ಬೆಂಗಳೂರು :ಇತ್ತೀಚಿನ ದಿನಗಳಲ್ಲಿ, ನಗರವಾಗಲೀ ಹಳ್ಳಿಯಾಗಲಿ ಪ್ರತಿ ಮನೆಯಲ್ಲಿಯೂ ಫ್ರಿಜ್ ಸಾಮಾನ್ಯವಾಗಿದೆ.ಅದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ.ಫ್ರಿಜ್ ಆಹಾರವನ್ನು ತಾಜಾವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮನೆಗಳಲ್ಲಿ ಸಿಂಗಲ್ ಡೋರ್ ಫ್ರಿಡ್ಜ್ ಗಳಿರುತ್ತವೆ.ಈ ಫ್ರಿಡ್ಜ್ ಗಳಲ್ಲಿ ವಿಶೇಷವಾದ ಬಟನ್ ಒಂದಿದೆ. ಈ ಬಟನ್ ಸಾಕಷ್ಟು ಉಪಯುಕ್ತವಾಗಿದೆ. ಆದರೆ, ಈ ಬಟನ್ ಯಾಕೆ ಇದೆ ಎನ್ನುವ ಮಾಹಿತಿ ಅನೇಕರಿಗೆ ತಿಳಿದೇ ಇರುವುದಿಲ್ಲ. 


COMMERCIAL BREAK
SCROLL TO CONTINUE READING

ವಿದ್ಯುತ್ ಉಳಿಸುತ್ತದೆ : 
ಫ್ರೀಜರ್‌ನಲ್ಲಿ ಮಂಜುಗಡ್ಡೆಯು ಸಂಗ್ರಹವಾದಾಗ, ತಂಪಾಗಿಸಲು ಹೆಚ್ಚು ಕೆಲಸ ಮಾಡುತ್ತದೆ. ಇದು insulator ರೀತಿ ಕೆಲಸ ಮಾಡುತ್ತದೆ. ಇದರಿಂದಾಗಿ ಫ್ರೀಜರ್ ಅನ್ನು ತಂಪಾಗಿರಿಸಲು ಹೆಚ್ಚು ವಿದ್ಯುತ್ ಬಳಸಲಾಗುತ್ತದೆ.ಡಿಫ್ರಾಸ್ಟಿಂಗ್ ಈ ಹೆಚ್ಚುವರಿ ಮಂಜುಗಡ್ಡೆಯನ್ನು ತೆಗೆದುಹಾಕುತ್ತದೆ. ಇದು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ. 


ಇದನ್ನೂ ಓದಿ : ಸರ್ಕಾರ ಬದಲಾಯಿಸಿದೆ ಹೊಸ ಸಿಮ್ ಕಾರ್ಡ್ ಪಡೆಯುವ ನಿಯಮ!ಇನ್ನು ಸಿಮ್ ಖರೀದಿ ಮಾಡಬೇಕಾದರೆ ಹೀಗೆ ಮಾಡಬೇಕು


ರೆಫ್ರಿಜರೇಟರ್ ಲೈಫ್ ಹೆಚ್ಚಾಗುತ್ತದೆ : 
ಮಂಜುಗಡ್ಡೆಯ ದಟ್ಟವಾದ ಪದರವು ಫ್ರೀಜರ್ ಮೋಟಾರ್ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.ಇದು ಮೋಟಾರನ್ನು ಹಾನಿಗೊಳಿಸಬಹುದು.  ಡಿಫ್ರಾಸ್ಟಿಂಗ್ ಫ್ರೀಜರ್ ಮೋಟರ್ ಮೇಲೆ ಕಡಿಮೆ ಒತ್ತಡವನ್ನು ಬೀರುತ್ತದೆ. ಅದು ರೆಫ್ರಿಜರೇಟರ್ ಲೈಫ್ ಅನ್ನು ಹೆಚ್ಚಿಸುತ್ತದೆ.


ಹೊಸ ಫ್ರಿಜ್ ನಂತೆ ಕಾರ್ಯ ನಿರ್ವಹಿಸುತ್ತದೆ : 
ಮಂಜುಗಡ್ಡೆಯ ಪದರವನ್ನು ತೆಗೆದುಹಾಕುವುದರಿಂದ ಫ್ರೀಜರ್ ತಂಪಾದ ಗಾಳಿಯನ್ನು ಹೆಚ್ಚು ಸಮವಾಗಿ ವಿತರಿಸಲು ಅನುವು ಮಾಡಿಕೊಡುತ್ತದೆ.ಇದು ನಿಮ್ಮ ಆಹಾರವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.ಮಂಜುಗಡ್ಡೆಯ ಪದರದಿಂದಾಗಿ ತಂಪಾದ ಗಾಳಿಯು ಸರಿಯಾಗಿ ಪರಿಚಲನೆಯಾಗುವುದಿಲ್ಲ. ಇದರಿಂದ ಫ್ರೀಜ್ ನ ಕೆಲವು ಭಾಗಗಳು ತಂಪಾಗಿರುತ್ತದೆ ಮತ್ತು ಕೆಲವು ಭಾಗಗಳು ಬೆಚ್ಚಗಿರುತ್ತದೆ.


ಜಾಗ ಹೆಚ್ಚು ಸಿಗುತ್ತದೆ : 
ಮಂಜುಗಡ್ಡೆಯ ಪದರವನ್ನು ತೆಗೆದುಹಾಕುವುದರಿಂದ ಫ್ರೀಜ್ನಲ್ಲಿ ಹೆಚ್ಚು ಜಾಗ ಸೃಷ್ಟಿಯಾಗುತ್ತದೆ. ಹೀಗಾಗಿ ಹೆಚ್ಚಿನ ವಸ್ತುಗಳನ್ನು ಫ್ರೀಜರ್‌ನಲ್ಲಿ ಇರಿಸಬಹುದು.


ಇದನ್ನೂ ಓದಿ : iPhone 16 Plus VS Samsung Galaxy S24 Plus: ಯಾವ ಸ್ಮಾರ್ಟ್‌ಫೋನ್ ಉತ್ತಮವಾಗಿದೆ?


ಸ್ವಚ್ಛವಾಗಿರುತ್ತದೆ : 
ಸ್ಟಿಂಗ್ ಮಾಡುವಾಗ ಫ್ರೀಜರ್ ಒಳಭಾಗವನ್ನು ಸ್ವಚ್ಛಗೊಳಿಸಬಹುದು.ಕರಗಿದ ನೀರನ್ನು ತೆಗೆಯುವಾಗ,ಫ್ರೀಜರ್ ಒಳಗೆ ಸಂಗ್ರಹವಾದ ಕೊಳೆಯನ್ನು ಸಹ ಸ್ವಚ್ಛಗೊಳಿಸಬಹುದು.ಇದು ಫ್ರೀಜರ್ ಅನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ನಿಮ್ಮ ಆಹಾರದ ಸುರಕ್ಷತೆಯನ್ನು ಹೆಚ್ಚಿಸುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.