Yello Alert In Kerala - ಭಾರತದ ದಕ್ಷಿಣದ ರಾಜ್ಯವಾಗಿರುವ ಕೇರಳದಲ್ಲಿ ಧಾರಾಕಾರ ಮಳೆ ಸೂರಿಯುತ್ತಿದ್ದು, ಶುಕ್ರವಾರ ಇಲ್ಲಿನ ಒಂಬತ್ತು ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಜಾರಿಗೊಳಿಸಿದೆ. ರಾಜ್ಯದ ತಿರುವಂತನತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಈ 'ಯೆಲ್ಲೋ ಅಲರ್ಟ್' ಘೋಷಿಸಿದೆ.


COMMERCIAL BREAK
SCROLL TO CONTINUE READING

ಯೆಲ್ಲೋ ಅಲರ್ಟ್ ಎಂದರೆ 6 ರಿಂದ 11 ಸೆಂ.ಮೀ ವರೆಗಿನ ಭಾರೀ ಮಳೆ ಎಂದರ್ಥ. IMD ಪ್ರಕಾರ, ಮೇ 20 ರಿಂದ ಮೇ 22 ರವರೆಗಿನ 24 ಗಂಟೆಗಳಲ್ಲಿ ಕೇರಳದ ಒಂದು ಅಥವಾ ಎರಡು ಸ್ಥಳಗಳಲ್ಲಿ  7 ರಿಂದ 11 ಸೆಂ.ಮೀ ಗಳಷ್ಟು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಶುಕ್ರವಾರದಿಂದ ಎರಡು ದಿನಗಳ ಕಾಲ ಕೇರಳ ಮತ್ತು ಲಕ್ಷದ್ವೀಪದ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚಿನಿಂದ ಕೂಡದ ಭಾರಿ ಮಳೆಯಾಗುವ ಸಾಧ್ಯತೆಯಿದೆ.


ಇದನ್ನೂ ಓದಿ-ರಾಜ್ಯದಲ್ಲಿ 4 ದಿನ ವರುಣಾರ್ಭಟ: ರಾಜಧಾನಿಯಲ್ಲಿ ಕಟ್ಟೆಚ್ಚರ


ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ದಕ್ಷಿಣ ರಾಜ್ಯದ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿರುವುದು ಇಲ್ಲಿ ಉಲ್ಲೇಖನೀಯ. ನೈರುತ್ಯ ಮುಂಗಾರು ಈ ಬಾರಿ ಸಾಮಾನ್ಯ ದಿನಾಂಕಕ್ಕಿಂತ ಐದು ದಿನಗಳು ಮುಂಚಿತವಾಗಿ ಅಂದರೆ, ಮೇ 27 ರೊಳಗೆ ಕೇರಳ ರಾಜ್ಯಕ್ಕೆ ಪ್ರವೇಶಿಸಬಹುದು ಎಂದು ಐಎಂಡಿ ಈ ಹಿಂದೆ ಮುನ್ಸೂಚನೆ ನೀಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. 


ಇದನ್ನೂ ನೋಡಿ-Heavy Rains : ಬೆಂಗಳೂರಿನಲ್ಲಿ ಭಾರೀ ಮಳೆ : ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್!


ದೆಹಲಿ ಹವಾಮಾನ ಪರಿಸ್ಥಿತಿ
ಇದಕ್ಕೂ ಮೊದಲು ಶುಕ್ರವಾರ ದೆಹಲಿಯಲ್ಲಿ ಕನಿಷ್ಠ ತಾಪಮಾನವು 28.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ, ಇದು ಸಾಮಾನ್ಯ ತಾಪಮಾನಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಗುಡುಗು ಮತ್ತು ಮಿಂಚಿನ ವಾತಾವರಣದ ಸಾಧ್ಯತೆಯೊಂದಿಗೆ ಆಕಾಶವು ಭಾಗಶಃ ಮೋಡಗಳಿಂದ  ಕೂಡಿರಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.