ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸುವ ಸುಲಭ ವಿಧಾನ: ನಮ್ಮ ಸ್ನೇಹಿತರು ಮತ್ತು ಸಂಬಂಧಿಕರು ನಮ್ಮಿಂದ ಎಷ್ಟೇ ದೂರದಲ್ಲಿದ್ದರೂ, ಚಿಟಿಕೆಯಲ್ಲಿ ನಮ್ಮನ್ನು ಅವರಿಗೆ ಹತ್ತಿರವಾಗಿಸುವ ಒಂದು ಅಪ್ಲಿಕೇಶನ್ ಇದ್ದರೆ ಅದು ವಾಟ್ಸಾಪ್ ಎಂದರೆ ತಪ್ಪಾಗಲಾರದು. ಹಾಗಾಗಿಯೇ ಇದೊಂದು ಜನಪ್ರಿಯ ಮೆಸೇಜಿಂಗ್ ಆಪ್ ಆಗಿ ಗುರುತಿಸಿಕೊಂಡಿದೆ. ವಾಟ್ಸಾಪ್‌ ಪ್ರಾಥಮಿಕವಾಗಿ ಚಾಟಿಂಗ್ ಅಪ್ಲಿಕೇಶನ್ ಆಗಿದ್ದರೂ, ಇದು ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಿಡಿಯೋ ಕರೆಗಳನ್ನೂ ಮಾಡಬಹುದು. ಅಷ್ಟೇ ಅಲ್ಲದೆ, ನೀವು ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಹಂಚಿಕೊಳ್ಳಬಹುದು. ಆದರೆ, ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾದ ಫೋಟೋಗಳು ಮತ್ತು ವೀಡಿಯೊಗಳು ಸಂಕುಚಿತಗೊಳ್ಳುತ್ತವೆ.  ಆದರೆ, ಒಂದು ಸಣ್ಣ ಟ್ರಿಕ್ ಅನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ನೀವು ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 


COMMERCIAL BREAK
SCROLL TO CONTINUE READING

HD ಗುಣಮಟ್ಟದಲ್ಲಿ  ವಾಟ್ಸಾಪ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ  :
ವಾಟ್ಸಾಪ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವುದು ತುಂಬಾ ಸುಲಭ. ಆದರೆ ಈ ಅಪ್ಲಿಕೇಶನ್ ಮೂಲಕ ಕಳುಹಿಸಲಾದ ಫೋಟೋಗಳು ಸಂಕುಚಿತಗೊಳ್ಳುತ್ತವೆ ಎಂಬ ಕಾರಣಕ್ಕೆ ಜನರು ವಾಟ್ಸಾಪ್ ಬದಲಿಗೆ ತಮ್ಮ ಮಾಧ್ಯಮ ಫೈಲ್‌ಗಳನ್ನು ಮೇಲ್ ಅಥವಾ ಯಾವುದೇ ಇತರ ಪ್ಲಾಟ್‌ಫಾರ್ಮ್ ಮೂಲಕ ಹಂಚಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ನಂಬಲಾಗಿದೆ. ಆದರೆ, ವಾಟ್ಸಾಪ್‌ನ ಸೆಟ್ಟಿಂಗ್ಸ್ ಗೆ ಹೋಗುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಟ್ರಿಕ್ ಬಗ್ಗೆ ತಿಳಿಯಲು ಮುಂದೆ ಓದಿ...


ಇದನ್ನೂ ಓದಿ- 16 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ WhatsApp!


ಸೆಟ್ಟಿಂಗ್‌ಗಳಲ್ಲಿ ಈ ಬದಲಾವಣೆಗಳನ್ನು ಮಾಡಿ:
ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟಂಗಳ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ಟ್ರಿಕ್ ಆಗಿದೆ. ಇದನ್ನು ಅಳವಡಿಸಿಕೊಳ್ಳಲು, ನೀವು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆರೆಯಬೇಕು ಮತ್ತು ನಂತರ ನೀವು ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕು. ಸೆಟ್ಟಿಂಗ್‌ಗಳಲ್ಲಿ, ನೀವು 'ಸಂಗ್ರಹಣೆ ಮತ್ತು ಡೇಟಾ' ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡುವುದರಿಂದ, ನಿಮ್ಮ ಪರದೆಯ ಮೇಲೆ ಕಾಣಿಸಿಕೊಳ್ಳುವ ಮೆನು, 'ಮೀಡಿಯಾ ಅಪ್‌ಲೋಡ್ ಗುಣಮಟ್ಟ' ಕೆಳಭಾಗದಲ್ಲಿ ಗೋಚರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ 'ಆಟೋ', ಬೆಸ್ಟ್ ಕ್ವಾಲಿಟಿ ಮತ್ತು 'ಡೇಟಾ ಸೇವರ್' ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ. 


ಇದನ್ನೂ ಓದಿ- Whatsapp Alert : Whatsapp ಬಳಕೆದಾರರೇ ಎಚ್ಚರ..! ವ್ಯಾಟ್ಸ್ ಆಪ್ ಕರೆ ಮೂಲಕ ಮಾಡಲಾಗುತ್ತದೆ ವಂಚನೆ


ಸೆಟ್ಟಿಂಗ್‌ಗಳಲ್ಲಿ ನೀವು 'ಬೆಸ್ಟ್ ಕ್ವಾಲಿಟಿ' ಅನ್ನು ಆಯ್ಕೆ ಮಾಡಿದರೆ, ನೀವು ಹಂಚಿಕೊಳ್ಳುವ ಚಿತ್ರಗಳು ಮತ್ತು ವೀಡಿಯೊಗಳು ಸಂಕುಚಿತಗೊಳ್ಳುವುದಿಲ್ಲ. ಬದಲಿಗೆ ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋ-ವಿಡಿಯೋ ಕಳುಹಿಸಲು ಇದರಿಂದ ಸಾಧ್ಯವಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.