ಬೆಂಗಳೂರು : ಹೊಸ ತಂತ್ರಜ್ಞಾನವು ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸುತ್ತದೆ.  ಎಲ್‌ಪಿಜಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಿದ್ದಾಗ ಬಹಳಷ್ಟು ಮಂದಿ ಇಂಡಕ್ಷನ್ ಮೂಲಕ ಆಹಾರವನ್ನು ಬೇಯಿಸುವ ಪದ್ದತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಕೆಂಟ್ ತನ್ನ ಹೊಸ ಕೆಂಟ್ ಮಲ್ಟಿ ಕುಕ್ಕರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಐಷಾರಾಮಿ ಬಹು-ಅಡುಗೆ ಉಪಕರಣವು ಸಾಮಾನ್ಯ ಮನೆಗಳು, ಹಾಸ್ಟೆಲ್‌ಗಳು ಮತ್ತು ಪ್ರಯಾಣಿಕರಿಗೆ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ  ಇದುನ್ನು ಜೊತೆಯಲ್ಲಿ ಕೊಂಡೊಯ್ಯುವುದು ಕೂಡಾ ಸುಲಭ. ಕೆಂಟ್ ಮಲ್ಟಿ ಕುಕ್ಕರ್‌ನೊಂದಿಗೆ, ರುಚಿಕರವಾದ ಇಡ್ಲಿ, ಟೇಸ್ಟಿ ನೂಡಲ್ಸ್ ಇತ್ಯಾದಿಗಳನ್ನು ಬಹಳ ಸುಲಭವಾಗಿ ಮಾಡಬಹುದು. ಮಾತ್ರವಲ್ಲ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟವನ್ನು ನಿಮಿಷಗಳಲ್ಲಿ ತಯಾರಿಸಬಹುದು. 


COMMERCIAL BREAK
SCROLL TO CONTINUE READING

ನಿಮಿಷಗಳಲ್ಲಿ ತಯಾರಾಗುವುದು ಅಡುಗೆ : 
ಕೆಂಟ್ ಮಲ್ಟಿ ಕುಕ್ಕರ್ 800 ವ್ಯಾಟ್ ಹೈ-ಪವರ್ ಮೋಟರ್‌ನಿಂದ ಚಾಲಿತವಾಗಿದೆ. ಇದರಲ್ಲಿ ಸ್ಟೀಮ್, ಬಾಯ್ಲಿಂಗ್ ಮೂಲಕ ಆಹಾರವನ್ನು ತಯಾರಿಸಬಹುದು. ಮೊಟ್ಟೆಗಳನ್ನು ಬೇಯಿಸಬಹುದು. ಇಡ್ಲಿ, ನೂಡಲ್ಸ್ ಮತ್ತು ಮೊಮೊಸ್ ಮಾಡಬಹುದು. ಇದರೊಂದಿಗೆ ಸ್ಟೀಮ್ಡ್ ವೆಜಿಟೇಬಲ್ಸ್ ಮತ್ತು ಮಸಾಲಾ ಟೀ ಕೂಡ ಮಾಡಬಹುದು.


ಇದನ್ನೂ ಓದಿ : ಪೂರ್ಣ ಚಾರ್ಜ್‌ನಲ್ಲಿ 3 ದಿನ ಬಾಳಿಕೆ ಬರುವ Nokia ಸ್ಮಾರ್ಟ್‌ಫೋನ್‌ ಕೇವಲ 599 ರೂ.ಗೆ ಲಭ್ಯ


ಕುಕ್ಕರ್‌ನ ಮತ್ತೊಂದು ಆಕರ್ಷಣೆಯೆಂದರೆ, ಕೆಂಟ್ ಮಲ್ಟಿ ಕುಕ್ಕರ್ ಅನ್ನು  ತ್ವರಿತವಾಗಿ ಆಹಾರವನ್ನು  ತಯಾರಿಸುವ ಮೋಡ್‌ಗೆ ಬದಲಾಗುತ್ತದೆ. ಈ ಮೂಲಕ ಅತಿ ಕಡಿಮೆ ಸಮಯದಲ್ಲಿ ಅಡುಗೆ ಮಾಡುವುದು ಸಾಧ್ಯವಾಗುತ್ತದೆ.  ಕಡಿಮೆ ಸಮಯದಲ್ಲಿ ರುಚಿಕರವಾದ ಭಕ್ಷ್ಯಗಳನ್ನು ಬೇಯಿಸಬಹುದು.


ಬ್ಯಾಚುಲರ್ ಗಳಿಗೆ  ಬಹು ಉಪಯೋಗಿ : 
ಕೆಂಟ್ ಮಲ್ಟಿ ಕುಕ್ಕರ್  ಕಾಂಪ್ಯಾಕ್ಟ್ ಆಗಿರುತ್ತದೆ. ಇದು ಕೀಲುರಹಿತ ವಿನ್ಯಾಸವನ್ನು ಹೊಂದಿದ್ದು, ಸ್ವಚ್ಛಗೊಳಿಸುವುದು ಮತ್ತು ಉಪಯೋಗಿಸುವುದು ಸುಲಭ. ಸಣ್ಣ ಕುಟುಂಬಗಳು ಬಾಚ್ಯುಲರ್ ಗಳಿಗೆ  ಕೆಂಟ್‌ನ ಈ ಕುಕ್ಕರ್ ಹೆಚ್ಚು ಅನುಕೂಲಕರವಾಗಿದೆ. ಅಡುಗೆ ಮಾಡುವಾಗ ಗರಿಷ್ಠ ಸುರಕ್ಷತೆಯನ್ನು ಇದು ಒದಗಿಸುತ್ತದೆ.  ಕೂಲ್-ಟಚ್ ಹ್ಯಾಂಡಲ್ ಮತ್ತು  ಆಟೋ  ಟರ್ನ್-ಆಫ್ ವೈಶಿಷ್ಟ್ಯವನ್ನು ಹೊಂದಿದೆ. ಈ ಪೋರ್ಟಬಲ್ ಅಡಿಗೆ ಉಪಕರಣವು ಪಾರದರ್ಶಕ ಮುಚ್ಚಳದೊಂದಿಗೆ ಬರುತ್ತದೆ. 


ಇದನ್ನೂ ಓದಿ : ಹತ್ತು ಸಾವಿರದೊಳಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೋ


ಭಾರತದಲ್ಲಿ ಕೆಂಟ್ ಮಲ್ಟಿ ಕುಕ್ಕರ್ ಬೆಲೆ :
ಕೆಂಟ್ ಮಲ್ಟಿ ಕುಕ್ಕರ್ ಬೆಲೆ ಕೇವಲ 2,900 ರೂ. ಎಲ್ಲಾ ಪ್ರಮುಖ ಗೃಹೋಪಯೋಗಿ ಅಂಗಡಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಕುಕ್ಕರ್ ಲಭ್ಯವಿದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.