Business News In Kannada: ದೆಹಲಿ ಅಥವಾ ಮುಂಬೈ ಆಗಿರಲಿ, ಇಂದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವವರಿಗೆ ಅನೇಕ ಉತ್ತಮ ಆಯ್ಕೆಗಳು ಲಭ್ಯವಿದೆ. ಇ-ವಾಹನಗಳ ಈ ಯುಗದಲ್ಲಿ ಉತ್ತಮ ವೈಶಿಷ್ಟ್ಯಗಳು ಮತ್ತು ಬೆಲೆಗಳೊಂದಿಗೆ ಅನೇಕ ಕಂಪನಿಗಳು ಕ್ಷೇತ್ರಕ್ಕೆ ಲಗ್ಗೆ ಇಡುತ್ತಿವೆ. ಅವುಗಳಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯ ಇ-ಸ್ಕೂಟರ್‌ಗಳೂ ಶಾಮೀಲಾಗಿವೆ. ಸುಮಾರು ಒಂದು ವರ್ಷದ ಹಿಂದೆ, ಈ ಕಂಪನಿಯು ದೇಶದಲ್ಲಿ ಇ-ಸ್ಕೂಟರ್‌ಗಳ ಅತಿದೊಡ್ಡ ಮಾರಾಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ಸ್ಪರ್ಧೆಯ ಯುಗದಲ್ಲಿ ಓಲಾ, ಎಥರ್, ಬಜಾಜ್ ಮತ್ತು ಓಕಿನಾವಾ ಕಂಪನಿಗಳ ಪ್ರವೇಶದೊಂದಿಗೆ ಮಾರುಕಟ್ಟೆಯ ಆಟ ಇಂದು ಬದಲಾಗಿದ್ದು, ಹೀರೋ ಮಾರಾಟದ ವಿಷಯದಲ್ಲಿ ಹಿಂದಕ್ಕೆ ಜಾರಿದೆ. ಆದರೆ ಕಂಪನಿ ಮತ್ತೆ ಕಮ್ ಬ್ಯಾಕ್ ಮಾಡಲು ಶ್ರಮಿಸುತ್ತಿದೆ.  ಇದೇ ಹಿನ್ನೆಲೆ ಪ್ರಸ್ತುತ, ಹೀರೋ ಇಂದು ಎಲೆಕ್ಟ್ರಿಕ್ ಆಟ್ರಿಯಾ LX ಮತ್ತು Flash LX ಸೇರಿದಂತೆ ಹಲವು ಉತ್ತಮ ಸ್ಕೂಟರ್‌ಗಳನ್ನು ಹೊಂದಿದೆ. ಇಂದು ನಾವು ಈ ಎರಡು ಮಾದರಿಗಳ ಫೈನಾನ್ಸ್ ಆಪ್ಶನ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. 10,000 ರೂಪಾಯಿಗಳ ಡಿಪಿ ಮಾಡುವ ಮೂಲಕ ನೀವು ಅದನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು (Technology News In Kannada).


COMMERCIAL BREAK
SCROLL TO CONTINUE READING

ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಆಟ್ರಿಯಾ lx ಲೋನ್ DP EMI
Hero Electric Atria LX ನ ಎಕ್ಸ್ ಶೋ ರೂಂ ಬೆಲೆ 77690 ರೂ. ಇದರ ಬ್ಯಾಟರಿ ಕ್ಷಮತೆ  ಒಂದು ಪೂರ್ಣ ಚಾರ್ಜ್‌ನಲ್ಲಿ 85 ಕಿಮೀ. ಗಳಷ್ಟಿದೆ. ಆದರೆ ಇದರ ಟಾಪ್ ಸ್ಪೀಡ್ ಸಾಕಷ್ಟು ಕಡಿಮೆ ಅಂದರೆ ಗಂಟೆಗೆ 25 ಕಿ.ಮೀ. ಇದೇ. ನೀವು 10,000 ರೂ ಡೌನ್‌ಪೇಮೆಂಟ್‌ನೊಂದಿಗೆ ಈ ಮಾದರಿಗೆ ಹಣಕಾಸು ಒದಗಿಸಿದರೆ, ನೀವು ರೂ 67690 ಸಾಲವನ್ನು ಪಡೆಯುತ್ತೀರಿ. ಸಾಲ ಮರುಪಾವತಿ ಅವಧಿಯು 2 ವರ್ಷಗಳು ಆಗಿದ್ದು, ನೀವು 9% ದರದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಲೆಕ್ಕಾಚಾರದೊಂದಿಗೆ, ನೀವು ಮುಂದಿನ 24 ತಿಂಗಳವರೆಗೆ 3092 ರೂಪಾಯಿಗಳನ್ನು EMI ಆಗಿ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ-ಮಾರುಕಟ್ಟೆಗೆ ಇಳಿದಿದೆ ಅಗ್ಗದ ಬಜಾಜ್ ಪಲ್ಸರ್ N150, ಬೆಲೆ ಕೇವಲ ಇಷ್ಟೇ..!


ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಫ್ಲಾಶ್ lx ಲೋನ್ DP EMI
Flash LX ನ ಎಕ್ಸ್ ಶೋ ರೂಂ ಬೆಲೆ 59640 ರೂ. ಗಂಟೆಗೆ 25 ಕಿಲೋಮೀಟರ್ ವೇಗದಲ್ಲಿ ಒಂದೇ ಚಾರ್ಜ್‌ನಲ್ಲಿ 85 ಕಿಲೋಮೀಟರ್‌ಗಳವರೆಗೆ ರೆಂಜ್ ನೀಡುತ್ತದೆ. ನೀವು 10000 ರೂ ಡೌನ್‌ಪೇಮೆಂಟ್ ಮಾಡಿದ ನಂತರ Flash LX ಫೈನಾನ್ಸ್ ಅನ್ನು ಪಡೆದರೆ, ನೀವು ರೂ 49640 ಸಾಲವನ್ನು ಪಡೆಯುತ್ತೀರಿ. ಸಾಲದ ಅವಧಿಯು 2 ವರ್ಷಗಳು ಮತ್ತು ಬಡ್ಡಿದರವು ಅದೇ 9% ಆಗಿರುತ್ತದೆ. ಈ ರೀತಿಯಾಗಿ, ನೀವು ಮುಂದಿನ ಎರಡು ವರ್ಷಗಳವರೆಗೆ ಪ್ರತಿ ತಿಂಗಳು ರೂ 2268 ರ ಮಾಸಿಕ EMI ಅನ್ನು ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ-WhatsApp-Telegram ನೀವು ಬಳಸುತ್ತಿದ್ದರೆ ಈ ಸುದ್ದಿ ತಪ್ಪದೆ ಓದಿ... ಇಲ್ಡಿದ್ರೆ ಲಾಸ್ ಗ್ಯಾರಂಟಿ!


(ಹಕ್ಕುತ್ಯಾಗ: ಈ ಇ-ಸ್ಕೂಟರ್‌ಗಳಿಗೆ ಫೈನಾನ್ಸ್ ಮಾಡಿಸುವ ಮುನ್ನ ನೀವು ನಿಮ್ಮ ನಗರದ ಹತ್ತಿರದ ಡೀಲರ್‌ ಅನ್ನು ಸಂಪರ್ಕಿಸುವ ಮೂಲಕ ಅಥವಾ ಅವರಿಗೆ ಕರೆ ಮಾಡುವ ಮೂಲಕ ನೀವು ಡೌನ್‌ಪೇಮೆಂಟ್ ಮತ್ತು EMI ವಿವರಗಳನ್ನು ಪರಿಶೀಲಿಸಬೇಕು.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ