ನವದೆಹಲಿ : ಫೇಸ್‌ಬುಕ್ (Facebook) ಕೇವಲ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಮಾತ್ರ ಇರುವ ವೇದಿಕೆಯಲ್ಲ.  ಇದರಲ್ಲಿ ಜನರ ಪ್ರೊಫೈಲ್ (Profile) ಕೂಡಾ ಇರುತ್ತದೆ. ಈ ಮೂಲಕ ಒಬ್ಬ ವ್ಯಕ್ತಿಯ ಬಗ್ಗೆ ಬಹಳಷ್ಟು ಮಾಹಿತಿ ಸಂಗ್ರಹಿಸಬಹುದು. ಫೇಸ್‌ಬುಕ್ ಮೂಲಕ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಡೇಟಾ ಸೋರಿಕೆ (Data leak) ಪ್ರಕರಣಗಳು ಬೆಳಕಿಗೆ ಬಂದಿವೆ.  ನಿಮ್ಮ ದೈನಂದಿನ ಚಟುವಟಿಕೆಯ ಬಗ್ಗೆಯೂ ಫೇಸ್‌ಬುಕ್ ನಿಗಾ ಇಡುತ್ತದೆ. ನಿಮ್ಮ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗೆ ಸಾಧ್ಯವಾಗದಂತಹ ಕೆಲವು ಸುಲಭವಾದ ವಿಧಾನಗಳಿವೆ. 


COMMERCIAL BREAK
SCROLL TO CONTINUE READING

 ಫೇಸ್‌ಬುಕ್ ಅಪ್ಲಿಕೇಶನ್‌ ಸೆಟ್ಟಿಂಗ್ ನಲ್ಲಿ ಈ ರೀತಿ ಬದಲಾವಣೆ ಮಾಡಿಕೊಳ್ಳಿ : 
-ನಿಮ್ಮ ಫೇಸ್‌ಬುಕ್ (facebook) ಅಪ್ಲಿಕೇಶನ್ ನಿರ್ವಹಿಸಲು, ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ನೀವು ಹೋಗಬೇಕಾಗುತ್ತದೆ. ಸೆಟ್ಟಿಂಗ್‌ ನಲ್ಲಿ Apps ಗೆ ಹೋಗಬೇಕು .
- ಅದರ ನಂತರ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ (Smartphones) ಇನ್ ಸ್ಟಾಲ್ ಮಾಡಲಾದ ಫೇಸ್‌ಬುಕ್ ಅಪ್ಲಿಕೇಶನ್‌ಗೆ ಹೋಗಿ 
- App ಮೇಲೆ ಕ್ಲಿಕ್ ಮಾಡಿ ಮತ್ತು ಪರ್ಮಿಶನ್ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
- ಇಲ್ಲಿ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ, ಕ್ಯಾಲೆಂಡರ್, ಸಂಪರ್ಕಗಳು ಇತ್ಯಾದಿಗಳಲ್ಲಿ ಯಾವುದಕ್ಕಾದರೂ ಪರ್ಮಿಶನ್ ನಿಡಿದ್ದರೆ ಅದು ಕಾಣಿಸುತ್ತದೆ. 
-ನೀವು ಅಪ್ಲಿಕೇಶನ್‌ಗೆ ನೀಡಿದ ಅನುಮತಿಯನ್ನು ತೆಗೆದುಹಾಕಬಹುದು.  ಅದರ ನಂತರ ಫೇಸ್ ಬುಕ್ ನಿಮ್ಮ ಯಾವ ಡೇಟಾವನ್ನೂ ಕಲೆಕ್ಟ್ ಮಾಡಲು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ Xiaomi Mi 10i 5G: 108MP ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ


Facebook activity :
-ಆಪ್‌ಗೆ ಲಾಗ್ ಇನ್ ಮಾಡಿದ ನಂತರ, ಬಲಭಾಗದಲ್ಲಿರುವ ಮೂರು ಲೈನ್ ಗಳ ಮೇಲೆ ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗೆ ಹೋಗಿ .
-ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿದ ನಂತರ, ಹೊಸ ವಿಂಡೋ ತೆರೆಯುತ್ತದೆ, ಅಲ್ಲಿ ಕೆಳಗೆ ಸ್ಕ್ರಾಲ್ ಮಾಡಿದರೆ, ‘Off-Facebook Activity’ ಆಯ್ಕೆ ಕಾಣುತ್ತದೆ. 
-Off-Facebook Activity  ಮೇಲೆ ಟ್ಯಾಪ್ ಮಾಡಿ. ಟ್ಯಾಪ್ ಮಾಡಿದ ನಂತರ, ನೀವು ಫೇಸ್‌ಬುಕ್‌ನಲ್ಲಿ ಯಾವುದನ್ನು ಸ್ಕ್ರಾಲ್ ಮಾಡಿದ್ದೀರಿ ಎನ್ನುವುದು ತಿಳಿಯುತ್ತದೆ.  ಅದನ್ನು ತೆಗೆದುಹಾಕಲು, ಕೆಳಗೆ ನೀಡಲಾದ 'Clear History’ ಅನ್ನು ಟ್ಯಾಪ್ ಮಾಡಿ. 
-ಟ್ಯಾಪ್ ಮಾಡಿದ ನಂತರ, ನಿಮ್ಮ ಎಲ್ಲಾ activity ಯನ್ನು ತೆಗೆದುಹಾಕಲಾಗುತ್ತದೆ.  ಮುಂದೆ ಕೂಡಾ ನಿಮ್ಮ ಆಕ್ಟಿವಿಟಿಯನ್ನು ಫೇಸ್ ಬುಕ್ ಟ್ರ್ಯಾಕ್ ಮಾಡಬಾರದು ಎಂದಾದರೆ, ‘more options’   ಮೇಲೆ ಟ್ಯಾಪ್ ಮಾಡಿ. 
-More options’ ಟ್ಯಾಪ್ ಮಾಡಿದ ಕೂಡಲೇ ‘manage future activity’ ಆಯ್ಕೆ ಕಾಣುತ್ತದೆ. 
- ಇಲ್ಲಿ ಹೊಸ ವಿಂಡೋ ಒಪನ್ ಆಗುತ್ತದೆ. ಇಲ್ಲಿ ಮತ್ತೆ , ಕೆಳಭಾಗದಲ್ಲಿ ಮತ್ತೆ ‘manage future activity’ ಮೇಲೆ ಟ್ಯಾಪ್ ಮಾಡಿ. 
- ಹೊಸ ವಿಂಡೋದಲ್ಲಿ, Future off facebook activity ಯನ್ನು off ಮಾಡಬೇಕು. 


ಇದನ್ನೂ ಓದಿ : WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.