್ವೀಕರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ- ಫಾರ್ಚುನರ್‌ಗೆ ಟಕ್ಕರ್ ನೀಡಲು ಕೈಗೆಟುಕುವ ಬೆಲೆಯಲ್ಲಿ ಹೊಸ ಎಸ್‌ಯುವಿ ಬಿಡುಗಡೆ ಮಾಡಿದ ಮಹೀಂದ್ರಾ
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ:
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ನ ಎಕ್ಸ್ ಶೋ ರೂಂ ಬೆಲೆ 1.35 ಲಕ್ಷ ರೂ.ಗಳು. ಇದರ ಬುಕಿಂಗ್ ಅನ್ನು ಜನವರಿ 22 ರಿಂದ ಆರಂಭವಾಗಿತ್ತು. ಫೆಬ್ರವರಿ 9 ರಿಂದ, ಕಂಪನಿಯು ಎರಡನೇ ಹಂತದ ಬುಕಿಂಗ್ ಅನ್ನು ಸಹ ಪ್ರಾರಂಭಿಸಿದೆ. ಮಾರ್ಚ್‌ನಲ್ಲಿ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿತರಣೆ ಆರಂಭವಾಗಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ-ವೈಶಿಷ್ಟ್ಯ:
* ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸದೊಂದಿಗೆ ಬರುತ್ತದೆ.
* ಆದಾಗ್ಯೂ, ಸ್ಕೂಟರ್‌ನ ದೊಡ್ಡ ವೈಶಿಷ್ಟ್ಯವೆಂದರೆ ಅದನ್ನು ತಯಾರಿಸಲು ಬಳಸುವ ವಸ್ತು. ಈ ಸ್ಕೂಟರ್ ಅನ್ನು ತಯಾರಿಸಲು ಬಳಸಲಾದ ವಸ್ತುವು ಡೈಸೈಕ್ಲೋಪೆಂಟಡೀನ್ ಎಂದು ಕಂಪನಿಯು ಹೇಳಿಕೊಂಡಿದೆ.
* ಕಂಪನಿಯು ಆಟೋ ಎಕ್ಸ್‌ಪೋದಲ್ಲಿ ಈ ವಸ್ತುವಿನ ಶಕ್ತಿಯನ್ನು ಕೂಡ ಪ್ರದರ್ಶಿಸಲಾಯಿತು.
ಇದನ್ನೂ ಓದಿ- Oil Price: ಪೆಟ್ರೋಲಿಯಂ ಉದ್ಯಮದಲ್ಲಿ ಹೊಸ ಧಮಾಕಾ ಮಾಡಲು ಹೊರಟ ಜಿಯೋ, ರೈತರಿಗೆ ಬಂಪರ್ ಲಾಭ!
ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ವೈಶಿಷ್ಟ್ಯ:
>> ಈ ಸ್ಕೂಟರ್ 2.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
>> ಇದು ಸಂಪೂರ್ಣ ಚಾರ್ಜ್‌ನಲ್ಲಿ 100ಕಿಮೀ ವ್ಯಾಪ್ತಿಯನ್ನು ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
>> ಸ್ಕೂಟರ್ ಕ್ಷಣಾರ್ಧದಲ್ಲಿ 40 ಕಿಮೀ ವೇಗವನ್ನು ಪಡೆಯುತ್ತದೆ.
>> ಇದು ಟ್ವಿನ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸಹ ಹೊಂದಿದೆ. >> ನೀವು ಬ್ಲೂಟೂತ್ ಮೂಲಕ ಸಹ ಸ್ಕೂಟರ್ ಅನ್ನು ಸಂಪರ್ಕಿಸಬಹುದು.
>> ಇದಲ್ಲದೆ, ನೀವು ಎಲ್ಲಿ ಬೇಕಾದರೂ ಕುಳಿತು ಸ್ಕೂಟರ್‌ನ ಬ್ಯಾಟರಿ ಸ್ಥಿತಿಯನ್ನು ಪರಿಶೀಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.